UEFA WOMEN’S CHAMPIONSHIP: ಸ್ಪೇನ್ ಮಣಿಸಿದ ಜರ್ಮನಿ ಕ್ವಾರ್ಟರ್ ಗೆ
ಭರ್ಜರಿ ಪ್ರದರ್ಶನ ನೀಡಿದ ಏಳು ಬಾರಿಯ ಚಾಂಪಿಯನ್ ಜರ್ಮನಿ ಮಹಿಳಾ ತಂಡ 2-0 ಗೋಲುಗಳಿಂದ ಸ್ಪೇನ್ ತಂಡವನ್ನು
ಬ್ರೆಂಟ್‌ಫೋರ್ಡ್ ನಲ್ಲಿ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪರ ಕ್ಲಾರಾ ಬುಹ್ಲ್ (3ನೇ ನಿಮಿಷ) ಹಾಗೂ ಅಲೆಕ್ಸಾಂಡ್ರಾ ಪಾಪ್ (36ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು. ಈ ಗೆಲುವಿನಿಂದಿಗೆ ಜರ್ಮನಿ ಆಡಿದ ಎರಡೂ ಪಂದ್ಯಗಳಲ್ಲಿ ಜಯ ಸಾಧಿಸಿದ್ದು ಆರು ಅಂಕಗಳಿಂದ ಬಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಆರಂಭದಿಂದಲೂ ಸ್ಪೇನ್ ತಂಡದ ಮೇಲೆ ಜರ್ಮನಿ ತಂಡ ಒತ್ತಡ ಹೇರುವ ತಂತ್ರವನ್ನು ಅನುಸರಿಸಿತು. ಇದರ ಪರಿಣಾಮ ಜರ್ಮನಿ ಆರಂಭದಲ್ಲಿ ಮೇಲುಗೈ ಸಾಧಿಸಿತು. ಈ ಅವಧಿಯಲ್ಲಿ ಸ್ಪೇನ್ ತಂಡ ಎದುರಾಳಿ ಗೋಲಿಯನ್ನು ವಂಚಿಸುವಲ್ಲಿ ಸಫಲರಾದರು. ಪರಿಣಾಮ ಸ್ಪೇನ್ ಹಿನ್ನಡೆ ಅನುಭವಿಸಿತು.

ಇದೇ ಅವಧಿಯಲ್ಲಿ ಅಲೆಕ್ಸಾಂಡ್ರಾ ಪಾಪ್ 36ನೇ ನಿಮಿಷದಲ್ಲಿ ಸ್ಪೇನ್ ನ ರಕ್ಷಣಾ ವಿಭಾಗವನ್ನು ವಂಚಿಸಿ ಗೋಲು ಬಾರಿಸುವಲ್ಲಿ ಯಶಸ್ವಿಯಾಯಿತು. ಈ ಅವಧಿಯಲ್ಲಿ ಅಲೆಕ್ಸಾಂಡ್ರಾ ಪಾಪ್ ಭರ್ಜರಿ ಹೆಡರ್ ಮೂಲಕ ಗೋಲು ಬಾರಿಸಿ ಗೋಲುಗಳ ಅಂತರವನ್ನು ವೃದ್ಧಿಸಿದರು. ಪರಿಣಾಮ ಜರ್ಮನಿ 2-ಯಿಂದ ಮುನ್ನಡೆ ಸಾಧಿಸಿತು.

ಎರಡನೇ ಅವಧಿಯ ಆಟದಲ್ಲಿ ಜರ್ಮನಿ ರಕ್ಷಣಾ ಆಟಗಾರರು ಸಮಯೋಚಿತ ಆಟದ ಪ್ರದರ್ಶನ ನೀಡಿದರು. ಪರಿಣಾಮ ಸ್ಪೇನ್ ಗೋಲು ಬಾರಿಸುವ ಆಸೆ ಕೊಳ್ಳೆ ಬಿತ್ತು. ಈ ಅವಧಿಯಲ್ಲಿ ಗೋಲು ಬಾರಿಸುವ ಸ್ಪೇನ್ ಆಟಗಾರರ ಕನಸು ಫಲಿಸಲಿಲ್ಲ. ಪರಿಣಾಮ ಜರ್ಮನಿ ಗೆಲುವು ಸಾಧಿಸಿತು.
UEFA, Women’s Championship, Germany, Spain