Singapore Open: PV ಸಿಂಧು, HS ಪ್ರಣಯ್ ಗೆ ಜಯ
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಹಾಗೂ ಎಚ್.ಎಸ್ ಪ್ರಣಯ ಸಿಂಗಾಪುರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಎರಡನೇ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು ಅವರು 21-15, 21-11 ರಿಂದ ಜರ್ಮನಿಯ ಲಿಯಾನ್ ಟೆನ್ ಅವರನ್ನು ಕೇವಲ 29 ನಿಮಿಗಳ ಹೋರಾಟದಲ್ಲಿ ಮಣಿಸಿ ಮುನ್ನಡೆ ಸಾಧಿಸಿದರು. ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಸ್ಟಾರ್ ಆಟಗಾರ್ತಿ ಸಿಂಧು ಸೊಗಸಾದ ಆಟದ ಪ್ರದರ್ಶವನ್ನು ನೀಡಿ ಪಂದ್ಯವನ್ನು ಗೆದ್ದು ಬೀಗಿದರು.
![Singapore Open: PV ಸಿಂಧು, HS ಪ್ರಣಯ್ ಗೆ ಜಯ 3 PV sindhu 2](http://sportskarnataka.com/wp-content/uploads/2022/03/PV-sindhu-2.jpg)
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಎಚ್.ಎಸ್ ಪ್ರಣಯ್ 21-13, 21-16 ರಿಂದ ಥಾಯ್ಲೆಂಡ್ ನ ಸಿತ್ತಿಕೋಮ್ ತಮ್ಮಸಿನ್ ಅವರನ್ನು 35 ನಿಮಿಷದ ಹೋರಾಟದಲ್ಲಿ ಮಣಿಸಿ ಮುನ್ನಡೆ ಸಾಧಿಸಿದರು.
![Singapore Open: PV ಸಿಂಧು, HS ಪ್ರಣಯ್ ಗೆ ಜಯ 4 HS Prannoy 1](http://sportskarnataka.com/wp-content/uploads/2022/06/HS-Prannoy-1.jpg)
ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಮಿಥುನ್ ಮಂಜುನಾಥ್ 21-17, 15-21, 21-18 ರಿಂದ ಸ್ಟಾರ್ ಆಟಗಾರ ಕಿಡಂಬಿ ಶ್ರೀಕಾಂತ್ ಅವರನ್ನು ಮಣಿಸಿ ಮುನ್ನಡೆ ಸಾಧಿಸಿದರು. ಇನ್ನೊಂದು ಪಂದ್ಯದಲ್ಲಿ ಪರುಪಳ್ಳಿ ಕಶ್ಯಪ್ 14-21, 15-21 ರಿಂದ ಇಂಡೋನೇಷ್ಯಾದ ಜೊನಾಟನ್ ಕ್ರಿಸ್ಟಿ ಅವರ ವಿರುದ್ಧ ನಿರಾಸೆ ಅನುಭವಿಸಿದರು. ಸಮೀರ್ ವರ್ಮಾ 10-21, 13-21ರಿಂದ ಚೀನಾದ ಲಿ ಶಿ ಫೆಂಗ್ ವಿರುದ್ಧ ನಿರಾಸೆ ಅನುಭವಿಸಿದರು.
Singapore Open, Pv Sindhu, Hs pranay