19 ವಯೋಮಿತಿ ವಿಶ್ವಕಪ್ ಕ್ರಿಕೆಟ್ – ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಶ್ರೀಲಂಕಾ, ದಕ್ಷಿಣ ಆಫ್ರಿಕಾ
19 ವಯೋಮಿತಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.
ಡಿ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಮೂರು ವಿಕೆಟ್ ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿತು. ಶ್ರೀಲಂಕಾ ತಂಡದ ಪರ ದುನಿತ್ ವೆಲ್ಲಾಲಾಗೆ ಮತ್ತು ಮತೀಶಾ ಪತಿರಾಣಾ ತಲಾ ಮೂರು ವಿಕೆಟ್ ಉರುಳಿಸಿದ್ರು. ಅಲ್ಲದೆ ವೆಸ್ಟ್ ಇಂಡೀಸ್ ತಂಡವನ್ನು ೨೫೦ ರನ್ ಗಳಿಗೆ ಕಟ್ಟಿ ಹಾಕಿದ್ರು.
ಸವಾಲನ್ನು ಬೆನ್ನಟ್ಟಿದ್ದ ಶ್ರೀಲಂಕಾ ತಂಡಕ್ಕೆ ಸಿದಿಶಾ ರಾಜಪಕ್ಷ ಆಕರ್ಷಕ ೭೬ ರನ್ ಸಿಡಿಸಿದ್ರು. ಇನ್ನುಳಿದಂತೆ ಅಂಜಲಾ ಬಂಡಾರ ೪೦ ರನ್ ಮತ್ತು ರನುಡಾ ಸೊಮರಥನಾ ೨೮ ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು.
ಬಿ ಗುಂಪಿನ ಸೂಪರ್ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ೧೫೩ ರನ್ ಗಳಿಂದ ಐರ್ಲೆಂಡ್ ತಂಡವನ್ನು ಸೋಲಿಸಿತು.
ಮಳೆಯ ನಡುವೆ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ೪೭ ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ೩೧೫ ರನ್ ದಾಖಲಿಸಿತು. ದಕ್ಷಿಣ ಆಫ್ರಿಕಾ ಪರ ನಾಯಕ ವಾನ್ ಹರ್ಡನ್ ೯೩ ಎಸೆತಗಳಲ್ಲಿ ೧೧೧ ರನ್ ದಾಖಲಿಸಿದ್ರು. ಇದಕ್ಕುತರವಾಗಿ ಬ್ಯಾಟ್ ಮಾಡಿದ ಐರ್ಲೆಂಡ್ ತಂಡ ೧೫೮ ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಈಗಾಗಲೇ ಭಾರತ ಕಿರಿಯರ ತಂಡ ಕ್ವಾರ್ಟರ್ ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಮಡಿದೆ. ಸೂಪರ್ ಲೀಗ್ ನ ಕೊನೆಯ ಪಂದ್ಯದಲ್ಲಿ ಭಾರತ ಮತ್ತು ಉಗಾಂಡ ತಂಡಗಳು ಹೋರಾಟ ನಡೆಸಲಿವೆ.
ಇನ್ನೊಂದೆಡೆ ಭಾರತ ತಂಡದ ನಾಯಕ ಯಶ್ ಧೂಳ್ ಸೇರಿದಂತೆ ಐದು ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಬಿಸಿಸಿಐ ಐದು ಮಂದಿ ಆಟಗಾರರನ್ನು ವೆಸ್ಟ್ ಇಂಡಿಸ್ ಗೆ ಕಳಹಿಸಿಕೊಟ್ಟಿದೆ. ಜನವರಿ ೨೯ರಂದು ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದ ವೇಳೆ ಈ ಐದು ಮಂದಿ ಆಟಗಾರರು ತಂಡವನ್ನು ಸೇರಿಕೊಳ್ಳಲಿದ್ದಾರೆ.