ಇಟಲಿಯ ಮಾರ್ಟಿನ್ ಟ್ರೆವಿಸನ್, ಫ್ರೆಂಚ್ ಓಪನ್ ಟೆನಿಸ್ ಪಂದ್ಯಾವಳಿಯ ಮಹಿಳಾ ವಿಭಾಗದ ಸೆಮಿ ಫೈನಲ್ ಹಂತ ಪ್ರವೇಶಿಸಿದ್ದಾರೆ.
ಪ್ಯಾರೀಸ್‌ನಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾರ್ಟಿನ್ ಟ್ರೆವಿಸನ್ 6-2, 6-7 (3-7), 6-3 ರಿಂದ 17 ನೇ ಶ್ರೇಯಾಂಕದ ಲೆಲಾ ಅನ್ನಿ ಫೆರ್ನಾಂಡಿಸ್ ಅವರನ್ನು ಮೂರು ಸೆಟ್‌ಗಳ ಹೋರಾಟದಲ್ಲಿ ಸೋಲಿಸಿ ನಾಲ್ಕರ ಹಂತ ಕಂಡರು.
ಮಹಿಳಾ ವಿಭಾಗದ ಇನ್ನೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಮೆರಿಕೆಯ ಕೊಕೊ ಗೌಫ್ 7-5, 6-2 ರಿಂದ ತಮ್ಮ ದೇಶದವರೇ ಆದ ಸ್ಲೋನ್ ಸ್ಟೀಫನ್ಸ್ ಅವರನ್ನು ಎರಡು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ನಾಲ್ಕರ ಹಂತ ತಲುಪಿದರು.
ಸಿಲಿಕ್ ಕ್ವಾರ್ಟರ್ ಫೈನಲ್‌ಗೆ
20 ನೇ ಶ್ರೇಯಾಂಕದ ಕ್ರೋಯೆಷಿಯಾದ ಮರಿನ್ ಸಿಲಿಕ್, ಪುರುಷರ ವಿಭಾಗದ ಕ್ವಾರ್ಟರ್ ಫೈನಲ್ ಹಂತ ಕಂಡಿದ್ದಾರೆ.
ಮಂಗಳವಾರ ನಡೆದ ಪ್ರಿಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮರಿನ್ ಸಿಲಿಕ್, ಎರಡನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಅವರನ್ನು 6-2, 6-3, 6-2 ರಿಂದ ಮೂರು ನೇರ ಸೆಟ್‌ಗಳ ಆಟದಲ್ಲಿ ಸೋಲಿಸಿ ಎಂಟರ ಹಂತ ಕಂಡರು.