Monday, September 25, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

PAK v AUS 1ST ODI: ಟ್ರಾವಿಸ್‌ ಹೆಡ್‌ ಶತಕ, ಆಡಂ ಜ್ಹಂಪ ಕಮಾಲ್‌: ಪಾಕ್‌ ವಿರುದ್ಧ ಆಸೀಸ್‌ಗೆ ಜಯ

March 30, 2022
in Cricket, ಕ್ರಿಕೆಟ್
PAK v AUS 1ST ODI: ಟ್ರಾವಿಸ್‌ ಹೆಡ್‌ ಶತಕ, ಆಡಂ ಜ್ಹಂಪ ಕಮಾಲ್‌: ಪಾಕ್‌ ವಿರುದ್ಧ ಆಸೀಸ್‌ಗೆ ಜಯ
Share on FacebookShare on TwitterShare on WhatsAppShare on Telegram

ಟ್ರಾವಿಸ್‌ ಹೆಡ್‌(101) ಶತಕ ಹಾಗೂ ಆಡಂ ಜ್ಹಂಪ(38/4) ಉತ್ತಮ ಬೌಲಿಂಗ್‌ ನೆರವಿನಿಂದ ಪಾಕಿಸ್ತಾನ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 88 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಲಾಹೋರ್‌ನಲ್ಲಿ ಮಂಗಳವಾರ ನಡೆದ ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಅವಕಾಶ ಪಡೆದ ಆಸ್ಟ್ರೇಲಿಯಾ, 50 ಓವರ್‌ನಲ್ಲಿ 7 ವಿಕೆಟ್‌ಗೆ 313 ರನ್‌ಗಳಿಸಿತು. ಈ ಸವಾಲು ಬೆನ್ನತ್ತಿದ ಪಾಕಿಸ್ತಾನ, 45.2 ಓವರ್‌ನಲ್ಲಿ 225 ರನ್‌ಗಳಿಗೆ ಆಲೌಟ್‌ ಆಯಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಆಸೀಸ್‌ ನೀಡಿದ ಬೃಹತ್‌ ಸವಾಲು ಬೆನ್ನತ್ತಿದ ಪಾಕಿಸ್ತಾನ ಬ್ಯಾಟಿಂಗ್‌ ವೈಫಲ್ಯಕ್ಕೆ ಸಿಲುಕಿತು. ತಂಡದ ಪರ ಇನ್ನಿಂಗ್ಸ್‌ ಆರಂಭಿಸಿದ ಫಖರ್‌ ಜ಼ಮಾನ್‌(18) ಬಹುಬೇಗೆ ವಿಕೆಟ್‌ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಇಮಾಮ್‌-ಉಲ್‌-ಹಕ್‌(103) ಹಾಗೂ ನಾಯಕ ಬಾಬರ್‌ ಆಜ಼ಂ(57) ಜವಾಬ್ದಾರಿಯ ಆಟವಾಡಿ 104 ರನ್‌ಗಳ ಜೊತೆಯಾಟವಾಡಿದರು. ಆದರೆ ಇವರಿಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಹೊರಬರಲಿಲ್ಲ. ಅಂತಿಮವಾಗಿ ಪಾಕಿಸ್ತಾನ 88 ರನ್‌ಗಳ ಸೋಲನುಭವಿಸಿತು.

ಆಸೀಸ್‌ ಪರ ಆಡಂ ಜ್ಹಂಪ(38/4) ವಿಕೆಟ್‌ ಪಡೆದು ಪಾಕ್‌ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದರು. ಇವರಿಗೆ ಸಾಥ್‌ ನೀಡಿದ ಮಿಚೆಲ್‌ ಸ್ವೀಪ್ಸನ್‌ ಹಾಗೂ ಟ್ರಾವಿಸ್‌ ಹೆಡ್‌ ತಲಾ 2 ವಿಕೆಟ್‌ ಪಡೆದರು. ಉಳಿದಂತೆ ಅಬೋಟ್‌, ಎಲ್ಲಿಸ್‌ ತಲಾ 1 ವಿಕೆಟ್‌ ಪಡೆದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಆಸ್ಟ್ರೇಲಿಯಾಕ್ಕೆ ಬ್ಯಾಟ್ಸ್‌ಮನ್‌ಗಳು ಆಸರೆಯಾದರು. ಆರಂಭಿಕನಾಗಿ ಕಣಕ್ಕಿಳಿದ ಟ್ರಾವಿಸ್‌ ಹೆಡ್‌ 101 (72 ಎಸೆತ, 12 ಬೌಂಡರಿ, 3 ಸಿಕ್ಸರ್‌) ಅದ್ಭುತ ಶತಕಗಳಿಸಿ ಮಿಂಚಿದರು. ಇವರೊಂದಿಗೆ ಬೆನ್‌ ಕಟ್ಟಿಂಗ್‌ 55 ಹಾಗೂ ಕೆಮರೂನ್‌ ಗ್ರೀನ್‌ 40 ರನ್‌ಗಳಿಸಿ ತಂಡಕ್ಕೆ ನೆರವಾದರು. ಪಾಕ್‌ ಪರ ಹ್ಯಾರಿಸ್‌ ರಾಫ್‌ ಹಾಗೂ ಜಹೀದ್‌ ಮೊಹಮೊದ್ ತಲಾ 2 ವಿಕೆಟ್‌ ಪಡೆದರೆ, ಇಫ್ತಿಕರ್‌ ಅಹ್ಮೆದ್‌ ಮತ್ತು ಕುಷ್ದಿಲ್‌ ಶಾ ಅವರುಗಳು 1 ವಿಕೆಟ್‌ ಪಡೆದರು.

ಉತ್ತಮ ಆಟವಾಡಿದ ಟ್ರಾವಿಸ್‌ ಹೆಡ್‌ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಪಂದ್ಯ ಮಾರ್ಚ್‌ 31ರಂದು ಲಾಹೋರ್‌ನಲ್ಲಿ ನಡೆಯಲಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: australia cricketODI seriespakistan cricketSports Karnataka
ShareTweetSendShare
Next Post
ರಾಯಲ್ಸ್ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ Sanju Samson

ರಾಯಲ್ಸ್ ಪರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ Sanju Samson

Leave a Reply Cancel reply

Your email address will not be published. Required fields are marked *

Stay Connected test

Recent News

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

IND v AUS: ಆಸೀಸ್‌ ವಿರುದ್ಧದ 3ನೇ ಏಕದಿನ ಪಂದ್ಯದಿಂದ ಅಕ್ಸರ್‌ ಪಟೇಲ್‌ ಔಟ್‌

September 25, 2023
IND v AUS: ಆಸೀಸ್‌ ಬೌಲರ್‌ಗಳ ಬೆವರಿಳಿಸಿದ ಗಿಲ್‌: ODIನಲ್ಲಿ 6ನೇ ಶತಕ ದಾಖಲು

IND v AUS: 3ನೇ ಏಕದಿನ ಪಂದ್ಯಕ್ಕೆ ಗಿಲ್‌, ಶಾರ್ದೂಲ್‌ಗೆ ವಿಶ್ರಾಂತಿ ಸಾಧ್ಯತೆ

September 25, 2023
IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

IND v AUS: ಗಿಲ್‌, ಅಯ್ಯರ್‌ ಶತಕ: ಅಶ್ವಿನ್‌-ಜಡೇಜಾ ಕೈಚಳಕ: ಭಾರತಕ್ಕೆ ಭರ್ಜರಿ ಜಯ

September 24, 2023
IND v AUS: ಬ್ಯಾಟಿಂಗ್‌ ಲಯ ಕಂಡ ಶ್ರೇಯಸ್‌: ಆಸೀಸ್‌ ವಿರುದ್ಧ ಶತಕ ದಾಖಲು

IND v AUS: ಗಿಲ್‌-ಅಯ್ಯರ್‌ ಶತಕದ ಅಬ್ಬರ: ಆಸೀಸ್‌ಗೆ 400 ರನ್‌ಗಳ ಕಠಿಣ ಟಾರ್ಗೆಟ್‌

September 24, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram