ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸಿಕ್ಸರ್ ಮತ್ತು ಬೌಂಡರಿಗಳು ದೊಡ್ಡ ಸದ್ದು ಮಾಡುತ್ತಿವೆ. ಇದೆಲ್ಲದರ ನಡುವೆ ಟಾಸ್ ಕೂಡ ಸಿಕ್ಕಾಪಟ್ಟೆ ಸುದ್ದಿಯಲ್ಲಿತ್ತು. ಆರಂಭದಲ್ಲಿ ಪಂದ್ಯ ಗೆಲ್ಲಬೇಕು ಅಂದರೆ ಟಾಸ್ ಗೆಲ್ಲಬೇಕು ಅನ್ನುವ ಲೆಕ್ಕಾಚಾರವಿತ್ತು. ಆದರೆ ಈಗ ಟ್ರೆಂಡ್ ನಿಧಾನವಾಗಿ ಬದಲಾಗುತ್ತಿದೆ.
ಲೆಕ್ಕಾಚಾರ:
- 93.62% : IPLನ ಮೊದಲ 47 ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕರು ಮೊದಲು ಫೀಲ್ಡಿಂಗ್ ಆರಿಸಿಕೊಂಡಿದ್ದಾರೆ.
- 100% : 38 ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಿದ್ದವು. ಈ ಎಲ್ಲಾ ಪಂದ್ಯಗಳಲ್ಲೂ ನಾಯಕರು ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡಿದ್ದರು.
- 66.67% : ಮಧ್ಯಾಹ್ನ 3.30ಕ್ಕೆ ಆರಂಭವಾದ 9 ಪಂದ್ಯಗಳಲ್ಲಿ ಟಾಸ್ ಗೆದ್ದ ನಾಯಕರು ಫೀಲ್ಡಿಂಗ್ ಆರಿಸಿಕೊಂಡ ಶೇಕಡಾ ವಾರು.
- 70.56% : 2019. 2020 ಮತ್ತು 2021ರಲ್ಲಿ ಟಾಸ್ ಗೆದ್ದ ತಂಡಗಳು ಶೇಕಡಾ 70.56% ರಷ್ಟು ಫೀಲ್ಡಿಂಗ್ ಆರಿಸಿಕೊಂಡಿದ್ದರು.
ಸೋಲು- ಗೆಲುವು:
ಮೊದಲ 18 ಪಂದ್ಯಗಳಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ತಂಡಗಳು 13 ಬಾರಿ ಗೆಲುವು ದಾಖಲಿಸಿದ್ದವು. 19ನೇ ಪಂದ್ಯದಿಂದ 31ನೇ ಪಂದ್ಯದ ತನಕ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ತಂಡಗಳು ಪಂದ್ಯ ಗೆದ್ದಿದ್ದು ಕೇವಲ ಬಾರಿ ಮಾತ್ರ. 32ನೇ ಪಂದ್ಯದಿಂದ 47ನೇ ಪಂದ್ಯದ ತನಕ ಟಾಸ್ ಗೆದ್ದು ಫೀಲ್ಡಿಂಗ್ ಆರಿಸಿಕೊಂಡ ತಂಡಗಳು 8 ಪಂದ್ಯಗಳನ್ನು ಮಾತ್ರ ಗೆದ್ದಿವೆ.
ಮೊದಲ 47 ಪಂದ್ಯಗಳ ಲೆಕ್ಕ:
ತಂಡ ಟಾಸ್ ಗೆಲುವು ಟಾಸ್ ಸೋಲು
- ಎಸ್ಆರ್ಎಚ್: 8 1
- ಡೆಲ್ಲಿ ಕ್ಯಾಪಿಟಲ್ಸ್: 6 3
- ಕೆಕೆಆರ್: 6 4
- ಆರ್ಸಿಬಿ: 6 4
- ಗುಜರಾತ್ ಟೈಟಾನ್ಸ್: 5 4
- ಲಖನೌ: 5 5
- ಮುಂಬೈ: 5 4
- ಸಿಎಸ್ಕೆ: 3 6
- ಪಂಜಾಬ್: 2 7
- ರಾಜಸ್ಥಾನ: 1 9
- ಕೇನ್ ವಿಲಿಯಮ್ಸ್ ಸತತ 7 ಟಾಸ್ ಗೆದ್ದು ಮಹೇಂದ್ರ ಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ. ಧೋನಿ 2018 ಮತ್ತು 2019ರಲ್ಲಿ ಸತತ 7 ಬಾರಿ ಟಾಸ್ ಗೆದ್ದಿದ್ದರು.
ಟಾಸ್ ಈಸ್ ದಿ ಬಾಸ್
ತಂಡ ಟಾಸ್ ಗೆಲುವು ಪಂದ್ಯ ಗೆಲುವು
- ಗುಜರಾತ್ ಟೈಟಾನ್ಸ್ 5 5
- ಕೊಲ್ಕತ್ತಾ 4 2
- ಸನ್ ರೈಸರ್ಸ್ 5 3