ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಆಲ್ರೌಂಡರ್ ಕೈರನ್ ಪೊಲಾರ್ಡ್, ಹಲವು ಯುವ ಆಟಗಾರರಿಗೆ ಸ್ಪೂರ್ತಿಯಾಗಿದ್ದಾರೆ. 15ನೇ ಆವೃತ್ತಿಯಲ್ಲಿ ಮುಂಬೈ ಪರ ಆಡುವ ಅವಕಾಶ ಪಡೆದಿರುವ ಟಿಮ್ ಡೇವಿಡ್, ಹಿರಿಯ ಆಟಗಾರನ ಅನುಭವದ ಹಾದಿಯಲ್ಲಿ ಮುನ್ನಡೆಸಲು ತೀರ್ಮಾನಿಸಿದ್ದಾರೆ.
ತಮ್ಮ ತಂಡದ ದಿಗ್ಗಜ ಆಟಗಾರನ ಕುರಿತು ಮಾತನಾಡಿರುವ ಟಿಮ್ ಡೇವಿಡ್, ಕಳೆದ 10 ವರ್ಷದಿಂದ ಐಪಿಎಲ್ನಲ್ಲಿ ಆಡುತ್ತಿರುವ ಪೊಲಾರ್ಡ್ ಸಾಕಷ್ಟು ಅನುಭವ ಹೊಂದಿದ್ದಾರೆ. ಈ ಅನುಭವ ಯಾವುದೇ ನೋಟ್ಬುಕ್ನಲ್ಲಿ ಸಿಗುವುದಿಲ್ಲ, ಸಮಯ ಕಳೆದಂತೆ ಸಹಜವಾಗಿ ಈ ಅನುಭವ ದೊರೆಯಲಿದೆ. ಪೊಲಾರ್ಡ್ ಅವರಿಂದ ನಾನು ಒಂದಿಷ್ಟು ಅನುಭವ ಪಡೆಯಲಿದ್ದೇನೆ. ಈ ಅನುಭವವನ್ನು ಆಟದಲ್ಲಿ ಬಳಸಿಕೊಳ್ಳುವ ಅಥವಾ ನನ್ನ ಆಟದೊಂದಿಗೆ ಅವರ ಅನುಭವ ಸೇರಿಸಿದರೆ ಇನ್ನಷ್ಟು ಯಶಸ್ಸು ದೊರೆಯಲಿದೆ.
ಮುಂಬೈ ತಂಡದ ನಾಯಕನ ಕುರಿತು ಮಾತನಾಡಿರುವ ಟಿಮ್ ಡೇವಿಡ್, ನಾಯಕ ರೋಹಿತ್ ಶರ್ಮ ವೈಟ್ ಬಾಲ್ ಕ್ರಿಕೆಟ್ನ ಸರ್ವಶ್ರೇಷ್ಠ ಆಟಗಾರ. ನಾನು ಅವರೊಂದಿಗೆ ಎರಡು ಪಂದ್ಯವಾಡಿದ್ದು, ಇನ್ನಷ್ಟು ಪಂದ್ಯವನ್ನ ಆಡಲು ನಿರೀಕ್ಷಿಸುತ್ತಿದ್ದೇನೆ. ಅಲ್ಲದೇ ಇತರ ಆಟಗಾರರ ಜೊತೆಗೂಡಿ ಪ್ರಸಕ್ತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇವೆ ಎಂದಿರುವ ಅವರು 15ನೇ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೋಲು ಕಂಡಿರುವ ಮುಂಬೈ ಪ್ರದರ್ಶನದ ಬಗ್ಗೆ ಮಾತನಾಡಿರುವ ಡೇವಿಡ್, ತಮ್ಮ ತಂಡ ಬಲಿಷ್ಠ ಕಮ್ಬ್ಯಾಕ್ ಮಾಡುವ ವಿಶ್ವಾಸ ಹೊಂದಿದ್ದಾರೆ. ಸತತ ಎರಡು ಸೋಲು ಕಂಡಿರುವ ಮುಂಬೈ ಇಂಡಿಯನ್ಸ್, ಕೆಕೆಆರ್ ವಿರುದ್ಧ ನಡೆಯುವ ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ.