M.S.Dhoni vs Ravi Shastri – ಧೋನಿ ಫೋನ್ ನಂಬರ್ ಇಲ್ಲ.. ನಾನು ಕೇಳಿಲ್ಲ.. ! ರವಿಶಾಸ್ತ್ರಿ ಹೀಗೆ ಹೇಳುವುದಕ್ಕೆ ಕಾರಣ ಏನು ?
ಟೀಮ್ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ ಈಗ ಸದಾ ಸುದ್ದಿಯಲ್ಲಿದ್ದಾರೆ. ಹೆಡ್ ಕೋಚ್ ಪದವಿಯಿಂದ ಹೊರನಡೆದ ಬಳಿಕ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಸೌರವ್ ಗಂಗೂಲಿ, ದ್ರಾವಿಡ್, ಅನಿಲ್ ಕುಂಬ್ಳೆ, ಸಚಿನ್ ತೆಂಡುಲ್ಕರ್ ಸೇರಿದಂತೆ ಪರೋಕ್ಷವಾಗಿ ಟಾಂಗ್ ಕೊಟ್ಟು ತನ್ನ ಶಿಷ್ಯ ವಿರಾಟ್ ಕೊಹ್ಲಿಯವರ ಪರ ಬ್ಯಾಟ್ ಬೀಸಿದ್ದಾರೆ.
ಇದೀಗ ರವಿಶಾಸ್ತ್ರಿ ಅವರು ಮಹೇಂದ್ರ ಸಿಂಗ್ ಧೋನಿಯವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಗಿದ್ದಾರೆ. ಪಾಕಿಸ್ತಾನದ ಮಾಜಿ ವೇಗಿ ಶೋಯಿಬ್ ಅಖ್ತರ್ ಅವರ ಯೂ ಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ರವಿಶಾಸ್ತ್ರಿ ಅವರು ಮಹೇಂದ್ರ ಸಿಂಗ್ ಧೋನಿಯವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ.
ಮೈದಾನದಲ್ಲಿ ವಿರಾಟ್ ಕೊಹ್ಲಿ ಮೃಗದಂತಿರುತ್ತಾರೆ. ಮೈದಾನಕ್ಕೆ ಕಾಲಿಟ್ಟ ನಂತರ ಸ್ಪರ್ಧೆ ಮಾಡಬೇಕು ಅಷ್ಟೇ. ಬೇರೆಯ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ ಎಮ್.ಎಸ್. ಧೋನಿ ಇದಕ್ಕೆ ಸಂಪೂರ್ಣವಾಗಿ ವಿರುದ್ದವಾಗಿದ್ದಾರೆ. ಶೂನ್ಯ ಸುತ್ತಿದಾಗ. ಶತಕ ದಾಖಲಿಸಿದ್ದಾಗ ಅಥವಾ ವಿಶ್ವಕಪ್ ಎತ್ತಿದಾಗಲೂ ಧೋನಿ ಸಂಯಮದಿಂದಲೇ ಇರುತ್ತಾರೆ. ಅವರು ತಲೆಕೆಡಿಸಿಕೊಳ್ಳುವುದಿಲ್ಲ ಧೋನಿಯಂತ ವ್ಯಕ್ತಿಯನ್ನು ನಾನು ಇಲ್ಲಿಯವರೆಗೆ ನೋಡಿಲ್ಲ ಎನ್ನುವ ಶಾಸ್ತ್ರಿ, ರೋಹಿತ್ ಶರ್ಮಾ ಸ್ವಲ್ಪ ಮಟ್ಟಿಗೆ ಧೋನಿಯ ಹಾದಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.
Till today, I don’t have his phone number, I’ve not even asked for it – Ravi Shastri
ನಾನು ಸಾಕಷ್ಟು ಆಟಗಾರರನ್ನು ಹತ್ತಿರದಿಂದ ಗಮನಿಸಿದ್ದೇನೆ. ಆದ್ರೆ ಧೋನಿಯಂತಹ ಆಟಗಾರರು ನಿಮಗೆ ಸಿಗಲ್ಲ. ಸಚಿನ್ ತೆಂಡುಲ್ಕರ್ ಕೂಡ ಶಾಂತ ಸ್ವಭಾವದವರು. ಆದ್ರೂ ಕೆಲವೊಂದು ಬಾರಿ ಸಿಟ್ಟುಗೊಳ್ಳುತ್ತಾರೆ. ಆದ್ರೆ ಧೋನಿ ಹಾಗಲ್ಲ ಎಂದು ರವಿಶಾಸ್ತ್ರಿ ಧೋನಿಯ ವ್ಯಕ್ತಿತ್ವವನ್ನು ಗುನಗಾನ ಮಾಡಿದ್ದಾರೆ.
ಅಂದ ಹಾಗೇ ಮಹೇಂದ್ರ ಸಿಂಗ್ ಅವರ ಫೋನ್ ನಂಬರ್ ನನ್ನ ಬಳಿ ಇಲ್ಲ. ನಾನು ಅವರ ಫೋನ್ ನಂಬರ್ ಕೇಳಿಲ್ಲ. ಯಾಕಂದ್ರೆ ನನಗೆ ಗೊತ್ತು. ಅವರು ಫೋನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದು ನನನಗೆ ತಿಳಿದಿದೆ ಎನ್ನುತ್ತಾರೆ ರವಿಶಾಸ್ತ್ರಿ.
ಇದೇ ವೇಳೆ ತನ್ನ ಶಿಷ್ಯ ವಿರಾಟ್ ಕೊಹ್ಲಿಯವರಿಗೂ ಸಲಹೆಯೊಂದನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳಬೇಕು. ಕನಿಷ್ಠ ಒಂದು ಸರಣಿ ಅಥವಾ 2-3 ತಿಂಗಳು. ಯಾಕಂದ್ರೆ ವಿರಾಟ್ ಗೆ ಈಗ 33ರ ಹರೆಯ. ಅವರಿಗೆ ಇನ್ನೂ ಕೂಡ ಐದು ವರ್ಷ ಆಡುವ ಸಾಮಥ್ರ್ಯವಿದೆ. ವಿರಾಟ್ ಕೊಹ್ಲಿ ಟೀಮ್ ಪ್ಲೇಯರ್. ತಂಡದಲ್ಲಿ ಅವರ ಜವಾಬ್ದಾರಿ ಏನು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿಯವರ ಭವಿಷ್ಯದ ಬಗ್ಗೆ ಸಲಹೆ ನೀಡಿದ್ದಾರೆ.