ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಕ್ವಾಲಿಫೈಯರ್ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಮೊದಲ ಬಾರಿಗೆ ಐಪಿಎಲ್ ಆಡುತ್ತಿರುವ ಗುಜರಾತ್ ಟೈಟಾನ್ಸ್ ಮತ್ತು ಮೊದಲ ಸೀಸನ್‌ನ ಚಾಂಪಿಯನ್ ತಂಡ ರಾಜಸ್ಥಾನ ಮುಖಾಮುಖಿಯಾಗಲಿದೆ.
ಗುಜರಾತಿಗೆ ಆರಂಭಿಕ ಜೋಡಿಯೇ ದೊಡ್ಡ ಸಮಸ್ಯೆಯಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಈ ದೊಡ್ಡ ಪಂದ್ಯಕ್ಕೂ ಮುನ್ನ ಓಪನರ್ ವೃದ್ಧಿಮಾನ್ ಸಾಹಾ ಅವರು ಈ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. ವಾಸ್ತವವಾಗಿ, ಅವರು RCB ವಿರುದ್ಧದ ಅವರ ಕೊನೆಯ ಲೀಗ್ ಪಂದ್ಯದಲ್ಲಿ ಸ್ನಾಯು ಸೆಳೆತವನ್ನು ಅನುಭವಿಸಿದ್ದರು. ಈ ಪಂದ್ಯಕ್ಕೂ ಮುನ್ನ ಸಾಹಾ ಅವರು ತಮ್ಮ ಫಿಟ್‌ನೆಸ್ ಬಗ್ಗೆ ಹೇಳಿದ್ದು, ತಾವು ಸಂಪೂರ್ಣ ಫಿಟ್ ಆಗಿದ್ದು, ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಆಡಲು ಲಭ್ಯರಾಗುವುದಾಗಿ ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧದ ಪ್ಲಾನ್ ಬಗ್ಗೆ ಹೇಳಿದ್ದು, ಆರಂಭದಲ್ಲಿ ವೇಗವಾಗಿ ರನ್ ಗಳಿಸಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಪವರ್ ಪ್ಲೇಯಲ್ಲಿ ಅಪಾಯಕಾರಿ ಹೊಡೆತಗಳನ್ನು ಆಡಲು ಇಷ್ಟಪಡುತ್ತೇನೆ ಎಂದು ಹೇಳಿದರು.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಮೂರು ವರ್ಷಗಳ ನಂತರ ಐಪಿಎಲ್ ಪಂದ್ಯ ಆಡುತ್ತಿರುವ ಸಾಹಾ, ತವರಿನ ಜನರ ನಡುವೆ ಆಡುವುದು ಯಾವಾಗಲೂ ವಿಭಿನ್ನ ಅನುಭವವನ್ನು ನೀಡುತ್ತದೆ ಎಂದು ಹೇಳಿದರು.
ಗುಜರಾತ್ ಗೆ ಆರಂಭದಿಂದಲೂ ಆರಂಭಿಕರೇ ತಲೆನೋವಾಗಿದ್ದಾರೆ. ತಂಡವು ಮೊದಲು ಗಿಲ್ ಜೊತೆಗೆ ಮ್ಯಾಥ್ಯೂ ವೇಡ್ ಅವರನ್ನು ಪ್ರಯತ್ನಿಸಿತು ಆದರೆ ಸಹಾ ಆಗಮನವು ಆರಂಭಿಕ ಹಂತಕ್ಕೆ ಸ್ವಲ್ಪ ಸ್ಥಿರತೆಯನ್ನು ತಂದಿತು. ಹೀಗಾಗಿ ಈ ಬಿಗ್ ಮ್ಯಾಚ್ ನಲ್ಲಿ ಸಹಾ ಆಡುವುದು ಗುಜರಾತ್ ಗೆ ಅನುಕೂಲವಾಗಲಿದೆ.