IPL 2022- RCB – AB de Villiers- ಬಲಿಷ್ಠ ಆರ್ ಸಿಬಿ ತಂಡ ಕಟ್ಟಲು ಬರುತ್ತಿದ್ದಾರೆ ಎಬಿಡಿ ವಿಲಿಯರ್ಸ್…!

ಎಬಿಡಿ ವಿಲಿಯರ್ಸ್.. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ. ಆದ್ರೆ ಎಬಿಡಿ ಅಂದ ತಕ್ಷಣ ಆರ್ ಸಿಬಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಾರೆ. ಯಾಕಂದ್ರೆ ಆರ್ ಸಿಬಿ ಅಂದ್ರೆ ವಿರಾಟ್.. ವಿರಾಟ್ ಅಂದ್ರೆ ಆರ್ ಸಿಬಿ ಹೇಗಿರುತ್ತೋ ಅದೇ ರೀತಿ ಎಬಿಡಿ ಅಂದ್ರೆ ಆರ್ ಸಿಬಿ, ಆರ್ ಸಿಬಿ ಅಂದ್ರೆ ಎಬಿಡಿ. ಅಷ್ಟರ ಎಬಿಡಿ ವಿಲಿಯರ್ಸ್ ಅವರ ಪ್ರಭಾವಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದೆ.
ಎಲ್ಲರಿಗೂ ಗೊತ್ತಿರುವ ಹಾಗೇ 2021ರಲ್ಲಿ ಎಬಿಡಿ ಎಲ್ಲಾ ಮಾದರಿಯ ಕ್ರಿಕೆಟ್ ಗೂ ವಿದಾಯ ಹೇಳಿದ್ದರು. ಹೀಗಾಗಿ ಎಬಿಡಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಗಾಲ್ಫ್ ಆಟವನ್ನು ನೋಡಿಕೊಂಡು, ಆಡ್ತಾ ಎಂಜಾಯ್ ಮಾಡುತ್ತಿದ್ದಾರೆ. ಆದ್ರೂ ಐಪಿಎಲ್ ನ ಆರ್ ಸಿಬಿ ಪಂದ್ಯವನ್ನು ಮಿಸ್ ಮಾಡದೇ ನೋಡಿದ್ದಾರೆ.
ಇದೀಗ ಎಬಿಡಿ ವಿಲಿಯರ್ಸ್ ಸಿಹಿ ಸುದ್ದಿಯನ್ನು ಆರ್ ಸಿಬಿ ಅಭಿಮಾನಿಗಳಿಗೆ ನೀಡಿದ್ದಾರೆ. 2023ರ ಐಪಿಎಲ್ ನಲ್ಲಿ ನಾನು ಆರ್ ಸಿಬಿ ತಂಡದಲ್ಲಿರುತ್ತೇನೆ. ಬೆಂಗಳೂರಿನ ಚಿನ್ನಸ್ವಾಮಿ ಅಂಗಣದಲ್ಲಿ ಭರ್ತಿಯಾದ ಪ್ರೇಕ್ಷಕರ ಎದುರು ನಾನು ಇರುತ್ತೇನೆ ಎಂದು ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.
ಆದ್ರೆ ಆರ್ ಸಿಬಿ ಆಟಗಾರನಾಗಿರುವುದು ಅನುಮಾನ. ಬದಲಾಗಿ ಆರ್ ಸಿಬಿ ತಂಡದ ಮೆಂಟರ್ ಅಥವಾ ಸಲಹೆಗಾರನಾಗಿ ಎಬಿಡಿ ವಿಲಿಯರ್ಸ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಅಂದ ಹಾಗೇ, ಎಬಿಡಿ ವಿಲಿಯರ್ಸ್ ಅವರಿಗೆ ಬೆಂಗಳೂರು ಎರಡನೇ ತವರು ಮನೆಯಾಗಿದೆ. ಬೆಂಗಳೂರು ನಗರವನ್ನು ತುಂಬಾನೇ ಇಷ್ಟಪಡುವ ಎಬಿಡಿ ಆರ್ ಸಿಬಿ ತಂಡದ ಭಾಗವಾಗಿದ್ದಾರೆ. 2011ರಿಂದ ಆರ್ ಸಿಬಿ ತಂಡದಲ್ಲಿದ್ದ ಎಬಿಡಿ ಹಲವು ರೋಚಕ ಪಂದ್ಯಗಳ ಸವಿ ಸವಿ ನೆನಪುಗಳು ಕೂಡ ಇವೆ. ಜೊತೆಗೆ 360 ಡಿಗ್ರಿ ಪ್ಲೇಯರ್ ಆಗಿಯೂ ಹೊರಹೊಮ್ಮಿದ್ದಾರೆ.

ಎಷ್ಟೇ ಒತ್ತಡ ಇರಲಿ, ಸವಾಲು ಎಷ್ಟೇ ದೊಡ್ಡದಿರಲಿ, ಪಂದ್ಯದ ಗತಿಯನ್ನೇ ಬದಲಾಯಿಸುವಂತಹ ಸಾಮಥ್ರ್ಯ ಎಬಿಡಿ ಅವರಲ್ಲಿತ್ತು. ಹೀಗಾಗಿಯೇ ಎಬಿಡಿ ವಿರಾಟ್ ಕೊಹ್ಲಿಯವರಷ್ಟೇ ಅಭಿಮಾನಿಗಳ ಬಳಗವನ್ನು ಕೂಡ ಹೊಂದಿದ್ದಾರೆ.
ಈಗಾಗಲೇ ವಿರಾಟ್ ಕೊಹ್ಲಿ ಕೂಡ ಎಬಿಡಿ ಮುಂದಿನ ವರ್ಷ ಆರ್ ಸಿಬಿಯ ಭಾಗವಾಗಲಿದ್ದಾರೆ ಎಂದು ಹೇಳಿದ್ದಾರೆ. IPL 2022- RCB – AB de Villiers-confirms return to RCB in IPL 2023
2023ರ ಐಪಿಎಲ್ ನಲ್ಲಿ ಆರ್ ಸಿಬಿ ಪರವಾಗಿರುವುದನ್ನು ವಿರಾಟ್ ಕೊಹ್ಲಿ ಈಗಾಗಲೇ ಹೇಳಿದ್ದಾರೆ. ಆರ್ ಸಿಬಿ ತಂಡವನ್ನು ಮತ್ತೆ ಸೇರಿಕೊಳ್ಳುವುದನ್ನು ಎದುರು ನೋಡುತ್ತಿದ್ದೇನೆ. ಈ ಬಾರಿ ನಾನು ಮಿಸ್ ಮಾಡಿಕೊಂಡಿದ್ದೇನೆ. ಆದ್ರೆ ಖಂಡಿತವಾಗಿಯೂ ಮುಂದಿನ ವರ್ಷ ಮಿಸ್ ಮಾಡಿಕೊಳ್ಳುವುದಿಲ್ಲ. ಚಿನ್ನಸ್ವಾಮಿ ಅಂಗಣದಲ್ಲಿ ಮುಂದಿನ ವರ್ಷ ಕೆಲವು ಪಂದ್ಯಗಳು ನಡೆಯುತ್ತವೆ ಎಂದು ತಿಳಿದಿದೆ. ಹೀಗಾಗಿ ನಿಮ್ಮೆಲ್ಲರನ್ನು ನಾನು ಮುಂದಿನ ವರ್ಷದ ಐಪಿಎಲ್ ನಲ್ಲಿ ಬೆಂಗಳೂರಿನಲ್ಲಿ ಸಿಗುತ್ತೇನೆ ಎಂದು ಎಬಿಡಿ ವಿಲಿಯರ್ಸ್ ಹೇಳಿದ್ದಾರೆ.
ಒಟ್ಟಿನಲ್ಲಿ ಎಬಿಡಿ ವಿಲಿಯರ್ಸ್ ಆರ್ ಸಿಬಿ ತಂಡವನ್ನು ಸೇರಿಕೊಂಡಿರುವುದು ಒಳ್ಳೆಯ ಸುದ್ದಿ. ಆದ್ರೆ ಒಬ್ಬ ಆಟಗಾರನಾಗಿ ಎಬಿಡಿ ವಿಲಿಯರ್ಸ್ ಅದ್ಭುತವಾದ ಸಾಧನೆಯನ್ನು ಮಾಡಿದ್ದಾರೆ. ಆದ್ರೆ ಮುಂದೆ ಅವರಿಗೆ ಸಾಕಷ್ಟು ಸವಾಲುಗಳಿವೆ. ಬಲಿಷ್ಠ ತಂಡವನ್ನು ಕಟ್ಟಲು ಅವರು ಸಾಕಷ್ಟು ಪ್ರಯತ್ನ ಮಾಡಬೇಕಾಗುತ್ತದೆ. ಟೀಮ್ ಮ್ಯಾನೇಜ್ ಮೆಂಟ್ ಜೊತೆ ಚರ್ಚೆ ನಡೆಸಿ ಆರ್ ಸಿಬಿಗೆ ಹೊಸ ಸ್ವರೂಪವನ್ನು ನೀಡ್ತಾರಾ ಅನ್ನೋದನ್ನು ಕಾದು ನೋಡಬೇಕು.