ಕೇವಲ 3 ತಿಂಗಳ ಹಿಂದಿನ ಮಾತು. ಹಾರ್ದಿಕ್ ಪಾಂಡ್ಯಾ ಅನ್ನು ಹಾರ್ಡ್ ಹಿಟ್ಟಿಂಗ್ ಆಲ್ರೌಂಡರ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಇರಲಿಲ್ಲ. ಹಾರ್ದಿಕ್ ಹೇಗಿದ್ದಾರೆ ಅನ್ನುವುದನ್ನು ಕೇಳುವವರು ಯಾರು ಇರಲಿಲ್ಲ. ಹೊಸ ಹೊಸ ಆಲ್ರೌಂಡರ್ಗಳ ಹೆಸರು ಟೀಮ್ ಇಂಡಿಯಾದ ಲಿಸ್ಟ್ನಲ್ಲಿತ್ತು. ಆದರೆ ಈಗ ಎಲ್ಲವೂ ಬದಲಾಗಿದೆ. ಹಾರ್ದಿಕ್ ಟೀಮ್ ಇಂಡಿಯಾದ ಕ್ಯಾಪ್ಟನ್ ಆಗಿದ್ದಾರೆ. ಒಂದು ಐಪಿಎಲ್ ಟೂರ್ನಿ ಹಾರ್ದಿಕ್ ಪಾಂಡ್ಯಾ ಕ್ರಿಕೆಟ್ ಬದುಕು ಬದಲಿಸಿದೆ.

ಐಪಿಎಲ್ ಫರ್ಫಾಮೆನ್ಸ್ ಪಾಂಡ್ಯಾರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಸೇರಿಕೊಳ್ಳುವಂತೆ ಮಾಡಿತು. ಹಾರ್ದಿಕ್ ಹಾರ್ಡ್ ಹಿಟ್ಟರ್ ಅನ್ನುವುದನ್ನು ಮತ್ತೆ ನೆನಪಿಸಿದರು. ಈಗ ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಟೀಮ್ಇಂಡಿಯಾದ ನಾಯಕನಾಗಿದ್ದಾರೆ. ಅಕ್ಟೋಬರ್ನಲ್ಲಿ ನಡೆಯುವ ಟಿ20 ವಿಶ್ವಕಪ್ಗೆ ತಂಡದಲ್ಲಿ ಸ್ಥಾನವೂ ಗಟ್ಟಿಯಾಗಿದೆ. ಹಾರ್ದಿಕ್ ಕಂ ಬ್ಯಾಕ್ ಮಾತ್ರ ಮಾಡಿಲ್ಲ, ಟೀಮ್ ಇಂಡಿಯಾಕ್ಕೆ ಹೊಸ ಶಕ್ತಿಯನ್ನು ತಂದುಕೊಟ್ಟಿದ್ದಾರೆ.