ಅತಿಥೇಯ ಐರ್ಲೆಂಡ್ ವಿರುದ್ಧ ನಡೆಯಲಿರುವ T20I ಸರಣಿಗೆ ಟೀಂ ಇಂಡಿಯಾ 17 ಮಂದಿ ಆಟಗಾರರ ತಂಡವನ್ನ ಪ್ರಕಟಿಸಿದ್ದು, ಎರಡು ಪಂದ್ಯಗಳ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಬಾರಿಗೆ ಭಾರತ ತಂಡವನ್ನ ಮುನ್ನಡೆಸಲಿದ್ದಾರೆ.
ಉಭಯ ತಂಡಗಳು ಮೊದಲ ಬಾರಿಗೆ ಟಿ20 ಸರಣಿಯಲ್ಲಿ ಮುಖಾಮುಖಿ ಆಗುತ್ತಿದ್ದು, ಚೊಚ್ಚಲ ಸರಣಿಗಾಗಿ ಭಾರತ ಹಾಗೂ ಐರ್ಲೆಂಡ್ ತಂಡಗಳು ಈಗಾಗಲೇ ಸಿದ್ಧತೆ ಆರಂಭಿಸಿದ್ದು, ಎರಡು ತಂಡಗಳ ನಡುವಿನ ಟಿ20 ಸರಣಿ ಜೂ.26ರಿಂದ ಆರಂಭವಾಗಲಿದೆ. ಐರ್ಲೆಂಡ್ ಪ್ರವಾಸಕ್ಕೂ ಭಾರತ ತಂಡದ ಸ್ಟಾರ್ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಹಲವು ಯುವ ಆಟಗಾರರು ಟೀಂ ಇಂಡಿಯಾದ ಪ್ರಮುಖ ಆಟಗಾರರಾಗಿ ಆಡಲಿದ್ದಾರೆ.
2022ರ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡವನ್ನ ಯಶಸ್ವಿಯಾಗಿ ಮುನ್ನಡೆಸಿ, ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಾರ್ದಿಕ್ ಪಾಂಡ್ಯ, ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಕ್ಯಾಪ್ಟನ್ ಆಗಿ ತಂಡವನ್ನ ಮುನ್ನಡೆಸಲಿದ್ದಾರೆ. ಉಭಯ ತಂಡಗಳ ನಡುವಿನ 2 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಜೂ.26ರಂದು ಹಾಗೂ 2ನೇ ಪಂದ್ಯ ಜೂ.28ರಂದು ನಡೆಯಲಿದೆ. ಈ ಎರಡು ಪಂದ್ಯಗಳು ಸಹ ಡಬ್ಲಿನ್ನಲ್ಲಿ ನಡೆಯಲಿದೆ.
ಭಾರತ ತಂಡ:
ಹಾರ್ದಿಕ್ ಪಾಂಡ್ಯ(ನಾಯಕ), ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ಭುವನೇಶ್ವರ್ ಕುಮಾರ್, ರಾಹುಲ್ ತ್ರಿಪಾಠಿ, ಯುಜು಼ವೇಂದ್ರ ಚಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಶದೀಪ್ ಸಿಂಗ್ ಹಾಗೂ ಉಮ್ರಾನ್ ಮಲ್ಲಿಕ್.
========================
ಐರ್ಲೆಂಡ್ ತಂಡ ಪ್ರಕಟ:
ಭಾರತದ ವಿರುದ್ಧ ನಡೆಯುವ ಎರಡು ಪಂದ್ಯಗಳ ಟಿ20 ಸರಣಿಗೆ ತಯಾರಿ ಆರಂಭಿಸಿರುವ ಐರ್ಲೆಂಡ್, T20I ಸರಣಿಗೆ 14 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಆರಂಭಿಕ ಆಟಗಾರ ಸ್ಟೀಫನ್ ಡೊಹೆನಿ ಮತ್ತು ಬಲಗೈ ವೇಗದ ಬೌಲರ್ ಕಾನರ್ ಓಲ್ಫರ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಆಂಡ್ರ್ಯೂ ಬಾಲ್ಬರ್ನಿ ಐರ್ಲೆಂಡ್ ತಂಡವನ್ನ ಮುನ್ನಡೆಸಲಿದ್ದಾರೆ.
ಐರ್ಲೆಂಡ್ ತಂಡ:
ಆಂಡ್ರ್ಯೂ ಬಾಲ್ಬಿರ್ನಿ(ನಾಯಕ), ಮಾರ್ಕ್ ಅಡೇರ್, ಕರ್ಟಿಸ್ ಕ್ಯಾಂಫರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮೆಕ್ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್ ಹಾಗೂ ಕ್ರೇಗ್ ಯಂಗ್