ವಿಶ್ವ ಕ್ರಿಕೆಟ್‌ನ ಬೆಸ್ಟ್ ಕ್ಯಾಪ್ಟನ್(Best Captain) ಯಾರು? ಎಂಬ ಚರ್ಚೆಗೆ ಕೊನೆ ಅನ್ನೋದೆ ಇಲ್ಲ. ಪ್ರತಿ ಬಾರಿಯೂ ಒಂದಲ್ಲಾ ಒಂದು ಕಾರಣಕ್ಕೆ ಹಲವು ಕ್ಯಾಪ್ಟನ್‌ಗಳು ಬೆಸ್ಟ್ ಎನಿಸಿದ್ದಾರೆ. ಆದರೆ ಸದ್ಯದ ಮಟ್ಟಿಗೆ 2022ರ T20I ಕ್ರಿಕೆಟ್‌ನ ಉತ್ತಮ ನಾಯಕ ರೋಹಿತ್ ಶರ್ಮ(Rohit Sharma) ಅನ್ನೋದ್ರಲ್ಲಿ ಡೌಟ್ ಇಲ್ಲ.
ಅಂಕಿಅಂಶಗಳು ಸಹ “ಹಿಟ್ ಮ್ಯಾನ್ ಈಸ್ ದಿ ಬೆಸ್ಟ್” ಅನ್ನೋದನ್ನ ಪ್ರೂವ್ ಮಾಡುತ್ತಿದೆ. ಈ ವರ್ಷದ ಜನವರಿ 1ರಿಂದ ಈವರೆಗೂ ಆಡಿರುವ ಟಿ20 ಪಂದ್ಯಗಳಲ್ಲಿ ರೋಹಿತ್ ಶರ್ಮ, ಅತ್ಯಂತ ಯಶಸ್ವಿಯಾಗಿ ಟೀಂ ಇಂಡಿಯಾವನ್ನ ಮುನ್ನಡೆಸುವ ಮೂಲಕ ಸಕ್ಸಸ್ ತಂದುಕೊಟ್ಟಿದ್ದಾರೆ. 2022ರ ಜನವರಿ 1ರಿಂದ ಈವರೆಗೂ ಆಡಿರುವ T20I ಪಂದ್ಯಗಳಲ್ಲಿ ರೋಹಿತ್ ಸಾರಥ್ಯದಲ್ಲಿ ಭಾರತ 17 ಮ್ಯಾಚ್‌ಗಳನ್ನ ಗೆದ್ದಿದ್ದು, ಕೇವಲ 6 ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಆ ಮೂಲಕ 2022ರ ಟಿ20ಯಲ್ಲಿ ರೋಹಿತ್ ಶರ್ಮ, ಬೆಸ್ಟ್ ಕ್ಯಾಪ್ಟನ್ ಎನಿಸಿದ್ದಾರೆ.
ರೋಹಿತ್ ಶರ್ಮ ನಂತರ ಆಸ್ಟ್ರೇಲಿಯಾ ತಂಡದ ಆರನ್ ಫಿಂಚ್(Aaron Finch) 2ನೇ ಸ್ಥಾನದಲ್ಲಿದ್ದಾರೆ. 2022ರಲ್ಲಿ ಆರನ್ ಫಿಂಚ್, ನಾಯಕರಾಗಿ ಆಡಿರುವ 15 ಟಿ20 ಪಂದ್ಯಗಳಲ್ಲಿ 9 ಗೆಲುವು ಕಂಡಿದ್ದರೆ, 6 ಸೋಲು ಕಂಡಿದ್ದಾರೆ. ಇವರ ನಂತರ ಪಾಕಿಸ್ತಾನದ ನಾಯಕ ಬಾಬರ್ ಆಜಂ(Babar Azam), 3ನೇ ಸ್ಥಾನದಲ್ಲಿದ್ದಾರೆ. ವೈಯಕ್ತಿಕವಾಗಿ ಭರ್ಜರಿ ಬ್ಯಾಟಿಂಗ್ ಫಾರ್ಮ್‌ನಲ್ಲಿರುವ ಆಜಂ, T20Iನಲ್ಲಿ ದೊಡ್ಡಮಟ್ಟದ ಸಕ್ಸಸ್ ತಂದುಕೊಟ್ಟಿಲ್ಲ. ಬಾಬರ್ ಆಜಂ ನೇತೃತ್ವದಲ್ಲಿ ಪಾಕಿಸ್ತಾನ 8 ಟಿ20 ಪಂದ್ಯವನ್ನು ಗೆದ್ದಿದ್ದರೆ, 9 ಪಂದ್ಯದಲ್ಲಿ ಸೋಲಿನ ಆಘಾತ ಕಂಡಿದ್ದಾರೆ.
ಉಳಿದಂತೆ ಆಫ್ಘಾನಿಸ್ತಾನ ತಂಡದ ಕ್ಯಾಪ್ಟನ್ ಮೊಹಮ್ಮದ್ ನಬಿ 4ನೇ ಸ್ಥಾನದಲ್ಲಿದ್ದು, 8 T20I ಪಂದ್ಯಗಳಲ್ಲಿ ತಂಡವನ್ನ ಗೆಲುವಿನ ದಡ ಸೇರಿಸಿರುವ ನಬಿ, 7ರಲ್ಲಿ ಸೋಲಿನ ನಿರಾಸೆ ಅನುಭವಿಸಿದ್ದಾರೆ. 5ನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡದ ಕ್ಯಾಪ್ಟನ್ ದಸುನ್ ಶನಕಾ, 7 ಪಂದ್ಯದಲ್ಲಿ ತಂಡವನ್ನ ಜಯದ ದಡಮುಟ್ಟಿದ್ದರೆ, ಇಂಗ್ಲೆಂಡ್ ಟಿ20 ತಂಡದ ಹೊಸ ಸಾರಥಿ ಜೋಸ್ ಬಟ್ಲರ್ 6ನೇ ಸ್ಥಾನದಲ್ಲಿದ್ದರೆ. ಕಿವೀಸ್ ತಂಡದ ಯಶಸ್ವಿ ಕ್ಯಾಪ್ಟನ್ ಎನಿಸಿರುವ ಕೇನ್ ವಿಲಿಯಂಸನ್, 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.