ಟೀಮ್ ಇಂಡಿಯಾ (Team India) ಸಿಕ್ಕಪಟ್ಟೆ ಬ್ಯೂಸಿಯಾಗಿದೆ. ಒಂದರ ಮೇಲೊಂದು ಸರಣಿ ಆಟಗಾರರ ಫಿಟ್ನೆಸ್ ಟೆಸ್ಟ್ ಮಾಡುತ್ತಿದೆ. ಸದ್ಯ ಏಷ್ಯಾಕಪ್ನಲ್ಲಿ ಆಡುತ್ತಿರುವ ಟೀಮ್ ಇಂಡಿಯಾ T20 ವಿಶ್ವಕಪ್ಗೆ (T20 WC) ಸಿದ್ಧವಾಗುತ್ತಿದೆ. ಆದರೆ ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ ಎರಡು ಸರಣಿಗಳನ್ನಾಡಲಿದೆ (T20 Series). ಅದು ಕೂಡ 13 ದಿನಗಳಲ್ಲಿ 6 ಟಿ20 ಪಂದ್ಯಗಳನ್ನು ಆಡಲಿದೆ.
ಸೌತ್ ಆಫ್ರಿಕಾ (South Africa) ಮತ್ತು ಆಸ್ಟ್ರೇಲಿಯಾ (Australia) ವಿರುದ್ಧ ಭಾರತ ಚುಟುಕು ಕ್ರಿಕೆಟ್ ಸರಣಿಯನ್ನಾಡಲಿದೆ. ಇದು ವಿಶ್ವಕಪ್ಗೂ ಮೊದಲು ಆಡುವ ಕಟ್ಟಕಡೆಯ ಸರಣಿ ಆಗಿರಲಿದೆ. ಈ ಎರಡು ಸರಣಿಯಲ್ಲಿ ಭಾರತ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಎರಡು ವಾರಗಳ ಗ್ಯಾಪ್ನಲ್ಲಿ ಈ ಎರಡು ಸರಣಿ ನಡೆಯುವುದು ಆಟಗಾರರಿಗೂ ಸವಾಲು ಎನಿಸಲಿದೆ
ಆಸ್ಟ್ರೇಲಿಯಾ ವಿರುದ್ಧದ ಸರಣಿ
ಈ ಸರಣಿಯ 3 ಪಂದ್ಯಗಳು ಸೆಪ್ಟಂಬರ್ 20, 23 ಮತ್ತು 25 ರಂದು ನಡೆಯಲಿದೆ. ಮೊಹಾಲಿ, ನಾಗ್ಪುರ ಮತ್ತು ಹೈದ್ರಾಬಾದ್ನಲ್ಲಿ ಈ ಪಂದ್ಯಗಳು ನಡೆಯಲಿದೆ. ಟ್ರಾವೆಲಿಂಗ್ ಜೊತೆ ಬೇರೆ ಬೇರೆ ವಾತಾವರಣಕ್ಕೂ ಭಾರತ ಹೊಂದಿಕೊಳ್ಳಬೇಕಿದೆ. ಆಸ್ಟ್ರೇಲಿಯಾ ಬಲಿಷ್ಠ ತಂಡವಾಗಿರುವ ಕಾರಣದಿಂದ ಇದು ಸವಾಲಿನ ಸರಣಿ ಆಗುವುದು ಖಚಿತ.
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ
ಹರಿಣಗಳ ವಿರುದ್ಧದ ಸರಣಿಯಲ್ಲಿ 6 ಪಂದ್ಯಗಳು ಇರಲಿದೆ. 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿ ಇದಾಗಿರಲಿದೆ. ಸೆಪ್ಟಂಬರ್ 28, ಅಕ್ಟೋಬರ್ 2 ಮತ್ತು ಅಕ್ಟೋಬರ್ 4 ರಂದು ತಿರುವನಂತಪುರ, ಗುವಾಹಟಿ ಮತ್ತು ಇಂಧೋರ್ನಲ್ಲಿ ಪಂದ್ಯ ನಡೆಯಲಿದೆ. ಇದಾದ ಬಳಿಕ ಏಕದಿನ ಸರಣಿಯ ಪಂದ್ಯಗಳು ನಡೆಯಲಿದೆ. ಈ ಎಲ್ಲಾ ಸರಣಿಗಳು ಅಕ್ಟೋಬರ್ 11 ಕ್ಕೆ ಅಂತ್ಯ ಕಾಣಲಿದೆ. ಆ ಬಳಿಕ ಭಾರತ ಆಸ್ಟ್ರೇಲಿಯಾಕ್ಕೆ ಟಿ20 ವಿಶ್ವಕಪ್ ಆಡಲು ತೆರಳಲಿದೆ.