ಟೀಮ್ ಇಂಡಿಯಾ (Team India) ಹಾಂಕಾಂಗ್ (Hongkong) ವಿರುದ್ಧದ ಪಂದ್ಯಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸುಲಭ ಎದುರಾಳಿಯನ್ನು ಮಣ್ಣುಮುಕ್ಕಿಸಬಹುದು ಅನ್ನುವ ಲೆಕ್ಕಾಚಾರವಿದೆ. ಈ ಮ್ಯಾಚ್ನಲ್ಲಿ ಸಾಕಷ್ಟು ದಾಖಲೆಗಳು ಕ್ರಿಯೇಟ್ ಆಗುವ ಸಾಧ್ಯತೆಗಳಿವೆ. ಅದರಲ್ಲೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಹೊಸ ರೆಕಾರ್ಡ್ನ ಹೊಸ್ತಿಲಲ್ಲಿದ್ದಾರೆ. ಹಾಂಕಾಂಗ್ ವಿರುದ್ಧ ಭಾರತ ಗೆದ್ರೆ ರೋಹಿತ್ ಟೀಮ್ ಇಂಡಿಯಾದ 2ನೇ ಯಶಸ್ವಿ ಕ್ಯಾಪ್ಟನ್ (Captain)ಅನ್ನುವ ಪಟ್ಟಕ್ಕೇರಲಿದ್ದಾರೆ.
ರೋಹಿತ್ ಕ್ಯಾಪ್ಟನ್ಸಿಯಲ್ಲಿ ಭಾರತ (Ind) ಇಲ್ಲಿ ತನಕ 36 ಪಂದ್ಯಗಳನ್ನು ಆಡಿದೆ. ಈ ಪೈಕಿ ಸೋತಿರುವುದು ಕೇವಲ 6ನ್ನು ಮಾತ್ರ. ಹೀಗಾಗಿ 30 ಗೆಲುವುಗಳ ದಾಖಲೆ ವಿರಾಟ್ ಕೊಹ್ಲಿಯ ಗೆಲುವಿನ ದಾಕಲೆಗೆ ಸಮವಾಗಿದೆ. ಹಾಂಕಾಂಗ್ ವಿರುದ್ಧ ಗೆದ್ದರೆ ರೋಹಿತ್ 31ಕ್ಕೇರುತ್ತಾರೆ. ಧೋನಿ ಬಳಿಕ ಟಿ20 ಕ್ರಿಕೆಟ್ನಲ್ಲಿ (T20 Cricket) ಭಾರತದ ಬೆಸ್ಟ್ ಕ್ಯಾಪ್ಟನ್ ಅನ್ನುವ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಅಂದಹಾಗೇ ರೋಹಿತ್ ಟೀಮ್ ಇಂಡಿಯಾದ ಪರ್ಮನೆಂಟ್ ಕ್ಯಾಪ್ಟನ್ ಆಗಿ ಕೇವಲ 8 ತಿಂಗಳುಗಳಾಗಿವೆ ಅಷ್ಟೇ. ಇಷ್ಟರಲ್ಲೇ ಟಿ20ಯಲ್ಲಿ ರೋಹಿತ್ ಆರ್ಭಟ ಶುರುವಾಗಿದೆ.
50 ಪಂದ್ಯದಲ್ಲಿ 30 ಪಂದ್ಯ ಗೆದ್ದಿದ್ದ ಕೊಹ್ಲಿ
ವಿರಾಟ್ ಕೊಹ್ಲಿ (Virat Kohli) ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ಗಳಲ್ಲಿ ಒಬ್ಬರು. ಕೊಹ್ಲಿ ಕೆಳಗಡೆ ಬಾರತ 50 ಟಿ20 ಪಂದ್ಯಗಳನ್ನು ಆಡಿತ್ತು. ಆ ಪೈಕಿ ಭಾರತ 30ನ್ನು ಗೆದ್ದಿತ್ತು. ಧೋನಿ ಬಳಿಕ ವಿರಾಟ್ ಶ್ರೇಷ್ಠ ನಾಯಕರು ಅನ್ನುವ ಲೆಕ್ಕಾಚಾರವಿತ್ತು. ಈಗ ರೋಹಿತ್ ಕೊಹ್ಲಿಗೆ ಮುಂದೆ ಹೋಗುತ್ತಾರೆ.
ಎಂ.ಎಸ್. ಧೋನಿ 72ರಲ್ಲಿ 41 ಗೆಲುವು
ಟೀಮ್ ಇಂಡಿಯಾವನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದ ಎಂ.ಎಸ್.ಧೋನಿ (MS Dhoni) 72 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಪೈಕಿ ಧೋನಿ ಗೆದ್ದಿದ್ದು 41 ಪಂದ್ಯಗಳನ್ನ. ಧೋನಿ ಈಗಲೂ ಟೀಮ್ ಇಂಡಿಯಾ ಪರ ಅತಿಹೆಚ್ಚು ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ ಮತ್ತುಗೆಲ್ಲಿಸಿದ ನಾಯಕ ಅನ್ನುವ ಹಿರಿಮೆ ಹೊಂದಿದ್ದಾರೆ.
ಮಾರ್ಗಾನ್ ಹೆಸರಲ್ಲಿ ದಾಖಲೆ
ವಿಶ್ವ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಇಯಾನ್ ಮೊರ್ಗಾನ್ (Eoin Morgan) ಅತಿಹೆಚ್ಚು ಗೆಲುವು ಕಂಡ ದಾಖಲೆ ಹೊಂದಿದ್ದಾರೆ. ಮಾರ್ಗಾನ್ 42 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ್ದರು. ಒಟ್ಟಿನಲ್ಲಿ ರೋಹಿತ್ ದಾಖಲೆ ಟೀಮ್ ಇಂಡಿಯಾದ ಮಟ್ಟಿಗೆ 2ನೇ ಶ್ರೇಷ್ಠ ಕ್ಯಾಪ್ಟನ್ಸಿಯಾಗಲಿದೆ.