Team india – ಲೂಡೋ ಗೇಮ್ ಆಡುತ್ತಿರುವುದು ಯಾರು ?

ವಿರಾಟ್ ಕೊಹ್ಲಿ ಅವರ ಕಳಪೆ ಫಾರ್ಮ್ ಚರ್ಚೆ ಆಗುತ್ತಿರುವುದು ಭಾರತದಲ್ಲಿ ಮಾತ್ರವಲ್ಲ. ಇಡೀ ಕ್ರಿಕೆಟ್ ಜಗತ್ತಿನಲ್ಲೇ ವಿರಾಟ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ.
ಇದೀಗ ಪಾಕಿಸ್ತಾನದ ಮಾಜಿ ಆಟಗಾರ ಡನಿಶ್ ಕನೆರಿಯಾ ಕೂಡ ವಿರಾಟ್ ಕೊಹ್ಲಿ ಅವರ ಕಳಪೆ ಬ್ಯಾಟಿಂಗ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ.
ಅಲ್ಲದೆ ಡನಿಶ್ ಕನೆರಿಯಾ ಅವರು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.
ಇತ್ತೀಚೆಗೆ ಕಪಿಲ್ ದೇವ್ ಅವರು ವಿರಾಟ್ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಆರ್. ಅಶ್ವಿನ್ ಅವರನ್ನು ಕೈಬಿಡುವುದಾದ್ರೆ, ಟಿ-20 ತಂಡದಿಂದ ವಿರಾಟ್ ಕೊಹ್ಲಿಯವರನ್ನು ಯಾಕೆ ಕೈಬಿಡಬಾರದು ಎಂದು ಹೇಳಿದ್ದರು.
ಕಪಿಲ್ ದೇವ್ ಹೇಳಿಕೆಗೆ ವ್ಯಾಪಕವಾಗಿ ಪರ ಮತ್ತು ವಿರೋಧಗಳು ವ್ಯಕ್ತವಾಗಿದ್ದವು. ಹಾಗೇ ಟೀಮ್ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ಕೂಡ ಕಪಿಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಆದ್ರೆ ಈಗ ಪಾಕ್ ನ ಮಾಜಿ ಆಟಗಾರ ಡನಿಶ್ ಕನೆರಿಯಾ ಅವರು ಕಪಿಲ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ವಿಶ್ವದ ಶ್ರೇಷ್ಠ ಸ್ಪಿನ್ನರ್ ಆರ್. ಅಶ್ವಿನ್ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗುತ್ತದೆ. ಆದ್ರೆ ವಿರಾಟ್ ಅವರನ್ನು ಯಾಕೆ ಡ್ರಾಪ್ ಮಾಡೋಕೆ ಆಗಲ್ಲ. ಎಲ್ಲಿದ್ದಾರೆ ದೀಪಕ್ ಹೂಡಾ. ಆಯ್ಕೆ ಸಮಿತಿ ಮತ್ತು ಟೀಮ್ ಇಂಡಿಯಾದ ಟೀಮ್ ಮ್ಯಾನೇಜ್ ಮೆಂಟ್ ಯುವ ಆಟಗಾರರ ಭವಿಷ್ಯದ ಜೊತೆ ಯಾಕೆ ಚೆಲ್ಲಾಟವಾಡುತ್ತಿದೆ. ಟೀಮ್ ಇಂಡಿಯಾ, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ಭಾರತೀಯರ ಜೊತೆ ಲೂಡೊ ಆಡುತ್ತಿರುವುದು ಯಾರು ? ಆರ್ಶಾದೀಪ್, ದೀಪಕ್ ಹೂಡಾ ಮತ್ತು ಸೂರ್ಯ ಕುಮಾರ್ ಯಾದವ್ ಅವರಿಗೆ ಆತ್ಮವಿಶ್ವಾಸವನ್ನು ತುಂಬಿ. ಭಾರತೀಯ ಕ್ರಿಕೆಟ್ ಗೆ ಬೆನ್ನಲುಬಾಗುತ್ತಾರೆ ಎಂದು ಡನಿಶ್ ಕನೇರಿಯಾ ಹೇಳಿದ್ದಾರೆ.
ಒಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ತಂಡಗಳ ಸೋಲು ಮತ್ತು ಗೆಲುವುಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಮುಂಬರುವ ವಿಶ್ವಕಪ್ ಟೂರ್ನಿಯ ಬಗ್ಗೆಯೂ ಪ್ರಸ್ತಾಪ ಆಗುತ್ತಿಲ್ಲ. ಏನಿದ್ರೂ ವಿರಾಟ್ ಕಳಪೆ ಬ್ಯಾಟಿಂಗ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ.