Team India – ಫೋಟೋ ತೆಗೆಯೋಕ್ಕಾದ್ರೂ ಬಿಟ್ಟು ಬಿಡ್ರಪ್ಪ… ರೋಹಿತ್ ಅಂದಿದ್ಯಾಕೆ..?

ಇಂಗ್ಲೆಂಡ್ ವಿರದ್ದದ ಏಕದಿನ ಸರಣಿ ಗೆದ್ದ ಟೀಮ್ ಇಂಡಿಯಾದ ಸಂತಸಕ್ಕೆ ಪಾರವೇ ಇರಲಿಲ್ಲ. ನಿರ್ಣಾಯಕ ಪಂದ್ಯದಲ್ಲಿ ರಿಷಬ್ ಪಂತ್ ಅವರ ಅಜೇಯ ಶತಕ, ಹಾರ್ದಿಕ್ ಪಾಂಡ್ಯ ಅವರ ಆಲ್ ರೌಂಡ್ ಆಟ ಮತ್ತು ರವೀಂದ್ರ ಜಡೇಜಾ ಅವರ ಅದ್ಭುತ ಫೀಲ್ಡಿಂಗ್ ನಿಂದ ಇಂಗ್ಲೆಂಡ್ ತಂಡವನ್ನು ಐದು ವಿಕೆಟ್ ಗಳಿಂದ ಸೋಲಿಸಿ ಸರಣಿಯನ್ನು ಗೆದ್ದುಕೊಂಡಿತ್ತು.
ಏಕದಿನ ಸರಣಿಯ ಟ್ರೋಫಿಯನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ತೆಗೆದುಕೊಳ್ಳುತ್ತಿರುವಂತೆ ಆಟಗಾರರು ಕುಣಿದು ಕುಪ್ಪಳಿಸಿದ್ರು. ಕೈಯಲ್ಲಿ ಶಾಂಪೇನ್ ಬಾಟಲ್ ತೆಗೆದುಕೊಂಡು ಒಬ್ಬರ ಮೇಲೆ ಒಬ್ಬರು ಚಿಮ್ಮುಸುತ್ತಾ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದರು.
ಅದರಲ್ಲೂ ಶಿಖರ್ ಧವನ್ ಮತ್ತು ರಿಷಬ್ ಪಂತ್ ರೋಹಿತ್ ಶರ್ಮಾ ಮೇಲೆ ಶಾಂಪೇನ್ ಚಿಮ್ಮುಸಿದ್ರು. ಇದರಿಂದ ಹತಾಶೆಗೊಂಡ ರೋಹಿತ್ ಶರ್ಮಾ, ಕನಿಷ್ಠ ಫೋಟೋಗಾದ್ರೂ ಪೋಸ್ ಕೊಡಿ ಎಂದು ಕೇಳಿಕೊಂಡ್ರು. ಆದರೂ ಧವನ್ ಮಾತ್ರ ರೋಹಿತ್ ಮೆಲೆ ಶಾಂಪೇನ್ ಚಿಮ್ಮಿಸಿ ಖುಷಿ ಪಟ್ಟರು.
https://twitter.com/i/status/1548729884016525315
ಅಂತಿಮವಾಗಿ ರೋಹಿತ್ ಶರ್ಮಾ ಎಲ್ಲರನ್ನು ಜೊತೆ ಸೇರಿಸಿಕೊಂಡು ಫೋಟೋಗೆ ಪೋಸ್ ಕೊಟ್ರು. ಅಲ್ಲದೆ ಏಕದಿನ ಸರಣಿಯ ಟ್ರೋಫಿಯನ್ನು ಆರ್ಶಾದೀಪ್ ಅವರ ಕೈಗೆ ನೀಡಿದ್ರು.
ಅಂದ ಹಾಗೇ, ಯಾವುದೇ ಸರಣಿ ಗೆದ್ದಾಗ ಟ್ರೋಫಿಯನ್ನು ತಂಡದ ಯುವ ಆಟಗಾರರ ಕೈಗೆ ನೀಡುವ ಸಾಂಪ್ರದಾಯವನ್ನು ಟೀಮ್ ಇಂಡಿಯಾ ಹಲವು ವರ್ಷಗಳಿಂದ ಪಾಲಿಸಿಕೊಂಡು ಬಂದಿದೆ.

ಹೀಗಾಗಿ ಈ ಬಾರಿ ಇಂಗ್ಲೆಂಡ್ ಪ್ರವಾಸದಲ್ಲಿ ಚೊಚ್ಚಲ ಪಂದ್ಯವನ್ನು ಆಡಿದ್ದ ಆರ್ಶಾದೀಪ್ ಸಿಂಗ್ ಅವರ ಕೈಗೆ ರೋಹಿತ್ ಶರ್ಮ ಟ್ರೋಫಿಯನ್ನು ನೀಡಿದ್ರು.
ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವನ್ನು ಸೋತ್ರೂ, ಟಿ-20 ಮತ್ತು ಏಕದಿನ ಸರಣಿಯನ್ನು ಗೆದ್ದಿರುವುದರಿಂದ ಟೀಮ್ ಇಂಡಿಯಾ ಆಟಗಾರರು ಈ ಗೆಲುವಿನ ಸಂಭ್ರಮವನ್ನು ಸ್ಮರಣೀಯವಾಗಿರಿಸಿದ್ರು. ಇನ್ನು ಇಂಗ್ಲೆಂಡ್ ನೆಲದಲ್ಲಿ ಟೀಮ್ ಇಂಡಿಯಾ ಏಕದಿನ ಸರಣಿ ಗೆದ್ದಿರುವುದು ಇದು ಮೂರನೇ ಬಾರಿ. ಹೀಗಾಗಿ ಈ ಗೆಲುವು ಹೆಚ್ಚಿನ ಮಹತ್ವ ಪಡೆದುಕೊಂಡಿತ್ತು.