Rishabh Pant girlfriend ರಿಷಬ್ ಪಂತ್ ಗೆ ಗರ್ಲ್ ಫ್ರೆಂಡ್ ಹೇಳಿದ್ದೇನು ? -ಇದು ಪ್ರೀತಿಯ ವಿಷ್ಯ..!

ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿರುವ ಹೃದಯ ಬಡಿತ ಹೆಚ್ಚಾಗುತ್ತದೆ. ಯಾವಾಗ ಔಟ್ ಆಗ್ತಾರೆ ಅನ್ನೋ ಆತಂಕ ಇದ್ದೇ ಇರುತ್ತದೆ.
ಯಾಕಂದ್ರೆ ರಿಷಬ್ ಪಂತ್ ಅವರ ಆಟವೇ ಅಂತಹುದ್ದೇ. ಹೊಡಿಬಡಿ ಆಟವೇ ಮೂಲಮಂತ್ರವಾಗಿರುವುದರಿಂದ ಪ್ರತಿ ಎಸೆತವೂ ಬೌಂಡರಿ -ಸಿಕ್ಸರ್ ಆಗಬೇಕು ಅನ್ನೋ ತುಡಿತ ರಿಷಬ್ ಪಂತ್ ಅವರದ್ದು. ಹಾಗಾಗಿ ರಿಷಬ್ ಪಂತ್ ಬ್ಯಾಟಿಂಗ್ ಮಾಡುತ್ತಿರುವಾಗ ಗ್ಯಾರಂಟಿ ಆಟಗಾರ ಎಂದು ಹೇಳುವ ಹಾಗಿಲ್ಲ.
ಆದ್ರೆ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ಅವರ ಆಟದ ವೈಖರಿಯೇ ವಿಭಿನ್ನವಾಗಿತ್ತು. ಬೀಸು ಹೊಡೆತಗಳಿಗೆ ಮುಂದಾಗದೇ ಜವಾಬ್ದಾರಿಯ ಆಟದ ಕಡೆಗೆ ಗಮನ ಹರಿಸಿದ್ರು. ತಾಳ್ಮೆ, ಏಕಾಗ್ರತೆ ಮತ್ತು ಕೆಟ್ಟ ಹೊಡೆತಗಳಿಗೆ ಕೈ ಹಾಕದೇ ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಏಕದಿನ ಕ್ರಿಕೆಟ್ ನಲ್ಲಿ ಚೊಚ್ಚಲ ಶತಕದ ಸಂಭ್ರಮದಲ್ಲೂ ತೇಲಾಡಿದ್ರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ರಿಷಬ್ ಪಂತ್ ಕ್ರೀಸ್ ಗೆ ಆಗಮಿಸಿದ್ದಾಗ ಟೀಮ್ ಇಂಡಿಯಾದ ಮೊತ್ತ 21ಕ್ಕೆ2. ನಂತರ ವಿರಾಟ್ ಮತ್ತು ಸ್ಕೈ ಔಟಾದಾಗ ತಂಡದ ಮೊತ್ತ 72ಕ್ಕೆ 4.

ಬಳಿಕ ಹಾರ್ದಿಕ್ ಪಾಂಡ್ಯ ಅವರ ಜೊತೆ ಸೇರಿಕೊಂಡು ಅದ್ಭುತವಾದ ಇನಿಂಗ್ಸ್ ಕಟ್ಟಿದ್ದರು. ಅಲ್ಲದೆ ಐದನೇ ವಿಕೆಟ್ ಗೆ 133 ರನ್ ಕೂಡ ಕಲೆ ಹಾಕಿದ್ರು. ಅಂತಿಮವಾಗಿ ರಿಷಬ್ ಪಂತ್ 113 ಎಸೆತಗಳಲ್ಲಿ 16 ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ಸಹಾಯದಿಂದ ಅಜೇಯ 125 ರನ್ ದಾಖಲಿಸಿದ್ರು. ಅದರಲ್ಲೂ 42ನೇ ಓವರ್ ನಲ್ಲಿ ಡೆವಿಡ್ ವಿಲ್ಲೆ ಅವರ ಸತತ ಐದು ಎಸೆತಗಳನ್ನು ಬೌಂಡರಿ ಗೆರೆ ದಾಟಿಸಿ ಇಂಗ್ಲೀಷರಿಗೆ ತನ್ನ ಬ್ಯಾಟಿಂಗ್ ಅಬ್ಬರ ಹೇಗಿದೆ ಎಂಬುದನ್ನು ತೋರಿಸಿಕೊಟ್ರು
ಮ್ಯಾಚ್ ವಿನ್ನಿಂಗ್ ಆಟಕ್ಕೆ ರಿಷಬ್ ಪಂತ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು.

ಇದೀಗ ರಿಷಬ್ ಪಂತ್ ಆಟಕ್ಕೆ ನಾಯಕ ರೋಹಿತ್ ಶರ್ಮಾ, ಹೆಡ್ ಕೋಚ್ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಆಟಗಾರರು, ಮಾಜಿ ಆಟಗಾರರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹಾಗೇ ರಿಷಬ್ ಪಂತ್ ಅವರಿಗೆ ವಿಶೇಷ ವ್ಯಕ್ತಿಯಿಂದ ವಿಶೇಷ ಅಭಿನಂದನೆಯೂ ಬಂದಿದೆ. ಅದು ಬೇರೆ ಯಾರು ಅಲ್ಲ. ರಿಷಬ್ ಪಂತ್ ಅವರ ಪ್ರೆಯಸಿ ಇಶಾ ನೇಗಿ.
ನಿಶಾ ನೇಗಿ ಅವರು ರಿಷಬ್ ಪಂತ್ ಅವರನ್ನು ಚಾಂಪಿಯನ್ ಎಂದು ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಮುಂಬೈ ಮೂಲದ ಇಶಾ ಅವರು ರಿಷಬ್ ಪಂತ್ ಜೊತೆ ಬಹಿರಂಗವಾಗಿಯೇ ಡೇಟಿಂಡ್ ಮಾಡುತ್ತಿದ್ದಾರೆ. ಅಲ್ಲದೆ ರಿಷಬ್ ಪಂತ್ ತಂಗಿ ಜೊತೆ ಐಪಿಎಲ್ ಮತ್ತು ಇನ್ನಿತರ ಪಂದ್ಯಗಳನ್ನು ವೀಕ್ಷಣೆ ಮಾಡಿದ್ದಾರೆ.