ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹರಿಣಗಳ ನಾಡಲ್ಲಿ ಟೆಸ್ಟ್ ಸರಣಿ ಗೆಲ್ಲುವ ಕನಸು ಟೀಮ್ ಇಂಡಿಯಾಕ್ಕಿದೆ. ಡಿಸೆಂಬರ್ 26ರಂದು ಮೊದಲ ಟೆಸ್ಟ್ ಪಂದ್ಯ ಅರಂಭವಾಗಲಿದೆ. ಟೀಮ್ ಇಂಡಿಯಾದ ಕಾಂಬಿನೇಷನ್ ಸೆಟ್ ಮಾಡುವ ಬಗ್ಗೆ ನಾಯಕ ಹಾಗೂ ಕೋಚ್ ತಲೆ ಕೆಡಿಸಿಕೊಂಡಿದ್ದಾರೆ.
ಮಯಾಂಕ್ ಅಗರ್ವಾಲ್ ಮತ್ತು ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತ. ಚೇತೇಶ್ವರ ಪೂಜಾರಾ ಮತ್ತು ವಿರಾಟ್ ಕೊಹ್ಲಿ ಜಾಗವೂ ಫಿಕ್ಸ್. ಶ್ರೇಯಸ್ಗೆ ಅವಕಾಶ ನೀಡಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಬ್ಯಾಟಿಂಗ್ ಲೈನ್ ಅಪ್ ನಲ್ಲಿ ಉಳಿದಿರುವುದು ಒಂದೇ ಸ್ಥಾನ. ಅದಕ್ಕಾಗಿ ಹನುಮ ವಿಹಾರಿ ಮತ್ತು ಅಜಿಂಕ್ಯಾ ರಹಾನೆ ನಡುವೆ ಫೈಟ್ ನಡೆಯುತ್ತಿದೆ. ಅನುಭವದಲ್ಲಿ ರಹಾನೆಗೆ ಮೇಲುಗೈಯಾದರೆ ವಿಹಾರಿಗೆ ಅದ್ಭುತ ಪ್ರದರ್ಶನಗಳ ಬಲವಿದೆ.
ಇನ್ನೊಂದು ಕಡೆ ಒಬ್ಬ ಸ್ಪಿನ್ನರ್ಗೆ ಅವಕಾಶ ಕೊಡುವುದು ಅನಿವಾರ್ಯ ಆಗಿರುವುದರಿಂದ ಅಶ್ವಿನ್ ಜಾಗ ಫಿಕ್ಸ್. ಆದರೆ ಬೌಲಿಂಗ್ ಆಲ್ರೌಂಡರ್ ಕೋಟಾ ಶಾರ್ದೂಲ್ ಠಾಕೂರ್ ಪಾಲಾಗುವುದು ಬಹುತೇಕ ನಿಶ್ಚಿತ. ರಿಷಬ್ ಪಂತ್ ಸುಲಭವಾಗಿ ವೃದ್ಧಿಮಾನ್ ಸಾಹಾ ಜಾಗ ಆಕ್ರಮಿಸಿಕೊಳ್ಳಲಿದ್ದಾರೆ.
ಬೌಲಿಂಗ್ ವಿಭಾಗದಲ್ಲೂ ಸಣ್ಣ ಕನ್ಫ್ಯೂಷನ್ ಇದೆ. ಜಸ್ಪ್ರಿತ್ ಬುಮ್ರತಂಡಕ್ಕೆ ವಾಪಾಸಾಗಿದ್ದಾರೆ. ಮೊಹಮ್ಮದ್ ಶಮಿ ಕೂಡ ತಂಡ ಸೇರಿಕೊಂಡಿದ್ದಾರೆ. ಹೀಗಾಗಿ ಇವರಿಬ್ಬರಿಗೆ ಸ್ಥಾನ ಗ್ಯಾರೆಂಟಿ. ಇನ್ನು ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ನಡುವೆ ಒಂದು ಸ್ಥಾನಕ್ಕೆ ಫೈಟ್ ಇದೆ. ಒಟ್ಟಿನಲ್ಲಿ ಬ್ಯಾಟಿಂಗ್ನಲ್ಲಿ 1 ಸ್ಥಾನ ಹಾಗೂ ಬೌಲಿಂಗ್ನ ಒಂದು ಸ್ಥಾನ ಬಿಟ್ಟು ಉಳಿದೆಲ್ಲಾ ಜಾಗಗಳು ಟೀಮ್ ಇಂಡಿಯಾದಲ್ಲಿ ಆಲ್ಮೋಸ್ಟ್ ಫಿಕ್ಸ್ ಅಗಿದೆ.