ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿ ತೀವ್ರ ಕುತೂಹಲ ಕೆರಳಿಸಿದೆ. ತಂಡದಲ್ಲಾಗುವ ಬದಲಾವಣೆಗಳು ಟೂರ್ನಿಯ ರೋಚಕತೆ ಹೆಚ್ಚಿಸಲದೆ. ಈ ಮಧ್ಯೆ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸಿಕ್ಕಾಪಟ್ಟೆ ರ್ಚೆ ಆಗುತ್ತದೆ. ಎರಡು ಹೊಸ ಫ್ರಾಂಚೈಸಿಗಳ ಸೇರ್ಪಡೆ ಆಟಗಾರರಿಗೆ ಕೋಟಿ ಕೋಟಿ ಸಂಪಾದನೆಯ ದಾರಿ ಮಾಡಿಕೊಡಲಿದೆ.
ಇಷ್ಟು ಹೊತ್ತಿಗೆ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಮುಗಿದು ಬಿಡಬೇಕಿತ್ತು. ಆದರೆ ಅಹ್ಮದಾಬಾದ್ ಫ್ರಾಂಚೈಸಿಯಲ್ಲಿರುವಸ ತಾಂತ್ರಿಕ ಕಾರಣಗಳಿಂದ ಹರಾಜು ಪ್ರಕ್ರಿಯೆ ಮುಂದಕ್ಕೆ ಸಾಗುತ್ತಾ ಬಂದಿದೆ. ಈ ಮಧ್ಯೆ ಬಿಸಿಸಿಐನ ಉನ್ನತ ಮೂಲಗಳ ಪ್ರಕಾರ ಹರಾಜು ನಡೆಯುವ ಜಾಗ ಮತ್ತು ದಿನಾಂಕವನ್ನು ಫಿಕ್ಸ್ ಮಾಡಲಾಗಿದೆಯಂತೆ
ಐಪಿಎಲ್ 2022ರ ಮೆಗಾ ಹರಾಜು ಪ್ರಕ್ರಿಯೆಯು ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆ ಇದೆ. ಫೆಬ್ರುವರಿ 7 ಮತ್ತು 8ರಂದು ಆಯೋಜನೆಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ಹೇಳುತ್ತಿವೆ. ಕೋವಿಡ್ ಸ್ಥಿತಿ ನಿಯಂತ್ರಣದಲ್ಲಿ ಇದ್ದರೆ ಐಪಿಎಲ್ ಮೆಗಾ ಆಟಗಾರರ ಹರಾಜನ್ನು ಭಾರತದಲ್ಲೇ ನಡೆಸಲಾಗುವುದು. ಈ ವರ್ಷ ಐಪಿಎಲ್ನಲ್ಲಿ ಎರಡು ಹೊಸ ತಂಡಗಳು ಸೇರ್ಪಡೆಯಾಗಿವೆ. ಸಂಜೀವ್ ಗೋಯೆಂಕಾ ಒಡೆತನದ ಲಖನೌ ಮತ್ತು ವೆಂಚರ್ ಕ್ಯಾಪಿಟಲ್ಸ್ ಫರ್ಮ್ ಸಿವಿಸಿ ಮಾಲೀಕತ್ವದ ಅಹಮದಾಬಾದ್ ತಂಡಗಳು ಪದಾರ್ಪಣೆ ಮಾಡಲಿವೆ. ಈ ತಂಡಗಳಿಗೂ ಆಟಗಾರರ ಆಯ್ಕೆ ನಡೆಯಲಿದೆ.
ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ಮತ್ತು ಸಿವಿಸಿ ಮಾಲೀಕತ್ವದ ಅಹಮದಾಬಾದ್ ತಂಡಗಳು ಹೊಸದಾಗಿ ಸೇರ್ಪಡೆಯಾಗಿರುವುದರಿಂದ ಆಟಗಾರರಿಗಾಗಿ ದೊಡ್ಡ ಫೈಟ್ ನಡೆಯಲಿದೆ. ಹೊಸ ಫ್ರಾಂಚೈಸಿಗಳು 33 ಕೋಟಿ ರುಪಾಯಿಗಳಲ್ಲಿ ತಮಗೆ ಬೇಕಾದ ಮೂವರು ಆಟಗಾರರನ್ನು ಖರೀದಿಸಬಹುದಾಗಿದೆ. ಮೊದಲ ಅದ್ಯತೆಯ ಆಟಗಾರನಿಗೆ 15 ಕೋಟಿ, ಎರಡನೇ ಆಟಗಾರನಿಗೆ 11 ಕೋಟಿ ಹಾಗೂ ಮೂರನೇ ಆಟಗಾರನಿಗೆ 7 ಕೋಟಿ ರುಪಾಯಿ ಪಡೆಯಲಿದ್ದಾರೆ. ಮೂರು ಆಟಗಾರರ ಪೈಕಿ ಇಬ್ಬರು ಆಟಗಾರರು ಭಾರತೀಯರಾಗಿರಬೇಕು. ಆದರೆ ಇಲ್ಲಿ ತನಕ ಹೊಸ ಫ್ರಾಂಚೈಸಿಗಳು ತಮ್ಮ ಆದ್ಯತೆಯ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ತಿಳಿಸಿಲ್ಲ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಐಪಿಎಲ್ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ.