ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಕಟಕ್ನ ಭಾರಾಮತಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ದಕ್ಷಿಣ ಆಫ್ರಿಕಾ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ 2-0 ಮುನ್ನಡೆಯ ಕನಸಿನಲ್ಲಿದ್ದರೆ, ಭಾರತ 1-1ರ ಸಮಬಲದ ಕನಸು ಕಾಣುತ್ತಿದೆ.
ಟೀಮ್ ಇಂಡಿಯಾದ ಕಾಂಬಿನೇಷನ್ನಲ್ಲಿ ದೊಡ್ಡ ಬದಲಾವಣೆ ಕಷ್ಟ. ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರೆ, ಶ್ರೇಯಸ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ರಿಷಬ್ ಪಂತ್, ಹಾರ್ದಿಕ್ ಪಾಂಡ್ಯಾ ಮತ್ತು ದಿನೇಶ್ ಕಾರ್ತಿಕ್ ಸ್ಪೆಷಲಿಸ್ಟ್ಗಳಾಗಿ ಕಣಕ್ಕಿಳಿಯಲಿದ್ದಾರೆ. ಬೌಲಿಂಗ್ನಲ್ಲಿ ಕೊಂಚ ಬದಲಾವಣೆ ಮಾಡಬಹುದು.
ಭುವನೇಶ್ವರ್ ಕುಮಾರ್ ಜೊತೆ ಹೊಸ ಚೆಂಡು ಹಂಚಿಕೊಳ್ಳಲು ಉಮ್ರನ್ ಮಲಿಕ್ ಬರಬಹುದು. ಆವೇಶ್ ಖಾನ್ ಹೊರ ಕೂರಬಹುದು. ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್ ಆದರೆ, ಹಾರ್ದಿಕ್ ಪಾಂಡ್ಯಾ 4ನೇ ವೇಗದ ಬೌಲಿಂಗ್ನ ಆಯ್ಕೆಯಾಗಿರಲಿದ್ದಾರೆ. ಅಕ್ಸರ್ ಪಟೇಲ್ ಆಲ್ರೌಂಡರ್ ಕೋಟಾದ ಸ್ಪಿನ್ನರ್. ಯಜುವೇಂದ್ರ ಚಹಲ್ ಮತ್ತು ರವಿ ಬಿಷ್ಣೋಯಿ ನಡುವೆ ಸ್ಥಾನಕ್ಕಾಗಿ ಸ್ಪರ್ಧೆ ಇದೆ.
ದಕ್ಷಿಣ ಆಫ್ರಿಕಾ ಗೆಲುವಿನ ಕಾಂಬಿನೇಷನ್ ಬದಲಿಸುವುದು ಸಂಶಯ. ಕ್ವಿಂಟಾನ್ ಡಿ ಕಾಕ್ ಮತ್ತು ತೆಂಬ ಬವುಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ರಾಸಿವ್ಯಾಂಡರ್ ಡ್ಯುಸನ್ ಮತ್ತು ಡೇವಿಡ್ ಮಿಲ್ಲರ್ ಬ್ಯಾಟಿಂಗ್ ಫಾರ್ಮ್ ತಂಡಕ್ಕೆ ಬಲ ತುಂಬಿದೆ. ತ್ರಿಸ್ಟನ್ ಸ್ಟಬ್ಸ್, ಡ್ವೈನ್ ಪ್ರಿಟೋರಿಯಸ್ ಆಲ್ರೌಂಡರ್ಗಳು. ವೇಯ್ನ್ ಪಾರ್ನೆಲ್, ಕಗಿಸೋ ರಬಾಡಾ ಮತ್ತು ಅನ್ರಿಚ್ ನೋರ್ಟ್ಜೆ ಫಾಸ್ಟ್ ಬೌಲಿಂಗ್ ಸ್ಪೆಷಲಿಸ್ಟ್ಗಳು. ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಂಸಿ ಸ್ಪಿನ್ನರ್ಗಳು.
ಭಾರಾಮತಿ ಕ್ರೀಡಾಂಗಣ ನಿಧಾನಗತಿ ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಗೆದ್ದವರ ಆಯ್ಕೆ ಏನು ಅನ್ನುವುದು ಕೂಡ ಕುತೂಹಲಕಾರಿಯಾಗಿದೆ.