ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದ ಬಗ್ಗೆ ಸಾಕಷ್ಟು ಕುತೂಹಲವಿದೆ. ಆದರೆ ರಿಷಬ್ ಪಂತ್ ಬಳಗ ಹೇಗಿರಬಹುದು ಅನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊದಲ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡಿರುವ ರಿಷಭ್ ಪಂತ್ ನೇತೃತ್ವದ ಟೀಂ ಇಂಡಿಯಾ, ಎರಡನೇ ಪಂದ್ಯದಲ್ಲಿ ಒಂದು ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಕಟಕ್ನಲ್ಲಿ ನಡೆಯಲಿರುವ ಹರಿಣಗಳೆದುರಿನ ಎರಡನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಹೀಗಿರಬಹುದು.
-
ಇಶಾನ್ ಕಿಶನ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಅರ್ಧಶತಕ ಬಾರಿಸುವ ಮೂಲಕ ಭಾರತಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಎರಡನೇ ಪಂದ್ಯದಲ್ಲೂ ಇಶನ್ ಕಿಶನ್ ಅಬ್ಬರದ ಆಟ ಆಡುವ ನಿರೀಕ್ಷೆ ಇದೆ.
-
ರುತುರಾಜ್ ಗಾಯಕ್ವಾಡ್
ಕೆ ಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿರುವ ಗಾಯಕ್ವಾಡ್ ಮೊದಲ ಪಂದ್ಯದಲ್ಲಿ ಸಿಕ್ಕ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ವಿಫಲರಾಗಿದ್ದರು. ಆದರೆ ಒಂದು ಬಾರಿ ಲಯ ಕಂಡುಕೊಂಡರೆ ಕಟ್ಟಿ ಹಾಕುವುದು ಕಷ್ಟ.
-
ಶ್ರೇಯಸ್ ಅಯ್ಯರ್
ಟಾಪ್ ಆರ್ಡರ್ ಬ್ಯಾಟಿಂಗ್ ಲೈನ್ಅಪ್ನ ಪ್ರಮುಖ ಆಟಗಾರ. ಮೊದಲ ಪಂದ್ಯದಲ್ಲಿ ಉತ್ತಮ ಆರಂಭ ಪಡೆದರೂ ಇನ್ನಿಂಗ್ಸ್ಗೆ ಅಂತ್ಯ ಕಾಣಿಸುವಲ್ಲಿ ವೈಫಲ್ಯ ಕಂಡಿದ್ದರು.
-
ರಿಷಭ್ ಪಂತ್
ಟೀಂ ಇಂಡಿಯಾ ಹಂಗಾಮಿ ನಾಯಕ ರಿಷಭ್ ಪಂತ್, ಬ್ಯಾಟಿಂಗ್ನಲ್ಲಿ ಯಶಸ್ಸು ಕಂಡರು ಕೂಡಾ ನಾಯಕನಾಗಿ ವೈಫಲ್ಯ ಅನುಭವಿಸಿದ್ದರು. ಪಂತ್ ನಾಯಕತ್ವದ ಮೇಲೆ ಕಣ್ಣಿದೆ.
-
ಹಾರ್ದಿಕ್ ಪಾಂಡ್ಯ
ಸದ್ಯ ಐಪಿಎಲ್ನಲ್ಲಿ ಲಭಿಸಿದ ಯಶಸ್ಸನ್ನು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಮುಂದುವರೆಸಿರುವ ಹಾರ್ದಿಕ್ ಪಾಂಡ್ಯ, ಮೊದಲ ಪಂದ್ಯದಲ್ಲೇ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಎರಡನೇ ಪಂದ್ಯದಲ್ಲಿ ಬೌಲಿಂಗ್ನಲ್ಲೂ ಕೈ ಜೋಡಿಸಬೇಕಿದೆ.
-
ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್ ಗೆ ಅಬ್ಬರಿಸಲು ಮೊದಲ ಪಂದ್ಯದಲ್ಲಿ ಹೆಚ್ಚು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಎರಡನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಮ್ಯಾಚ್ ಫಿನಿಶರ್ ಪಾತ್ರ ನಿಭಾಯಿಸಲು ಎದುರು ನೋಡುತ್ತಿದ್ದಾರೆ.
-
ಹರ್ಷಲ್ ಪಟೇಲ್
ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಹರ್ಷಲ್ ಪಟೇಲ್, ಆಫ್ರಿಕಾ ಎದುರಿನ ಮೊದಲ ಪಂದ್ಯದಲ್ಲಿ ಕೊಂಚ ದುಬಾರಿ ಎನಿಸಿಕೊಂಡಿದ್ದರು.
-
ಭುವನೇಶ್ವರ್ ಕುಮಾರ್
ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಪವರ್ ಪ್ಲೇ ನಲ್ಲೇ ತಂಡಕ್ಕೆ ಯಶಸ್ಸು ತಂದುಕೊಟ್ಟಿದ್ದರು. ಆದರೆ ದುಬಾರಿ ಆಗಿದ್ದು ಸಖತ್ ಪ್ರಾಬ್ಲ ಆಗಿತ್ತು.
-
ಯುಜುವೇಂದ್ರ ಚಹಲ್
ಅನುಭವಿ ಲೆಗ್ಸ್ಪಿನ್ನರ್ ಯುಜುವೇಂದ್ರ ಚಹಲ್ ಕೂಡಾ ಕಳೆದ ಪಂದ್ಯದಲ್ಲಿ ಸಾಕಷ್ಟು ದುಬಾರಿಯಾಗಿದ್ದರು.
-
ಆವೇಶ್ ಖಾನ್/ ಉಮ್ರನ್ ಮಲಿಕ್
ಮೊದಲ ಪಂದ್ಯದಲ್ಲಿ ವೈಫಲ್ಯ ಕಂಡಿದ್ದ ಆವೇಶ್ ಖಾನ್ ಬದಲಗೆ ಉಮ್ರನ್ ಮಲಿಕ್ ಕಣಕ್ಕಿಳಿಯಬಹುದು.
-
ಅಕ್ಸರ್ ಪಟೇಲ್
ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಸಾಕಷ್ಟು ದುಬಾರಿ ಬೌಲರ್ ಎನಿಸಿಕೊಂಡಿದ್ದರು. ಆದರೆ ಪಟೇಲ್ ಬ್ಯಾಟಿಂಗ್ ಬಲ ಅವರಿಗೆ ಅವಕಾಶ ನೀಡಬಹುದು.