ಸೌತ್ ಆಫ್ರಿಕಾದ ಸ್ಫೋಟಕದ ಬ್ಯಾಟರ್ ಡೇವಿಡ್ ಮಿಲ್ಲರ್ ಅವರ ಡೈ ಹಾರ್ಡ್ ಫ್ಯಾನ್ ನಿಧನರಾಗಿದ್ದಾರೆ.
ಈ ವಿಚಾರವನ್ನು ಸ್ವತಃ ಡೇವಿಡ್ ಮಿಲ್ಲರ್ ಇನ್ ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚೇನು ಬರೆಯದೇ ವಿಡಿಯೊವನ್ನು ಪೋಸ್ಟ್ ಮಾಡಿ ಆರ್ ಐಪಿ ಮೈ ರಾಕ್ ಸ್ಟಾರ್ ಎಂದು ಬರೆದುಕೊಂಡಿದ್ದಾರೆ.
ಬಹುತೇಕ ಮಾಧ್ಯಮಗಳು ಈ ವಿಡಿಯೋವನ್ನು ನೋಡಿ ಆ ಬಾಲಕಿ ನಿಜವಾಗಿಯೂ ಡೇವಿಡ್ ಮಿಲ್ಲರ್ ಮಗಳು ಎಂದು ವರದಿ ಮಾಡಿದ್ದವು.ನಂತರ ಗೊತ್ತಾಗಿದ್ದೇನೆಂದರೆ ಆಕೆ ಮಗಳಲ್ಲ ಮಿಲ್ಲರ್ ಅವರ ದೊಡ್ಡ ಅಭಿಮಾನಿ.
ಇನ್ ಸ್ಟಾಗ್ರಾಂನಲ್ಲಿ ನನ್ನ ಪುಟ್ಟ ರಾಕ್ ಸ್ಟಾರ್ ಆರ್ ಐಪಿ. ನಿನ್ನನ್ನು ಯಾವಗಲೂ ಪ್ರೀತಿಸುತ್ತೇನೆ. ಎಂದು ಬರೆದಿದ್ದಾರೆ.
ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ.ನಾನು ತಿಳಿದಿರುವ ಹೃದಯ ನಿನ್ನದು. ನೀನು ಸಾಕಷ್ಟು ಹೋರಾವನ್ನು ಮಾಡಿದೆ. ನಂಬಲಾಗದಷ್ಟು ಧನಾತ್ಮಕ ನಗು ನಿನ್ನಲ್ಲಿ ಇರುತ್ತಿತ್ತು.
ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬರ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದಿಯಾ. ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಪಾಲಿಸುವುದರ ಬಗ್ಗೆ ನೀನು ನನಗೆ ತುಂಬ ಕಲಿಸಿದ್ದೀಯಾ ಎಂದು ಭಾವುಕರಾಗಿ ಬರೆದಿದ್ದಾರೆ. ನಿನ್ನ ಜೊತಗಿನ ಪ್ರಯಾಣ ಮಾಡಿದಕ್ಕೆ ನನಗೆ ಹೆಮ್ಮೆ ಅನಿಸುತ್ತದೆ. ನಾನು ನಿನ್ನನ್ನು ತುಂಬ ಪ್ರೀತಿಸುತ್ತೇನೆ ಎಂದು ಮಿಲ್ಲರ್ ಬರೆದಿದ್ದಾರೆ.
ಮಿಲ್ಲರ್ ಅಭಿಮಾನಿ ಕ್ಯಾನ್ಸರ್ ಪೀಡಿತಳಾಗಿದ್ದಳು. ಹಲವು ವರ್ಷಗಳ ಹೋರಾಟದ ನಂತರ ಕೊನೆಯುಸಿಳೆದಿದ್ದಾಳೆ. ಮಿಲ್ಲರ್ ಆ ಪುಟ್ಟ ಅಭಿಮಾನಿಯ ಕೆಲವು ಫೋಟೋ ಹಂಚಿಕೊಂಡಿದ್ದಾರೆ.