ಬನಿರೀಕ್ಷಿತ ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ನಡುವಿನ ನಿರ್ಣಾಯ ಎರಡನೆ ಏಕದಿನ ಪಂದ್ಯ ಇಂದು ನಡೆಯಲಿದೆ.
ರಾಂಚಿಯ ಜೆಸ್ ಸಿಎ ಮೈದಾನದಲ್ಲಿ ನಡೆಯಲಿರುವ ಪಂದ್ಯ ಸಾಕಷ್ಟು ಕುತುಹಲ ಕೆರೆಳಿಸಿದೆ. ಮೊದಲ ಪಂದ್ಯ ಸೋತ ಟೀಮ್ ಇಂಡಿಯಾ ಗಾಯಗೊಂಡ ಹುಲಿಯಂತಾಗಿದೆ. ಸರಣಿ ಉಳಿಸಿಕೊಳ್ಳಲು ಇಂದು ಗೆಲ್ಲಲೇ ಬೇಕಾದ ಒತ್ತಡವನ್ನು ಎದುರಿಸುತ್ತಿದೆ.
ಇತ್ತ ಮೊದಲ ಪಂದ್ಯ ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ದಕ್ಷಿಣ ಆಫ್ರಿಕಾ ತಂಡ ಎರಡನೆ ಪಂದ್ಯವನ್ನು ಗೆದ್ದು ಸರಣಿ ಜಯದ ಮೇಲೆ ಕಣ್ಣಿಟ್ಟಿದೆ. ಕಳೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 63 ಎಸೆತದಲ್ಲಿ 86 ರನ್ ಹಡೆದ ಹೊರತಾಗಿಯೂ ಟೀಮ್ ಇಂಡಿಯಾ 250 ರನ್ ಚೇಸ್ ಮಾಡುವಲ್ಲಿ ವಿಫಲವಾಯಿತು.
ಎರಡನೆ ಪಂದ್ಯಕ್ಕೂ ಮುನ್ನ ವೇಗಿ ದೀಪಕ್ ಚಾಹರ್ ಗಾಯಗೊಂಡು ಹೊರ ನಡೆದಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಸ್ಪಿನ್ ಮ್ಯಾಜಿಕ್ ಮಾಡಬೇಕಿದೆ. ಜೊತೆಗೆ ಬ್ಯಾಟಿಂಗ್ ನಲ್ಲೂ ಮಿಂಚು ಹರಿಸಬೇಕಿದೆ.
ಬೌಲಿಂಗ್ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ವೇಗಿ ಶಾರ್ದೂಲ್ ಠಾಕೂರ್ ಮಾತ್ರ ಚೆನ್ನಾಗಿ ಬೌಲಿಂಗ್ ಮಾಡಿ ಬೌಲಿಂಗ್ ವಿಭಾಗವನ್ನು ಕಾಪಾಡಿದ್ದಾರೆ.
ಇನ್ನು ಸೌತ್ ಆಫ್ರಿಕಾ ಅಧ್ಬುತ ಬ್ಯಾಟಿಂಗ್ ಮೂಲಕ ಶಿಖರ್ ಧವನ್ ಪಡೆಯ ಬೆವರಿಳಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ನಾಯಕ ಟೆಂಬಾ ಬಾವುಮೆ ಫಾರ್ಮ್ ತಂಡಕ್ಕೆ ಚಿಂತೆಗೀಡು ಮಾಡಿದೆ. ಮೊದಲ ಪಂದ್ಯದಲ್ಲಿ ಕೇವಲ 8 ರನ್ ಗಳಿಸಿದ್ದಾರೆ.