
ಕಿವೀಸ್ ನಾಡಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ ಭರ್ಜರಿ ಫಾರ್ಮ್ನಲ್ಲಿದ್ದಾರೆ.
ಆತಿಥೇಯ ನ್ಯೂಜಿಲೆಂಡ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ತ್ರಿಕೋನ ಟಿ20 ಸರಣಿಯಲ್ಲಿ ನಾಯಕ ಬಾಬರ್ ಅಜಂ ಎಲ್ಲರ ಕೇಂದ್ರ ಬಿಂದುವಾಗಿದ್ದಾರೆ.
ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಬಾಬರ್ ಅಜಂ 53 ಎಸೆತದಲ್ಲಿ 11 ಬೌಂಡರಿಯೊಂದಿಗೆ ಅಜೇಯ 79 ರನ್ ಕಲೆ ಹಾಕಿದರು. ಈ ಅರ್ಧಶತಕದೊಂದಿಗೆ ಬಾಬರ್ ಅಜಂ ದಾಖಲೆಯೊಂದನ್ನು ಬರೆದಿದ್ದಾರೆ.
ಆಸ್ಟ್ರೇಲಿಯಾ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಟಿ20 ಫಾರ್ಮೆಟ್ ನಲ್ಲಿ 9 ಬಾರಿ ಅಜೇಯರಾಗಿ ಉಳಿದಿದ್ದಾರೆ. ಇದೀಗ ಪಾಕ್ ತಂಡದ ರನ್ ಮಷೀನ್ ಬಾಬರ್ ಅಜಂ ಟಿ20 ಕ್ರಿಕೆಟ್ ನಲ್ಲಿ 10ನೇ ಬಾರಿ ಅಜೇಯರಾಗಿ ಉಳಿಯುವ ಮೂಲಕ ವಾರ್ನರ್ ದಾಖಲೆ ಮುರಿದಿದ್ದಾರೆ.

ಟೀಮ್ ಇಂಡಿಯಾದ ರನ್ ಯಂತ್ರ ವಿರಾಟ್ ಕೊಹ್ಲಿ ಟಿ20ಯಲ್ಲಿ 19 ಬಾರಿ ಅಜೇಯರಾಗಿ ಉಳಿದಿದ್ದಾರೆ. ಮೊಹ್ಮದ್ ರಜ್ವಾನ್ 11 ಬಾರಿ, ಇಂಗ್ಲೆಂಡ್ ಸ್ಟಾರ್ ಜೋಸ್ ಬಟ್ಲರ್ 8 ಬಾರಿ, ಡೇವಿಡ್ ವಾರ್ನರ್ 9 ಬಾರಿ ಪಾಕ್ ತಂಡದ ಬಾಬರ್ ಅಜಂ 10 ಬಾರಿ ಅಜೇಯರಾಗಿ ಉಳಿದ ದಾಖಲೆ ಹೊಂದಿದ್ದಾರೆ.