ವೆಸ್ಟ್ ಇಂಡೀಸ್ (West Indies)ವಿರುದ್ಧದ ಐದು ಪಂದ್ಯಗಳ ಟಿ20 (T20) ಸರಣಿಗೆ ಭಾರತ (India) ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ನಿರ್ಧಾರ ಮಾಡಿರುವ ಬಿಸಿಸಿಐ (BCCI) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli)ಯನ್ನು ತಂಡದಿಂದ ಕೈ ಬಿಟ್ಟಿದೆ. ಹಿರಿಯ ಹಾಗೂ ಅನುಭವಿ ಆಟಗಾರರನ್ನು ತಂಡಕ್ಕೆ ಆಯ್ಕೆ ಮಾಡಿರುವ ಆಯ್ಕೆ ಸಮಿತಿ ಟಿ20 ವಿಶ್ವಕಪ್ (T20 World Cup) ಲೆಕ್ಕಾಚಾರವನ್ನು ಬೆನ್ನಿಗಿಟ್ಟುಕೊಂಡು ತಂಡವನ್ನು ಪ್ರಕಟಿಸಿದೆ.
ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20ಯಲ್ಲಿ ಸತತವಾಗಿ ವೈಫಲ್ಯ ಕಾಣುತ್ತಿದ್ದು ದುಬಾರಿಯಾಗಿ ಪರಿಣಮಿಸಿದೆ. ವಿರಾಟ್ಗೆ ವಿಶ್ರಾಂತಿಯ ನೆಪದಲ್ಲಿ ಬಿಸಿಸಿಐ ವಿರಾಮ ನೀಡಬಹುದು ಅನ್ನುವ ಲೆಕ್ಕಾಚಾರವಿತ್ತು. ಆದರೆ ಕಳಪೆ ಫಾರ್ಮ್ಗೆ ತುತ್ತಾಗಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ತಂಡದಿಂದ ಹೊರಗಿಡಲಾಗಿದೆ.
ಈ ನಡುವೆ ತೊಡೆಸಂದಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ತಂಡಕ್ಕೆ ಮರಳಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕುಲ್ದೀಪ್ ಯಾದವ್ ಕೂಡ ತಂಡ ಸೇರಿಕೊಂಡಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಫಿಟ್ನೆಸ್ ಪ್ರೂವ್ ಮಾಡಿದ್ರೆ ಮಾತ್ರ ಕೆರಿಬಿಯನ್ ನೆಲಕ್ಕೆ ಹಾರಲಿದ್ದಾರೆ.
ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದು ಇಶನ್ ಕಿಶನ್ ಮತ್ತು ರಿಷಬ್ ಪಂತ್ ತಂಡದ ವಿಕೆಟ್ ಕೀಪರ್ಗಳಾಗಿದ್ದಾರೆ. ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ ಮತ್ತು ಶ್ರೇಯಸ್ ಅಯ್ಯರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಹಾರ್ದಿಕ್ ಮತ್ತು ಜಡೇಜಾ ಆಲ್ರೌಂಡರ್ಗಳು. ಅಕ್ಸರ್ ಮತ್ತು ಅಶ್ವಿನ್, ರವಿ ಬಿಷ್ಣೋಯಿ ಸ್ಪಿನ್ನರ್ಗಳ ಕೋಟಾ ತುಂಬಿದ್ದಾರೆ. ಭುವನೇಶ್ವರ್, ಆವೇಶ್ ಖಾನ್, ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಭಾರತ ತಂಡ:
ರೋಹಿತ್ ಶರ್ಮಾ, ಇಶಾನ್ ಕಿಶನ್, ರಾಹುಲ್, ಸೂರ್ಯಕುಮಾರ್, ಹೂಡಾ, ಶ್ರೇಯಸ್ ಅಯ್ಯರ್, ಕಾರ್ತಿಕ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಅಶ್ವಿನ್, ರವಿ ಬಿಷ್ಣೋಯ್ , ಕುಲದೀಪ್ ಯಾದವ್, ಭುವನೇಶ್ವರ್, ಅವೇಶ್, ಹರ್ಷಲ್, ಅರ್ಷದೀಪ್ ಸಿಂಗ್.
Team India ಟೀಮ್ ಇಂಡಿಯಾದಿಂದ ವಿರಾಟ್ ಔಟ್, ರಾಹುಲ್ ಡೌಟ್