ಟೀಮ್ ಇಂಡಿಯಾ (Team India) ಇಂಗ್ಲೆಂಡ್ ಪ್ರವಾಸದ ಅಂತಿಮ ಹಂತದಲ್ಲಿದೆ. ಆದರೆ ಆಟಗಾರರು ಪ್ಯಾಕ್ ಮಾಡಿಕೊಂಡು ತವರಿಗೆ ಮರಳುತ್ತಿಲ್ಲ. ಬದಲಿಗೆ ಇಂಗ್ಲೆಂಡ್ನಿಂದಲೇ ಕೆರಿಬಿಯನ್ ನೆಲಕ್ಕೆ ಹಾರಲಿದ್ದಾರೆ. ಬೆನ್ನು ಬೆನ್ನಿಗೆ 3 ಏಕದಿನ (ODI) ಮತ್ತು 5 ಟಿ20 (T20) ಪಂದ್ಯಗಳನ್ನು ಆಡಲಿದೆ.
ಏಕದಿನ ಸರಣಿ
1ನೇ ಏಕದಿನ: ಜುಲೈ 22- ಪೋರ್ಟ್ ಆಫ್ ಸ್ಪೇನ್ (Port of Spain)
2ನೇ ಏಕದಿನ: ಜುಲೈ 24- ಪೋರ್ಟ್ಆಫ್ ಸ್ಪೇನ್
3ನೇ ಏಕದಿನ: ಜುಲೈ 27- ಪೋರ್ಟ್ ಆಫ್ ಸ್ಪೇನ್
ಏಕದಿನ ಸರಣಿಯ ಎಲ್ಲಾ ಪಂದ್ಯಗಳು ಪೋರ್ಟ್ ಆಫ್ ಸ್ಪೇನ್ನಲ್ಲೇ ನಡೆಯಲಿದೆ. ಜುಲೈ 22, ಜುಲೈ 24 ಮತ್ತು ಜುಲೈ 27 ರಂದು 3 ಪಂದ್ಯಗಳು ನಡೆಯಲಿವೆ. ಒಂದೇ ಸ್ಥಳದಲ್ಲಿ ಪಂದ್ಯ ನಡೆಯುವುದರಿಂದ ಟೀಮ್ ಇಂಡಿಯಾಕ್ಕೆ ವಿರಾಮವನ್ನು ಕಡಿಮೆ ನೀಡಲಾಗಿದೆ.
T20 ಸರಣಿ
1ನೇ T20: ಜುಲೈ 29- ಟರೌಬಾ (Tarouba)
2ನೇ T20: ಆಗಸ್ಟ್ 01- ಬಸೆಟರ್
3ನೇ T20: ಆಗಸ್ಟ್ 02- ಬಸೆಟರ್
4ನೇ T20: ಆಗಸ್ಟ್ 06- ಲಾಡರ್ಹಿಲ್
5ನೇ T20: ಆಗಸ್ಟ್ 07- ಲಾಡೆರ್ಹಿಲ್
ಟಿ20 ಸರಣಿಯ ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದೆ. 3 ಮೈದಾನಗಳಲ್ಲಿ 5 ಟಿ20 ಪಂದ್ಯಗಳು ನಡೆಯಲಿವೆ. ಜುಲೈ 29 ರಂದು ಟರೌಬಾದಲ್ಲಿ ಮೊದಲ ಮ್ಯಾಚ್ ನಡೆದರೆ, ಆಗಸ್ಟ್ 1 ಮತ್ತು ಆಗಸ್ಟ್ 2 ರಂದು ಬಸೆಟರ್ನಲ್ಲಿ 2 ಪಂದ್ಯ ನಡೆಯಲಿದೆ. ಲಾಡರ್ ಹಿಲ್ ಆಗಸ್ಟ್ 6 ಮತ್ತು 7 ರಂದು ಕೊನೆಯ 2 ಟಿ20 ಪಂದ್ಯಗಳಿಗೆ ಆತಿಥ್ಯ ನೀಡಲಿದೆ.
ವಿಂಡೀಸ್ನಲ್ಲಿ ಟೀಮ್ ಇಂಡಿಯಾ ಕೇವಲ 16 ದಿನಗಳಲ್ಲಿ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ. ಆಟಗಾರರ ಫಿಟ್ನೆಸ್ ಪರೀಕ್ಷೆಗೆ ಇದು ಅತ್ಯುತ್ತಮ ವೇದಿಕೆಯಾಗಲಿದೆ.
Ind VS WI ಕೆರಿಬಿಯನ್ ನೆಲದಲ್ಲಿ ಏಕದಿನ ಸರಣಿ ಅಮೆರಿಕದಲ್ಲಿ ಟಿ20