ಟೀಮ್ ಇಂಡಿಯಾ (Team India) ಟಿ20 ವಿಶ್ವಕಪ್ (T20 World Cup) ಬಗ್ಗೆ ಸಾಕಷ್ಟು ಗಮನ ಕೊಡುತ್ತಿದೆ. ಆಟಗಾರರು ಫಾರ್ಮ್ ಕಳೆದುಕೊಳ್ಳಬಾರದು, ಗಾಯಗೊಳ್ಳಬಾರದೆಂದು ಪ್ಲಾನ್ ಮಾಡಿದೆ. ಬ್ಯಾಕ್ ಟು ಬ್ಯಾಕ್ ಸರಣಿಗಳನ್ನಾಡುವ ಪ್ರೆಷರ್ನಲ್ಲಿ ಟೀಮ್ ಇಂಡಿಯಾ ಇದ್ದರೂ ಆಟಗಾರರನ್ನು ರೊಟೇಟ್ ಮಾಡಿ ಅವರ ಫಿಟ್ನೆಸ್ ಬಗ್ಗೆ ಗಮನ ನೆಟ್ಟಿದೆ. ಈ ಮಧ್ಯೆ ವಿಶ್ವಕಪ್ ತಂಡದ ಆಯ್ಕೆ (Team Selection) ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಟೀಮ್ ಇಂಡಿಯಾದಲ್ಲಿ ಯಾರಿರಬಹುದು, ಯಾರಿರಬೇಕು ಅನ್ನುವ ಬಗ್ಗೆ ಡಿಸ್ಕಷನ್ ಹಾಟ್ ಟಾಪಿಕ್ ಆಗಿದೆ.
ಆಸ್ಟ್ರೇಲಿಯಾ T20 ವಿಶ್ವಕಪ್ಗೆ ತಂಡ ಪ್ರಕಟಿಸಿದ ಬೆನ್ನಲ್ಲೇ ಇಂಗ್ಲೆಂಡ್ ತಂಡ ಪ್ರಕಟಿಸಿದೆ. ಈಗ ಟೀಮ್ ಇಂಡಿಯಾದ ಆಯ್ಕೆ ಬಗ್ಗೆ ಚರ್ಚೆಗಳು ನಡೆಯುತ್ತಿದೆ. BCCI ಮೂಲಗಳ ಪ್ರಕಾರ ಸೆಪ್ಟಂಬರ್ 15ರಂದು ಆಯ್ಕೆ ಸಮಿತಿ ಸಭೆ ಸೇರಿ ತಂಡವನ್ನು ಪ್ರಕಟಿಸಲಿದೆ. ಏಷ್ಯಾಕಪ್ ಸೆಪ್ಟಂಬರ್ 11ಕ್ಕೆ ಅಂತ್ಯ ಕಾಣಲಿದೆ. ಈ ಟೂರ್ನಿಯಲ್ಲಿ ಆಟಗಾರರ ಪ್ರದರ್ಶನವನ್ನು ಸೆಲೆಕ್ಟರ್ಸ್ ಗಮನಿಸುತ್ತಿದ್ದಾರೆ. ತಂಡವನ್ನು ಹೆಸರಿಸಲು ICC ಡೆಡ್ಲೈನ್ ಕೂಡ ಸೆಪ್ಟಂಬರ್ 15 ಆಗಿದೆ.
ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಆಡುವ ಪ್ರದರ್ಶನವೇ ನಿರ್ಣಾಯಕವಾಗಿದೆ. ಯಾಕಂದರೆ ಇದರ ಮೇಲೆ ಅವರ ವಿಶ್ವಕಪ್ ಭವಿಷ್ಯ ಅಡಗಿದೆ. ಹಲವು ಸ್ಥಾನಗಳು ಈಗಾಗಲೇ ಪಕ್ಕಾ ಆಗಿವೆ. ಆದರೆ ಒಂದೆರಡು ಸ್ಥಾನಗಳು ಮತ್ತು ಬ್ಯಾಕ್ಅಪ್ ಆಟಗಾರರ ಸ್ಥಾನ ನಿರ್ಣಯ ಆಗಬೇಕಿದೆ.
ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯಾ ಜಾಗ ಫಿಕ್ಸ್ ಆಗಿದೆ. ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರೂ ಸ್ಥಾನ ಪಡೆಯಬಹುದು. ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರಿತ್ ಬುಮ್ರಾ ಸ್ಥಾನವೂ ಆಲ್ಮೋಸ್ಟ್ ಪಕ್ಕಾ. ಯಜುವೇಂದ್ರ ಚಹಲ್ ಸ್ಪಿನ್ನರ್ಗಳ ಪಟ್ಟಿಯಲ್ಲಿ ಮೊದಲ ಆಯ್ಕೆ. ಜಡೇಜಾ ಸ್ಥಾನವೂ ಖಚಿತ. ಇನ್ನುಳಿದಿರುವ ಸ್ಥಾನಕ್ಕೆ ಕೆಎಲ್ ರಾಹುಲ, ಅರ್ಶದೀಪ್, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಅಕ್ಸರ್ ಪಟೇಲ್, ದೀಪಕ್ ಹೂಡ, ಇಶನ್ ಕಿಶನ್ ಸೇರಿದಂತೆ ಹಲವರು ಫೈಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಟೀಮ್ ಇಂಡಿಯಾದ ಫೈನಲ್ 15 ಹೇಗಿರಬಹುದು ಅನ್ನುವ ಕುತೂಹಲ ಎಲ್ಲರಲ್ಲೂಇದೆ.