ಕಳಪೆ ಬ್ಯಾಟಿಂಗ್ನಿಂದಾಗಿ ಫಾರ್ಮ್ ವೈಫಲ್ಯಕ್ಕೆ ಸಿಲುಕಿರುವ ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್(Jason Roy) ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ವರ್ಷಾಂತ್ಯದಲ್ಲಿ Australiaದಲ್ಲಿ ನಡೆಯಲಿರುವ T20I World Cup ಟೂರ್ನಿಗೆ ಇಂಗ್ಲೆಂಡ್ ತಂಡವನ್ನ ಪ್ರಕಟಿಸಲಾಗಿದೆ. ಆದರೆ ಸತತವಾಗಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವ ಜೇಸನ್ ರಾಯ್ ಅವರನ್ನ ತಂಡದಿಂದ ಕೈಬಿಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಫಾರ್ಮ್ ಸಮಸ್ಯೆಗೆ ಸಿಲುಕಿರುವ ಬಲಗೈ ಬ್ಯಾಟ್ಸ್ಮನ್, 11 ಇನ್ನಿಂಗ್ಸ್ಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. 32 ವರ್ಷದ ಜೇಸನ್ ರಾಯ್ ಗಳಿಸಿದ ಗರಿಷ್ಠ ಸ್ಕೋರ್ 43 ರನ್ ಮಾತ್ರ.
ಅಲ್ಲದೇ ಇತ್ತೀಚೆಗೆ ನಡೆದ “Hundred 2022” ಸರಣಿಯಲ್ಲೂ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ರಾಯ್, ಆಡಿದ ಆರು ಇನ್ನಿಂಗ್ಸ್ಗಳಲ್ಲಿ ಮೂರು ಇನ್ನಿಂಗ್ಸ್ಗಳಲ್ಲಿ ಡಕೌಟ್ ಆಗಿದ್ದು, ಕೇವಲ 51 ರನ್ಗಳನ್ನಷ್ಟೇ ಕಲೆಹಾಕಿದ್ದರು. ಜೇಸನ್ ರಾಯ್ ಅವರು ಟಿ20 ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ England and Wales Cricket Board (ECB) ವ್ಯವಸ್ಥಾಪಕ ನಿರ್ದೇಶಕ ರಾಬ್ ಕೀ, ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗದ ಮಾತ್ರಕ್ಕೆ ಜೇಸನ್ ರಾಯ್ ಅವರ T20 ವೃತ್ತಿಜೀವನ ಮುಗಿದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೇ ಈ ವರ್ಷದಲ್ಲಿ ನಡೆಯುವ ಮೆಗಾ ಈವೆಂಟ್ಗೆ ಸೇರಿಸದಿದ್ದರೂ, ಜೇಸನ್ ರಾಯ್ ಇಂಗ್ಲೆಂಡ್ನ 50-ಓವರ್ ತಂಡದ ಪ್ರಮುಖ ಭಾಗವಾಗಿ ಉಳಿದಿದ್ದಾರೆ. ಜೇಸನ್ ರಾಯ್ ಬ್ಯಾಡ್ ಟೈಮ್ನಲ್ಲಿ ಫಾರ್ಮ್ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ ಇದರಿಂದ ಜೇಸನ್ ಅವರ T20 ವೃತ್ತಿಜೀವನ ಮುಗಿದಿದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿರುವ ಜೇಸನ್ ರಾಯ್, ಪಾಕಿಸ್ತಾನ ವಿರುದ್ಧ ಲಾಹೋರ್ ಮತ್ತು ಕರಾಚಿಯಲ್ಲಿ ನಡೆಯಲಿರುವ 7 ಪಂದ್ಯಗಳ T20I ಸರಣಿಗೂ ಆಯ್ಕೆ ಆಗಿಲ್ಲ. ಇಂಗ್ಲೆಂಡ್ ಈ ಸರಣಿಗಾಗಿ ಐವರು ಅನ್ಕ್ಯಾಪ್ಡ್ ಆಟಗಾರರನ್ನು ಆಯ್ಕೆ ಮಾಡಿದೆ. ಗಾಯದ ಸಮಸ್ಯೆಯಿಂದ ಪಾಕಿಸ್ತಾನ ವಿರುದ್ಧದ ಸರಣಿಯಿಂದ ಹೊರಗುಳಿದಿರುವ ಲಿವಿಂಗ್ಸ್ಟೋನ್ ಹಾಗೂ ಕ್ರಿಸ್ ಜೋರ್ಡಾನ್, T20 ವಿಶ್ವಕಪ್ಗಾಗಿ ತಂಡಕ್ಕೆ ಮರಳಿದ್ದಾರೆ.