ಟೀಮ್ ಇಂಡಿಯಾದ (Team India) ಬ್ಯೂಸಿ ಶೆಡ್ಯೂಲ್ (Schedule) ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
T20 ವಿಶ್ವಕಪ್ (T20 Worldcup) ಬಳಿಕವಾದರೂ ಕೊಂಚ ಫ್ರೀ ಸಿಗಬಹುದು ಅನ್ನುವ ಯೋಚನೆ ಕ್ರಿಕೆಟಿಗರದ್ದಾಗಿತ್ತು. ಆದರೆ ಬಿಸಿಸಿಐ (BCCI) ಮಾತ್ರ ರೋಹಿತ್ ಬಳಗದ ಆಟಗಾರರಿಗೆ ಸಣ್ಣ ಗ್ಯಾಪ್ ಕೂಡ ಕೊಟ್ಟಿಲ್ಲ.
ಆಸ್ಟ್ರೇಲಿಯಾದಿಂದಲೇ (Australia) ನ್ಯೂಜಿಲೆಂಡ್‌ಗೆ (Newzealand) ಫ್ಲೈಟ್ ಟಿಕೆಟ್ ಬುಕ್ ಮಾಡಿದೆ. ಆಟಗಾರರ ಬಿಡುವಿಲ್ಲದ ಸರಣಿಗೆ ಮತ್ತೊಂದು ಸರಣಿ ಸೇರ್ಪಡೆಯಾಗಿದೆ.
ನ್ಯೂಜಿಲೆಂಡ್ ಪ್ರವಾಸದಲ್ಲಿ ((Newzealand Tour)) ಭಾರತ ಬೆನ್ನು ಬೆನ್ನಿಗೆ ಪಂದ್ಯಗಳನ್ನು ಆಡಲಿದೆ. ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ರೋಹಿತ್ ಬಳಗ ಕಿವೀಸ್‌ಗೆ ಕಾಲಿಡಲಿದೆ. ನ್ಯೂಜಿಲೆಂಡ್ ವಿರುದ್ಧ 13 ದಿನಗಳಲ್ಲಿ 6 ಪಂದ್ಯಗಳನ್ನು ಆಡಲಿದೆ.
ಇದು ಆಟಗಾರರ ಬಳಲಿಕೆ ಕಾರಣವಾಗುವುದು ಖಚಿತ. ಯಾಕಂದರೆ ಟಿ20 ಸರಣಿ (T20 Series) ಮತ್ತು ಏಕದಿನ ಸರಣಿಯನ್ನು (ODI Series) ಭಾರತ ಆಡಲಿದೆ.
ಟಿ20 ಸರಣಿ ವೇಳಾಪಟ್ಟಿ
★ 1 ನೇ T20I – ನವೆಂಬರ್ 18 ವೆಲ್ಲಿಂಗ್ಟನ್‌ನಲ್ಲಿ
★ 2 ನೇ T20I – ನವೆಂಬರ್ 20 ಮೌಂಟ್ ಮೌಂಗ್ನುಯಿ ಬೇ ಓವಲ್
★ 3ನೇ T20I – ನವೆಂಬರ್ 22 ನೇಪಿಯರ್
ಏಕದಿನ ಸರಣಿ ಶೆಡ್ಯೂಲ್
★ ಮೊದಲ ODI – ನವೆಂಬರ್ 25 ಆಕ್ಲೆಂಡ್
★ ಎರಡನೇ ODI – ನವೆಂಬರ್ 27 ಹ್ಯಾಮಿಲ್ಟನ್
★ ಮೂರನೇ ODI – ನವೆಂಬರ್ 30 ಕ್ರೈಸ್ಟ್‌ಚರ್ಚ್
ಒಂದು ವೇಳೆ ಭಾರತ ತಂಡ T20 ವಿಶ್ವಕಪ್‌ನ ಫೈನಲ್‌ನಲ್ಲಿ ಆಡಿದರೆ, ಕೇವಲ ನಾಲ್ಕು ದಿನಗಳ ನಂತರ ರೋಹಿತ್ ಪಡೆ ಕಿವೀಸ್ ವಿರುದ್ಧ ಸರಣಿಯನ್ನು ಆಡಬೇಕಾಗುತ್ತದೆ. ಒಟ್ಟಿನಲ್ಲಿ ಆಟಗಾರರ ಹಿತಕ್ಕಿಂತ ಬಿಸಿಸಿಐನ ಜೋಳಿಗೆ ತುಂಬುವುದೇ ಟಾರ್ಗೆಟ್ ಆಗಿ ಬಿಟ್ಟಿರುವುದು ವಿಪರ್ಯಾಸ.