Tata Open Maharashtra- ರೋಹನ್ ಬೋಪಣ್ಣ – ರಾಮ್ ಕುಮಾರ್ ಕಿರೀಟಕ್ಕೆ ಟಾಟಾ ಓಪನ್ ಗರಿ
ಭಾರತದ ಮಹೇಶ್ ಭೂಪತಿ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು ಟಾಟಾ ಓಪನ್ ಮಹಾರಾಷ್ಟ್ರ ಡಬಲ್ಸ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ಎಟಿಪಿ ವಲ್ರ್ಡ್ ಟೂರ್ ನಲ್ಲಿ ಎರಡನೇ ಪ್ರಶಸ್ತಿ ಗೆದ್ದುಕೊಂಡ ಹಿರಿಮೆಗೆ ಪಾತ್ರರಾಗಿದ್ದಾರೆ.
ಫೈನಲ್ ಪಂದ್ಯದಲ್ಲಿ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು 6-7, 6-3, 10-6ರಿಂದ ಆಗ್ರ ಶ್ರೇಯಾಂಕಿತ ಆಸ್ಟ್ರೇಲಿಯಾದ ಲೂಕ್ ಸಾವಿಲ್ ಮತ್ತು ಜೋನ್ ಪ್ಯಾಟ್ರಿಕ್ ಅವರನ್ನು ಪರಾಭವಗೊಳಿಸಿದ್ರು.
Tata Open Maharashtra: Bopanna-Ramkumar lift men’s doubles trophy
ಜಿದ್ದಾಜಿದ್ದಿನಿಂದ ಸಾಗಿದ ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ ನಲ್ಲಿ ಹಿನ್ನಡೆ ಅನುಭವಿಸಿದ್ರೂ ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿಕೊಂಡ ರೋಹನ್ ಮತ್ತು ರಾಮ್ ಕುಮಾರ್ ಅಂತಿಮವಾಗಿ ಗೆಲುವಿನ ನಗೆ ಬೀರಲು ಯಶಸ್ವಿಯಾದ್ರು. ಫೈನಲ್ ಪಂದ್ಯ ಒಂದು ಗಂಟೆ 44 ನಿಮಿಷಗಳ ಕಾಲ ನಡೆದಿತ್ತು. ಆಡಿಲೇಡ್ ಓಪನ್ ಟೂರ್ನಿಯಲ್ಲೂ ರೋಹನ್ ಬೋಪಣ್ಣ ಮತ್ತು ರಾಮ್ ಕುಮಾರ್ ರಾಮನಾಥನ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದರು.
ಅಂದ ಹಾಗೇ ರೋಹನ್ ಬೋಪಣ್ಣ ಅವರು ತನ್ನ 21ನೇ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡ್ರೆ, ರಾಮ್ ಕುಮಾರ್ ಅವರು ತನ್ನ ಎರಡನೇ ಡಬಲ್ಸ್ ಪ್ರಶಸ್ತಿ ತನ್ನದಾಗಿಸಿಕೊಂಡ್ರು.
ಇನ್ನು 2019ರಲ್ಲಿ ರೋಹನ್ ಬೋಪಣ್ಣ ಅವರು ದಿವಿಜಿ ಶರಣ್ ಜೊತೆಗೂಡಿ ಟಾಟಾ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.