Badminton – ಗಲ್ಫ್ ರಾಷ್ಟ್ರಗಳಲ್ಲಿ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಶುರು..!

ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಹಾಗೂ ತರಬೇತುದಾರ ಪುಲ್ಲೇಲ ಗೋಪಿಚಂದ್ ಅವರು ದೋಹಾದಲ್ಲಿ ಬ್ಯಾಡ್ಮಿಂಟನ್ ಅಕಾಡೆಮಿಯನ್ನು ಆರಂಭಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಬ್ಯಾಡ್ಮಿಂಟನ್ ಆಟವನ್ನು ಜನಪ್ರಿಯತೆಗೊಳಿಸುವ ಉದ್ದೇಶವನ್ನು ಗೋಪಿಂಚಂದ್ ಹೊಂದಿದ್ದಾರೆ. ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯು ದುಬೈನ ಗಲ್ಫ್ ಬ್ಯಾಡ್ಮಿಂಟನ್ ಅಕಾಡೆಮಿಯ ಸಹಯೋಗದೊಂದಿಗೆ ಆರಂಭವಾಗಿದೆ. ಅಲ್ಲದೆ ಗೋಪಿಚಂದ್ ಅವರು ಅಕಾಡೆಮಿಯ ಪ್ರಮುಖ ಮೆಂಟರ್ ಆಗಿದ್ದಾರೆ. ಅಲ್ಲದೆ ಗಲ್ಫ್ ಬ್ಯಾಡ್ಮಿಂಟನ್ ಅಕಾಡೆಮಿಯ ಜೊತೆ ಕತಾರ್ ಮೂಲದ ಅಥ್ಲೇನ್ ಸ್ಪೋಟ್ರ್ಸ್ ಇವೆಂಟ್ಸ್ ಕೂಡ ಸಾಥ್ ನೀಡುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅರಬ್ ರಾಷ್ಟ್ರಗಳಲ್ಲಿ ಕೂಡ ಬ್ಯಾಡ್ಮಿಂಟನ್ ಆಟದ ಬಗ್ಗೆ ಒಲವು ಹೆಚ್ಚಾಗುತ್ತಿದೆ. ವೃತ್ತಿ ಪರ ತರಬೇತುದಾರರು ಮತ್ತು ಆತ್ಯಾಧುನಿಕ ಸೌಲಭ್ಯಗಳು ಇಲ್ಲಿನ ಅಕಾಡೆಮಿಯಲ್ಲಿದೆ. ಇದರ ಸದುಯೋಪಗಳನ್ನು ಪಡೆದುಕೊಂಡು ಬ್ಯಾಡ್ಮಿಂಟನ್ ಆಟವನ್ನು ಅರಬ್ ರಾಷ್ಟ್ರಗಳಲ್ಲಿ ಜನಪ್ರಿಯತೆಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಗೋಪಿಚಂದ್ ಹೇಳಿದ್ದಾರೆ. ಗೋಪಿಚಂದ್ ಅವರು ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿದ್ದರು. ಅಲ್ಲದೆ ತರಬೇತುದಾರನಾಗಿ ಸೈನಾ ನೆಹ್ವಾಲ್, ಪಿ.ವಿ. ಸಿಂಧು, ಕಶ್ಯಪ್, ಶ್ರೀಕಾಂತ್ ಮೊದಲಾದ ಅಂತಾರಾಷ್ಟ್ರೀಯ ಆಟಗಾರರನ್ನು ರೂಪುಗೊಳಿಸಿದ್ದ ಹೆಗ್ಗಳಿಕೆ ಗೋಪಿಚಂದ್ ಅವರದ್ದಾಗಿದೆ.