ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಮುಂಬೈನ ವಾಂಖೆಡೆಯಲ್ಲಿ ನಡೆಯುವ ಈ ಪಂದ್ಯ ಗೆದ್ದವರು ಟೆಸ್ಟ್ ಸರಣಿ ಗೆಲ್ಲಲಿದ್ದಾರೆ. ಹೀಗಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಪ್ಲಾನ್ ಮಾಡಿಕೊಂಡಿವೆ.
ಕ್ಯಾಪ್ಟನ್ ವಿರಾಟ್ ಕೊಹ್ಲಿ ತಂಡಕ್ಕೆ ವಾಪಾಸಾಗಿರುವುದರಿಂದ ಪ್ಲೇಯಿಂಗ್ ಇಲೆವೆನ್ ನಲ್ಲಿ ಬದಲಾವಣೆ ಖಚಿತ. ಕೊಹ್ಲಿಯನ್ನು ಆಡಿಸಬೇಕಾದರೆ ಯಾರನ್ನು ಕೈಬಿಡಬೇಕು ಎಂಬ ಯೋಚನೆಯಲ್ಲಿ ಮ್ಯಾನೇಜ್ಮೆಂಟ್ ಇದೆ. ಹಾಗಂತ ತಂಡದಲ್ಲಿ ಹೆಚ್ಚಿನ ಬದಲಾವಣೆ ಮಾಡಲು ಸಾಧ್ಯವಿಲ್ಲ. ಕಳಪೆ ಫಾರ್ಮ್ನಲ್ಲಿರುವ ಅಜಿಂಕ್ಯಾ ರಹಾನೆ ಮತ್ತು ಚೇತೇಶ್ವರ್ ಪೂಜಾರ ಅವರನ್ನೂ ಕೈಬಿಡಲು ಆಗುವುದಿಲ್ಲ.
ಇನ್ನು ಮಯಾಂಕ್ ಅಗರ್ವಾಲ್ ಅವರನ್ನು ಹೊಗಿಟ್ಟರೆ ಓಪನರ್ ಯಾರು ಅನ್ನುವ ಪ್ರಶ್ನೆ ಹುಟ್ಟುತ್ತದೆ. ಒಂದು ವೇಳೆ ವೃದ್ಧಿಮಾನ್ ಸಾಹಾ ಫಿಟ್ ಆಹದೇ ಇದ್ದರೆ ಕೆ. ಎಸ್. ಭರತ್ ವಿಕೆಟ್ ಕೀಪರ್ ಆಗಿ ಕಣಕ್ಕಿಳಿಯಲಿದ್ದಾರೆ. ಭರತ್ ಮಯಾಂಕ್ ಜಾಗದಲ್ಲಿ ಓಪನರ್ ಆಗಿ ಬಂದರೂ ಆಶ್ಚರ್ಯವಿಲ್ಲ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಿರ್ಣಾಯಕ ಅಂತಿಮ ಟೆಸ್ಟ್ ಪಂದ್ಯಕ್ಕೆ ಸಂಪೂರ್ಣವಾಗಿ ಸ್ಪಿನ್ ಸ್ನೇಹಿಯಾದ ಪಿಚ್ ನಿರ್ಮಾಣಗೊಳ್ಳುವ ನಿರೀಕ್ಷೆ ಇದೆ. ಮೊದಲ ದಿನದಿಂದಲೇ ಟರ್ನಿಂಗ್ ಪಿಚ್ ಸಿಕ್ಕರೆ ಟೀಮ್ ಇಂಡಿಯಾ ಲಾಭ ಮಾಡಿಕೊಳ್ಳುವುದು ಗ್ಯಾರೆಂಟಿ.
ಸಂಭಾವ್ಯ ಪ್ಲೇಯಿಂಗ್ X1
- ಶುಭ್ಮನ್ ಗಿಲ್, 2. ಮಯಾಂಕ್ ಅಗರ್ವಾಲ್/ ಕೆ.ಎಸ್.ಭರತ್, 3. ಚೇತೇಶ್ವರ ಪೂಜಾರಾ, 4. ವಿರಾಟ್ ಕೊಹ್ಲಿ, 5. ಶ್ರೇಯಸ್ ಅಯ್ಯರ್, 6. ಅಜಿಂಕ್ಯಾ ರಹಾನೆ, 7. ರವೀಂದ್ರ ಜಡೇಜಾ, 8. ಆರ್. ಅಶ್ವಿನ್, 8. ಅಕ್ಸರ್ ಪಟೇಲ್, 9. ವೃದ್ಧಿಮಾನ್ ಸಾಹಾ, 10. ಉಮೇಶ್ ಯಾದವ್, 11. ಇಶಾಂತ್ ಶರ್ಮಾ/ ಮೊಹಮ್ಮದ್ ಸಿರಾಜ್