ಟೀಮ್ ಇಂಡಿಯಾ ಹಾಗೂ ಸೌತ್ ಆಫ್ರಿಕಾ ನಡುವಿನ ಅಂತಿಮ ಏಕದಿನ ಕದನಕ್ಕೆ ಕೌಂಟ್ ಡೌನ್ ಶುರುವಾಗಿದೆ.
ಸರಣಿಯಲ್ಲಿ 1-1 ಸಮಬಲ ಸಾಧಸಿರುವ ಉಭಯ ತಂಡಗಳು ಕೊನೆಯ ಪಂದ್ಯವನ್ನು ಗೆದ್ದು ಸರಣಿ ಮುಡಿಗೇರಿಸಿಕೊಳ್ಳುವ ತವಕದಲ್ಲಿವೆ.
ಇಂದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ಲೇಯಿಂಗ್ ಇಲೆವೆನ್ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಸಿದೆ. ನಾಯಕ ಶಿಖರ್ ಧವನ್ ಇಂದಿನ ಪಂದ್ಯದಲ್ಲಿ ಬದಲಾವಣೆ ಮಾಡುತ್ತಾರಾ? ಮೊನ್ನೆ ಗೆದ್ದ ತಂಡವನ್ನೆ ಕಣಕ್ಕಿಳಿಸು್ತ್ತಾರಾ? ಅನ್ನೊ ಪ್ರಶ್ನೆಗೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಓಪನರ್ ಶುಭಮನ್ ಗಿಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವುದರಿಂದ ಋತುರಾಜ್ ಗಾಯಕ್ವಾಡ್ ಗೆ ಮತ್ತೊಂದು ಅವಕಾಶ ಕೊಡುತ್ತಾರಾ ? ಇನ್ನು ಬೌಲಿಂಗ್ ವಿಭಾಗದಲ್ಲಿ ಮೊಹ್ಮದ್ ಸೀರಾಜ್ ಜಸ್ಪ್ರೀತ್ ಬುಮ್ರಾ ಜಾಗದಲ್ಲಿ ಆಡುತ್ತಾರಾ ಎನ್ನುವುದಕ್ಕೆ ಇಂದು ಉತ್ತರ ಸಿಗಲಿದೆ.
ಇನ್ನು ಸೌತ್ ಆಫ್ರಿಕಾ ತಂಡದಲ್ಲಿ ಎರಡನೆ ಪಂದ್ಯದ ವೇಳೆ ವಿಶ್ರಾಂತಿ ಪಡೆದಿದ್ದ ನಾಯಕ ಟೆಂಬಾ ಬಾವುಮೆ ಕಣಕ್ಕಳಿಯುವ ಸಾಧ್ಯತೆ ಹೆಚ್ಚಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಇಶನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್,ಕುಲದೀಪ್ ಯಾದವ್, ಆವೇಶ್ ಖಾನ್, ಮೊಹ್ಮದ್ ಸೀರಾಜ್.