ಕಾನ್ಪುರ ಟೆಸ್ಟ್ ಡ್ರಾಗೊಂಡ ಬಳಿಕ ಟೀಮ್ ಇಂಡಿಯಾ ನಿರಾಸೆ ಅನುಭವಿಸಿದೆ. ಗೆಲುವಿನ ಹತ್ತಿರಕ್ಕೆ ಬಂದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ಆಗಿದ್ದಕ್ಕೆ ಟೀಮ್ ಮ್ಯಾನೇಜ್ಮೆಂಟ್ ತಲೆಕೆಡಿಸಿಕೊಂಡಿದೆ. ಅಷ್ಟೇ ಅಲ್ಲ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಟೀಮ್ ಇಂಡಿಯಾ 8 ಅಂಕಗಳನ್ನು ಕೂಡ ಕಳೆದುಕೊಂಡಿದೆ.ಹೀಗಾಗಿ ಮುಂಬೈನಲ್ಲಿ ಶುಕ್ರವಾರ ಆರಂಭವಾಗುವ 2ನೇ ಟೆಸ್ಟ್ಗೂ ಮುನ್ನ ತಂಡದಲ್ಲಿ ಬದಲಾವಣೆ ಖಚಿತ ಅಂತ ಹೇಳಲಾಗುತ್ತಿದೆ.
ವಿರಾಟ್ ಕಂ ಬ್ಯಾಕ್, ಯಾರಿಗೆ ಗೇಟ್ಪಾಸ್..?
ವಿರಾಟ್ ಕೊಹ್ಲಿ ಟೀಮ್ ಇಂಡಿಯಾಕ್ಕೆ ಕಂ ಬ್ಯಾಕ್ ಮಾಡಿರುವುದರಿಂದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ಆದರೆ ವಿರಾಟ್ಗಾಗಿ ಯಾರು ಸ್ಥಾನ ಬಿಟ್ಟುಕೊಡ್ತಾರೆ ಅನ್ನುವ ಚರ್ಚೆ ಇದೆ. ಮಯಾಂಕ್ ಅಗರ್ವಾಲ್ ಅಥವಾ ಅಜಿಂಕ್ಯಾ ರಹಾನೆ ತಂಡದಿಂದ ಹೊರಗುಳಿಯಬಹುದು ಅನ್ನುವ ಲೆಕ್ಕಾಚಾರ ನಡೆಯುತ್ತಿದೆ. ಅಗರ್ವಾಲ್ ಹೊರಗಿದ್ದರೆ ಪೂಜಾರಾ ಇನ್ನಿಂಗ್ಸ್ ಆರಂಭಿಸಿ, ಶ್ರೇಯಸ್ ಒನ್ ಡೌನ್ ಸ್ಥಾನದಲ್ಲಿ ಆಡಲಿದ್ದಾರೆ. ರಹಾನೆ ತಂಡದಿಂದ ಹೊರಬಿದ್ದರೆ ವಿರಾಟ್ ರಹಾನೆ ಜಾಗದಲ್ಲಿ ಆಡಲಿದ್ದಾರೆ.
ಸಾಹಾಗೆ ರೆಸ್ಟ್, ಭರತ್ಗೆ ಫಸ್ಟ್ ಟೆಸ್ಟ್..?
ಮೊದಲ ಟೆಸ್ಟ್ ವೇಳೆಯಲ್ಲಿ ವೃದ್ಧಿಮಾನ್ ಸಾಹಾ ಕತ್ತುನೋವಿಗೆ ಒಳಗಾಗಿದ್ದರು. ಆದರೆ ಸಾಹಾ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಈಗ 2ನೇ ಟೆಸ್ಟ್ ನಲ್ಲಿ ಅವರು ವಿರಾಮ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾದರೆ ಕೆ.ಎಸ್. ಭರತ್ ಮೊದಲ ಟೆಸ್ಟ್ ಆಡಲಿದ್ದಾರೆ. ಒಂದು ವೇಳೆ ಅಗರ್ವಾಲ್ ಹೊರ ಟೀಮ್ ಇಂಡಿಯಾದಿಂದ ಹೊರಬಿದ್ದರೆ ಭರತ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆಯೂ ಇದೆ.
ಇಶಾಂತ್ ಬದಲಿಗೆ ಸಿರಾಜ್..?
ಮೊದಲ ಟೆಸ್ಟ್ ಪಂದ್ಯದಲ್ಲಿ ಇಶಾಂತ್ ಶರ್ಮಾ ಅಷ್ಟಾಗಿ ಪರಿಣಾಮ ಬೀರಿರಲಿಲ್ಲ. ಅಷ್ಟೇ ಅಲ್ಲ ಕೈ ಬೆರಳಿಗೆ ಗಾಯ ಕೂಡ ಮಾಡಿಕೊಂಡಿದ್ದರು. ಹೀಗಾಗಿ ಇಶಾಂತ್ ಜಾಗದಲ್ಲಿ ಮೊಹಮ್ಮದ್ ಸಿರಾಜ್ ರನ್ನು ಆಡಿಸುವ ಪ್ಲಾನ್ ಕೂಡ ನಡೆಯುತ್ತಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಗೆ ಮುನ್ನ ಸಾಕಷ್ಟು ಬದಲಾವಣೆ ಮಾಡುವುದು ಬಹುತೇಕ ಖಚಿತ.