ಟೀಮ್ ಇಂಡಿಯಾ ಟಿ20 ವಿಶ್ವಕಪ್ನಿಂದ ನಿರ್ಗಮಿಸಿದ ಬೆನ್ನಲ್ಲೆ ಮುಂದಿನ 24 ತಿಂಗಳಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆರ್.ಅಶ್ವಿನ್ಗೆ ವಿಶ್ರಾಂತಿ ಕೊಟ್ಟು ತಂಡದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಅಶ್ವಿನ್ ಹಾಗು ದಿನೇಶ್ ಕಾರ್ತಿಕ್ ಈ ಬಾರಿಯ ಟಿ20 ವಿಶ್ವಕಪ್ಕೊನೆಯ ವಿಶ್ವಕಪ್ ಆಗಿದೆ. ಕೊಹ್ಲಿ ಮತ್ತು ರೋಹಿತ್ಗೆ ತಮ್ಮ ಭವಿಷ್ಯವನ್ನು ನಿರ್ಧರಿಸಿಕೊಳ್ಳಲು ಸಮಯ ನೀಡಲಿದೆ.
ಮುಂದಿನ ಎರಡು ವಿಶ್ವಕಪ್ಗೆ ಎರಡು ವರ್ಷ ಸಮಯ ಇದೆ. ಹಾರ್ದಿಕ್ ಪಾಂಡ್ಯಗೆ ಟಿ20 ನಾಯಕತ್ವ ನೀಡಿ ಹೊಸ ತಂಡ ಸಜ್ಜುಗೊಳಿಸುವ ಬೆಳವನಿಗೆ ಮುಂದಿನ ದಿನಗಳಲ್ಲಿ ನಡೆಯಬಹುದೆಂದು ಹೇಳಲಾಗುತ್ತಿದೆ.
ಟಿ20 ವಿಶ್ವಕಪ್ ಮುಗಿದಿದ್ದರಿಂದ ತಂಡದ ಸ್ಟಾರ್ ಆಟಗಾರರು ವಿದಾಯ ಹೇಳಬಹುದೆಂದು ಹೇಳಾಗುತ್ತಿದೆ.
ಬಿಸಿಸಿಐ ಯಾರನ್ನೂ ಬಲವಂತವಾಗಿ ನಿವೃತ್ತಿಯಾಗಿ ಎಂದು ಹೇಳುವುದಿಲ್ಲ. 2023ರಲ್ಲಿ ಬಿಡುವಿಲ್ಲದಷ್ಟು ಟಿ20 ಸರಣಿಗಳಿವೆ. ಮುಂದಿನ ವರ್ಷ ಹಿರಿಯ ಆಟಗಾರರು ಟಿ20ಯಲ್ಲಿ ಆಡುವುದಿಲ್ಲ ಬಿಸಿಸಿಐನ ಮೂಲಗಳು ತಿಳಿಸಿದೆ.