Team India : 2 ಪಂದ್ಯ, ಸತತ 2 ಸೋಲು 10 ತಿಂಗಳ ಬಳಿಕ ಇದೇ ಮೊದಲ ಬಾರಿ
ಏಷ್ಯಾಕಪ್‌ನಲ್ಲಿ (Asia Cup) ಟೀಮ್ ಇಂಡಿಯಾ (Team India) ಅದ್ಭುತ ಆಟ ಆಡುತ್ತೆ ಅನ್ನುವ ನಿರೀಕ್ಷೆ ಇತ್ತು. ಇಂಗ್ಲೆಂಡ್, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕಾದಂತಹ ಬಲಾಢ್ಯ ತಂಡಗಳನ್ನೇ ಮಕಾಡೆ ಮಲಗಿಸಿತ್ತು. ಅದ್ಭುತ ಫಾರ್ಮ್ ಇತ್ತು. ಆಟಗಾರರ ಫಿಟ್‌ನೆಸ್ ಕೂಡ ಸಮಸ್ಯೆ ಆಗಿರಲಿಲ್ಲ. ಎಲ್ಲಾ ಪ್ರಯೋಗಗಳನ್ನು ಯಶಸ್ವಿಯಾಗಿ ಮೈನ್ ಆಟಗಾರರು ಇಲ್ದೇ ಇದ್ರೂ ಗೆಲ್ಲುವ ಆತ್ಮವಿಶ್ವಾಸವಿತ್ತು. ಆದರೆ ಏಷ್ಯಾಕಪ್‌ನಲ್ಲಿ ನಡೆದಿದ್ದೇ ಬೇರೆ. ಲೆಕ್ಕಾಚಾರಗಳು ಎಲ್ಲವೂ ಉಲ್ಟಾ ಆಗಿವೆ.
ಟೀಮ್ ಇಂಡಿಯಾ ಸತತ ಎರಡು ಪಂದ್ಯಗಳನ್ನು ಸೋತಿದ್ದು 10 ತಿಂಗಳ (10 Months) ಹಿಂದೆ. ದುಬೈನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ (T20 World Cup) ಪಾಕಿಸ್ತಾನ (Pakistan) ಮತ್ತು ನ್ಯೂಜಿಲೆಂಡ್ (Newzealand) ವಿರುದ್ಧ ಭಾರತ ಕೊನೆಯ ಬಾರಿಗೆ ಸತತ 2 ಪಂದ್ಯಗಳನ್ನು ಸೋತಿತ್ತು. ಅದಾದ ಬಳಿಕ ಸೋಲು ಅನ್ನುವುದು ಎದುರಾಗಿದ್ದು ಕಡಿಮೆಯೇ. ಅದರಲ್ಲೂ ಸತತ ಸೋಲು ಇಲ್ವೇ ಇಲ್ಲ. ಆದರೆ ಏಷ್ಯಾಕಪ್‌ಗಾಗಿ ದುಬೈಗೆ ಕಾಲಿಟ್ಟ ಮೇಲೆ ಮತ್ತೆ ಇತಿಹಾಸ ಮರುಕಳಿಸಿದೆ. ಭಾರತ (India) 2 ಪಂದ್ಯಗಳನ್ನು ಸತತವಾಗಿ ಸೋತಿದೆ.
ಏಷ್ಯಾಕಪ್ ಲೀಗ್ ಹಂತದಲ್ಲಿ ಭಾರತದ ಆಟ ನೋಡಿದಾಗ ವಿಶ್ವಾಸ ಹೆಚ್ಚಿತ್ತು. ಆದರೆ ಸೂಪರ್ 4 ನಲ್ಲಿ (Super 4) ಎಲ್ಲವೂ ಬದಲಾಯಿತು. ಪಾಕಿಸ್ತಾನ ವಿರುದ್ಧದ ಸೋಲಿನಿಂದ ಟೀಮ್ ಇಂಡಿಯಾ ಪಾಠ ಕಲಿಯುತ್ತೆ ಅನ್ನುವಷ್ಟರಲ್ಲಿ ಶ್ರೀಲಂಕಾ (Srilanka) ವಿರುದ್ಧ ಸೋತಿದೆ. ಎರಡೂ ಪಂದ್ಯಗಳಲ್ಲೂ ಭಾರತ ಕೊನೆಯ ಓವರ್‌ನಲ್ಲಿ ಸೋತಿದೆ. 19 ಮತ್ತು 20 ನೇ ಓವರುಗಳು ದುಬಾರಿಯಾಗಿದ್ದು 2 ಪಂದ್ಯಗಳನ್ನು ಭಾರತದ ಕೈಯಿಂದ ಕಸಿದುಕೊಂಡಿದೆ.
ಭಾರತದ ಡೆತ್ ಬೌಲಿಂಗ್ ಸಮಸ್ಯೆ ಹೊಸತಲ್ಲ. ಜಸ್‌ಪ್ರಿತ್ ಬುಮ್ರಾ ಇಲ್ಲದೇ ಇರುವಾಗ ಇಂತಹ ಸಮಸ್ಯೆಗಳು ಎದುರಾಗಿವೆ. ಈ ಬಾರಿ ಅನುಭವಿ ಭುವನೇಶ್ವರ್ ಕುಮಾರ್ ಎಡವಿದ್ದೇ ದುಬಾರಿಯಾಗಿದೆ. ದುಬೈನಲ್ಲಿ ಟಾಸ್ ಗೆದ್ದವರೇ ಬಾಸ್ ಅನ್ನುವುದು ಮತ್ತೆ ಸಾಭೀತಾಗಿದೆ. ಕಾರಣ ಏನೇ ಇರಬಹುದು, ಆದರೆ ಸೋಲು ಟೀಮ್ ಇಂಡಿಯಾಕ್ಕೆ ಆಘಾತ ತಂದಿದೆ ಅನ್ನುವುದು ಸುಳ್ಳಲ್ಲ.