Mohammad Shami : ಯುವಕರು ಫೇಲ್, ಶಮಿಗೆ ಒಲಿಯುತ್ತಾ ವಿಶ್ವಕಪ್ ಟಿಕೆಟ್?
ಅರ್ಶದೀಪ್ ಸಿಂಗ್ (Arshadeep Singh), ಆವೇಶ್ ಖಾನ್ (Avesh Khan) ಟೀಮ್ ಇಂಡಿಯಾ (Team India) ಯುವ ಫಾಸ್ಟ್ ಬೌಲರ್ಗಳನ್ನು ಪ್ರಯೋಗ ಮಾಡಿದ್ದೇ ಮಾಡಿದ್ದು. ಆದರೆ ಈ ವಿಶ್ವಕಪ್ಗೆ ಅದರ ಫಲ ಕಾಣುವ ಲಕ್ಷಣ ಕಾಣುತ್ತಿಲ್ಲ. ಬೇಕಾದ ಟೈಮ್ನಲ್ಲೇ ಈ ಆಟಗಾರರು ಕೈ ಕೊಡುತ್ತಿದ್ದಾರೆ. ಟೀಮ್ ಇಂಡಿಯಾದ ಸೋಲಿಗೆ ಕಾರಣವಾಗುತ್ತಿದ್ದಾರೆ. ಹೀಗಾಗಿ ಬಿಸಿಸಿಐ (BCCI) ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್ಗೆ (T20 World Cup) ಅನುಭವಿ ಬೌಲರ್ಗೆ ಮತ್ತೆ ಮಣೆ ಹಾಕುವ ಸಾಧ್ಯತೆ ಇದೆ.
ಭುವನೇಶ್ವರ್ ಕುಮಾರ್ (Bhuvaneshwar Kumar) ಮತ್ತು ಜಸ್ಪ್ರಿತ್ ಬುಮ್ರಾ (Jaspreet Bumrah) ಟಿ20 ವಿಶ್ವಕಪ್ಗೆ ನೇರವಾಗಿ ಆಯ್ಕೆಯಾಗುತ್ತಾರೆ. ಆದರೆ ಮೂರನೇ ಬೌಲರ್ ಅರ್ಶದೀಪ್ ಅಥವಾ ಆವೇಶ್ ಖಾನ್ ಇರಬಹುದು. ಇವರಲ್ಲಿ ಒಬ್ಬರ ಸ್ಥಾನಕ್ಕೆ ಮೊಹಮ್ಮದ್ ಶಮಿಯನ್ನು ಆಯ್ಕೆ ಮಾಡಿದರೂ ಅಚ್ಚರಿ ಇಲ್ಲ. ಯಾಕಂದರೆ ಶಮಿ ಅನುಭವ ತಂಡಕ್ಕೆ ಬೇಕಾಗಿದೆ. ಹೀಗಾಗಿ ಆಸ್ಟ್ರೇಲಿಯಾ (Australia) ಮತ್ತು ಸೌತ್ ಆಫ್ರಿಖಾ (south Africa) ವಿರುದ್ಧದದ ಟಿ 20 ಸರಣಿಯಲ್ಲಿ ಶಮಿಗೆ ಅಗ್ನಿ ಪರೀಕ್ಷೆ ನಡೆಯಲಿದೆ.
ಕಳೆದ ಟಿ20 ವಿಶ್ವಕಪ್ ಬಳಿಕ ಶಮಿಯನ್ನು ಏಕದಿನ (ODI) ಮತ್ತು ಟೆಸ್ಟ್ (Test) ಪಂದ್ಯಗಳಿಗೆ ಮಾತ್ರ ಪರಿಗಣಿಸಲಾಗಿತ್ತು. ಆದರೆ ಐಪಿಎಲ್ನಲ್ಲಿ(IPL) ಗುಜರಾತ್ ಟೈಟಾನ್ಸ್ ಪರ ಶಮಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಆದರೆ ನಂತರ ನಡೆದ ದಕ್ಷಿಣ ಆಫ್ರಿಕಾ, ವೆಸ್ಟ್ಇಂಡೀಸ್, ಇಂಗ್ಲೆಂಡ್ ಮತತು ಏಷ್ಯಾಕಪ್ ಸರಣಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ. ಇವರ ಬದಲು ಆವೇಶ್ ಖಾನ್ ಮತ್ತು ಅರ್ಶದೀಪ್ಗೆ ಅವಕಾಶ ನೀಡಲಾಗಿತ್ತು. ಈಗ ಇವರಿಬ್ಬರು ವೈಫಲ್ಯ ಕಂಡಿದ್ದಾರೆ. ಶಮಿ ಆಯ್ಕೆ ಅನಿವಾರ್ಯವಾಗಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಒಟ್ಟು 6 ಪಂದ್ಯಗಳು ನಡೆಯಲಿವೆ. ಇದು ಬಹುಮುಖ್ಯವಾಗಲಿದೆ. ಶಮಿ ಆಯ್ಕೆಯಿಂದ (Selection) ಭುವನೇಶ್ವರ್ ಕುಮಾರ್ ಅವರನ್ನು ಆರಂಭ ಮತ್ತು ಮಿಡಲ್ ಓವರ್ಗಳಲ್ಲಿ ಕೋಟಾ ಮುಗಿಸಲು ನೆರವಾಗುತ್ತದೆ. ಡೆತ್ ಬೌಲಿಂಗ್ನಲ್ಲಿ ಬುಮ್ರಾಗೆ ಒಳ್ಳೆಯ ಸಾಥ್ ಸಿಗುತ್ತದೆ. ವಿಶ್ವಕಪ್ಗೆ ಮತ್ತೊಬ್ಬ ಬೌಲರ್ ಆಗಿ ದೀಪಕ್ ಚಹರ್ (Deepak Chahar) ಅವರನ್ನು ಕೂಡ ಕರೆದುಕೊಂಡು ಹೋಗಬಹುದು. ಒಟ್ಟಿನಲ್ಲಿ ಪ್ರಯೋಗ ಸರಿಯಾದ ಟೈಮ್ನಲ್ಲಿ ಕೈ ಕೊಟ್ಟಿರುವ ಕಾರಣದಿಂದ ಬಿಸಿಸಿಐಗೆ ಶಮಿ ಅನಿವಾರ್ಯವಾಗಿದ್ದಾರೆ.