Team india – ಈಡನ್ ಗಾರ್ಡನ್ ನಲ್ಲಿ ದೋಸ್ತಿಗಳ ಸಮ್ಮಿಲನ..!
![Team india - ಈಡನ್ ಗಾರ್ಡನ್ ನಲ್ಲಿ ದೋಸ್ತಿಗಳ ಸಮ್ಮಿಲನ..! 3 rahul dravid and sourav ganguly sports karnataka](http://sportskarnataka.com/wp-content/uploads/2022/02/ganguly-and-rahul-dravid.jpg)
ಭಾರತೀಯ ಕ್ರಿಕೆಟ್ ನ ಎವರ್ ಗ್ರೀನ್ ಹೀರೋಗಳು ಕೊಲ್ಕತ್ತಾ ಈಡನ್ ಗಾರ್ಡನ್ ಅಂಗಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತ್ಯಕ್ಷರಾಗಿದ್ದಾರೆ.
ಹೌದು, ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ-20 ಪಂದ್ಯ ಇಂದು (ಫೆಬ್ರವರಿ 16) ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ ಮತ್ತು ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಈಡನ್ ಗಾರ್ಡನ್ ಅಂಗಣದಲ್ಲಿ ಭೇಟಿಯಾಗಿದ್ದಾರೆ.
ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಈಡನ್ ಗಾರ್ಡನ್ ನಲ್ಲಿ ಭೇಟಿಯಾಗಿರುವ ಫೋಟೋವನ್ನು ಬಿಸಿಸಿಐ ತನ್ನ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಭಾರತದ ಇಬ್ಬರು ಕ್ರಿಕೆಟ್ ದಂತಕಥೆಗಳು ಈಡನ್ ಗಾರ್ಡನ್ ನಲ್ಲಿ ಭೇಟಿಯಾಗಿದ್ದಾರೆ ಎಂದು ಬರೆದುಕೊಂಡಿದೆ.
Team india – Legends of Indian cricket meet at Eden Gardens!
![Team india - ಈಡನ್ ಗಾರ್ಡನ್ ನಲ್ಲಿ ದೋಸ್ತಿಗಳ ಸಮ್ಮಿಲನ..! 4 rahul dravid sourav ganguly sports karnataka](http://sportskarnataka.com/wp-content/uploads/2022/02/sourav-and-rahul.jpg)
ಅಂದ ಹಾಗೇ ಈಡನ್ ಗಾರ್ಡನ್ ಅಂಗಣ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಇಬ್ಬರಿಗೂ ನೆಚ್ಚಿನ ಅಂಗಣವಾಗಿದೆ. ಸೌರವ್ ಗಂಗೂಲಿ ಅವರ ತವರು ಮೈದಾನ ಒಂದು ಕಡೆಯಾದ್ರೆ, ಇನ್ನೊಂದೆಡೆ 2001ರಲ್ಲಿ ಸೌರವ್ ಸಾರಥ್ಯದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ದ ಐತಿಹಾಸಿಕ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ ರಾಹುಲ್ ದ್ರಾವಿಡ್ ಅವರು ಎರಡನೇ ಇನಿಂಗ್ಸ್ ನಲ್ಲಿ 180 ರನ್ ದಾಖಲಿಸಿದ್ದರು. ಅಲ್ಲದೆ ವಿವಿಎಸ್ ಲಕ್ಷ್ಮಣ್ ಜೊತೆ 376 ರನ್ ಗಳ ಜೊತೆಯಾಟವನ್ನಾಡಿ ಆಸ್ಟ್ರೇಲಿಯಾದ ಗರ್ವಭಂಗ ಮಾಡಿದ್ದರು. ಅಷ್ಟೇ ಅಲ್ಲ, ಆಸ್ಟ್ರೇಲಿಯಾದ ಸತತ 16 ಟೆಸ್ಟ್ ಪಂದ್ಯಗಳ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಕೂಡ ಹಾಕಿದ್ರು.
ಇನ್ನು 1996ರಲ್ಲಿ ಸೌರವ್ ಗಂಗೂಲಿ ಮತ್ತು ರಾಹುಲ್ ದ್ರಾವಿಡ್ ಜೊತೆಯಾಗಿ ಲಾಡ್ರ್ಸ್ ಅಂಗಣದಲ್ಲಿ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಸೌರವ್ ಶತಕ ಸಿಡಿಸಿದ್ರೆ, ದ್ರಾವಿಡ್ ನಾಲ್ಕು ರನ್ ಗಳಿಂದ ಶತಕ ವಂಚಿತರಾಗಿದ್ರು.