ಟೀಮ್ ಇಂಡಿಯಾ ಮತ್ತು ವೆಸ್ಟ್ಇಂಡೀಸ್ ನಡುವಿನ ಟಿ20 ಸರಣಿಯ ಮೊದಲ ಪಂದ್ಯದ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಪಂದ್ಯ ನಡೆಯಲಿದೆ. ಟಿ20ಯ ಸ್ಪೆಷಲಿಸ್ಟ್ಗಳೆಂದೇ ಕರೆಸಿಕೊಳ್ಳುವ ವೆಸ್ಟ್ಇಂಡೀಸ್ ತಂಡ ಟೀಮ್ ಇಂಡಿಯಾಕ್ಕೆ ದೊಡ್ಡ ಸವಾಲೊಡ್ಡುವ ಪ್ಲಾನ್ನಲ್ಲಿದೆ.
ಟೀಮ್ ಇಂಡಿಯಾದ ಕಾಂಬಿನೇಷನ್ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ನಾಯಕ ರೋಹಿತ್ ಶರ್ಮಾ ಜೊತೆ ಆರಂಭಿಕನಾಗಿ ಕಣಕ್ಕಿಳಿಯುವುದು ಯಾರು ಅನ್ನುವ ಚರ್ಚೆ ಜೋರಾಗಿದೆ. ಇಶಾನ್ ಕಿಶನ್ ಫೆವರೀಟ್ ಆಗಿದ್ದರೂ, ವೆಂಕಟೇಶ್ ಅಯ್ಯರ್ ಮತ್ತು ರಿಷಬ್ ಪಂತ್ ಪ್ರಯೋಗದ ಬಗ್ಗೆ ಮಾತಿದೆ. ವಿರಾಟ್ ಕೊಹ್ಲಿ ಸ್ಥಾನ ಗಟ್ಟಿ. ಆದರೆ ರಿಷಬ್ ಪಂತ್ಗೆ ವಿರಾಮ ಕೊಡಬೇಕೋ ಬೇಡವೋ ಅನ್ನವ ಗೊಂದಲವಿದೆ. ಶ್ರೇಯಸ್ ಅಯ್ಯರ್ ಮತ್ತು ಸೂರ್ಯ ಕುಮಾರ್ ಯಾದವ್ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ಗ್ಯಾರೆಂಟಿ.
ಆಲ್ರೌಂಡರ್ ಖೋಟಾದಲ್ಲಿ ಶಾರ್ದೂಲ್, ದೀಪಕ್ ಚಾಹರ್ ಮತ್ತು ಹರ್ಷಲ್ ಪಟೇಲ್ ನಡುವೆ ಜೋರಾದ ಫೈಟ್ ಇದೆ. ಇವರ ಜೊತೆ ವೆಂಕಟೇಶ್ ಅಯ್ಯರ್ ಕೂಡ ಇದ್ದಾರೆ. ಸ್ಪಿನ್ ವಿಭಾಗಕ್ಕೆ ಚಹಲ್ ಮತ್ತು ಕುಲ್ ದೀಪ್ ಯಾದವ್ ಆಯ್ಕೆ ಇದೆ. ಫಾಸ್ಟ್ ಬೌಲಿಂಗ್ನಲ್ಲಿ ಸಿರಾಜ್ ಲೀಡರ್. ಆದರೆ ಅವರ ಜೊತೆ ಹೊಸ ಚೆಂಡು ಹಂಚಿಕೊಳ್ಳುವವರು ಯಾರು ಅನ್ನುವ ಪ್ರಶ್ನೆಯೂ ಇದೆ.
ವೆಸ್ಟ್ಇಂಡೀಸ್ ಟಿ20ಯಲ್ಲಿ ಸಾಕಷ್ಟು ಬಲಿಷ್ಠವಾಗಿದೆ. ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೊಲಸ್ ಪೂರನ್ರಂತಹ ಸಿಕ್ಸರ್ ಹಿಟ್ಟರ್ಗಳನ್ನು ಹೊಂದಿದೆ. ಕಿರನ್ ಪೊಲ್ಲಾರ್ಡ್, ರೊಮ್ವನ್ ಪೊವೆಲ್. ರೊಮರಿಯೋ ಶೆಫರ್ಡ್ ಹೀಗೆ ಸಿಕ್ಸ್ ಹಿಟ್ಟರ್ಗಳ ಪಟ್ಟಿಯೇ ಇದೆ.
ಬೌಲಿಂಗ್ನಲ್ಲೂ ಕೆರಿಬಿಯನ್ನರಿಗೆ ಬಲವಿದೆ. ಅಕಿಲ್ ಹೊಸೈನ್, ಶೆಲ್ಡನ್ ಕಾಟ್ರೆಲ್, ಓಡಿಯನ್ ಸ್ಮಿತ್ ಮತ್ತು ಜೇಸನ್ ಹೋಲ್ಡರ್ ಬಲವಿದೆ.
ಕೊಲ್ಕತ್ತಾದ ಈಡನ್ ಗಾರ್ಡನ್ ಪಿಚ್ ಬ್ಯಾಟ್ಸ್ಮನ್ಗಳ ಸ್ವರ್ಗ. ಆದರೆ ಡ್ಯೂ ಫ್ಯಾಕ್ಟರ್ ಫಲಿತಾಂಶ ನಿರ್ಧಾರ ಮಾಡುವ ಸಾಧ್ಯತೆ ಇದೆ. ಹೀಗಾಗಿ ಟಾಸ್ ಮೇಲೆ ಎರಡೂ ತಂಡಗಳು ಕಣ್ಣಿಟ್ಟಿವೆ.
ಸಂಭಾವ್ಯ ತಂಡಗಳು
ಭಾರತ:
-
ರೋಹಿತ್ ಶರ್ಮಾ, 2. ಇಶಾನ್ ಕಿಶನ್, 3. ವಿರಾಟ್ ಕೊಹ್ಲಿ, 4. ರಿಷಬ್ ಪಂತ್, 5. ಶ್ರೇಯಸ್ ಅಯ್ಯರ್, 6. ಸೂರ್ಯಕುಮಾರ್ ಯಾದವ್, 7. ದೀಪಕ್ ಚಹರ್, 8. ಶಾರ್ದೂಲ್ ಥಾಕೂರ್, 9. ಮೊಹಮ್ಮದ್ ಸಿರಾಜ್, 10. ಆವೇಶ್ ಖಾನ್, 11. ಕುಲ್ದೀಪ್ ಯಾದವ್
ವೆಸ್ಟ್ಇಂಡೀಸ್
-
ಕೈಲ್ ಮೇಯರ್ಸ್, 2. ಬ್ರೆಂಡನ್ ಕಿಂಗ್, 3. ನಿಕೊಲಸ್ ಪೂರನ್, 4. ಕೈರನ್ ಪೊಲ್ಲಾರ್ಡ್, 5. ರೊವ್ಮನ್ ಪೊವೆಲ್, 6. ಜೇಸನ್ ಹೋಲ್ಡರ್, 7. ರೊಮರಿಯೋ ಶೆಪರ್ಡ್, 8. ಫೆಬಿಯನ್ ಅಲೆನ್, 9. ಒಡಿನ್ ಸ್ಮಿತ್, 10. ಅಕಿಲ್ ಹೊಸೈನ್, 11. ಶೆಲ್ಡನ್ ಕಾಟ್ರೆಲ್