Team India – ಜಿಂಬಾಬ್ವೆ ಸರಣಿಗೆ ಕೆ.ಎಲ್. ರಾಹುಲ್ ಕ್ಯಾಪ್ಟನ್..?
![Team India - ಜಿಂಬಾಬ್ವೆ ಸರಣಿಗೆ ಕೆ.ಎಲ್. ರಾಹುಲ್ ಕ್ಯಾಪ್ಟನ್..?? 3 india Zimbabwe sports karnataka](http://sportskarnataka.com/wp-content/uploads/2022/07/india-jimba-300x171.jpg)
ವೆಸ್ಟ್ ಇಂಡೀಸ್ ಸರಣಿ ಮುಗಿದ ನಂತರ ಟೀಮ್ ಇಂಡಿಯಾ ಜಿಂಬಾಬ್ವೆ ವಿರುದ್ದ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
ಈಗಾಗಲೇ ಜಿಂಬಾಬ್ವೆ ಕ್ರಿಕೆಟ್ ಮಂಡಳಿಯು ಮೂರು ಏಕದಿನ ಪಂದ್ಯಗಳ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ. ಆಗಸ್ಟ್ 18, 20 ಮತ್ತು 22ರಂದು ಹರಾರೆಯಲ್ಲಿ ಏಕದಿನ ಪಂದ್ಯಗಳು ನಡೆಯಲಿವೆ.
ಅಂದ ಹಾಗೇ ಜಿಂಬಾಬ್ವೆ ವಿರುದ್ದದ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಕೆ.ಎಲ್. ರಾಹುಲ್ ಮುನ್ನಡೆಸುವ ಸಾಧ್ಯತೆಗಳಿವೆ.
![Team India - ಜಿಂಬಾಬ್ವೆ ಸರಣಿಗೆ ಕೆ.ಎಲ್. ರಾಹುಲ್ ಕ್ಯಾಪ್ಟನ್..?? 4 kl rahul bengalaru nca sports karnataka](http://sportskarnataka.com/wp-content/uploads/2022/07/kl-rahul-1-196x300.jpg)
ಸದ್ಯ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಕೆ.ಎಲ್. ರಾಹುಲ್ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಅಲ್ಲದೆ ಈ ವಾರಂತ್ಯದಲ್ಲಿ ಅವರಿಗೆ ಫಿಟ್ ನೆಸ್ ಟೆಸ್ಟ್ ಕೂಡ ನಡೆಯಲಿದೆ.
ಈಗಾಗಲೇ ವೆಸ್ಟ್ ಇಂಡೀಸ್ ವಿರುದ್ದದ ಟಿ-20 ಸರಣಿಗೆ ಕೆ.ಎಲ್. ರಾಹುಲ್ ಆಯ್ಕೆಯಾಗಿದ್ದಾರೆ. ಹೀಗಾಗಿ ಫಿಟ್ ನೆಸ್ ಟೆಸ್ಟ್ ನಲ್ಲಿ ಪಾಸಾದ್ರೆ ರಾಹುಲ್ ವೆಸ್ಟ್ ಇಂಡೀಸ್ ವಿರುದ್ದದ ಐದು ಪಂದ್ಯಗಳನ್ನು ಆಡಲಿದ್ದಾರೆ.
ನಂತರ ಜಿಂಬಾಬ್ವೆ ಪ್ರವಾಸ ನಡೆಯಲಿದೆ. ಹೀಗಾಗಿ ಐದು ಪಂದ್ಯಗಳನ್ನು ಆಡಿದ ನಂತರ ಕೆ.ಎಲ್. ರಾಹುಲ್ ಅವರಿಗೆ ವಿಶ್ರಾಂತಿ ನೀಡುವುದು ಅನುಮಾನವಾಗಿದೆ.
ಆದ್ರೆ ರೋಹಿತ್ ಶರ್ಮಾ ಸೇರಿದಂತೆ ಹಲವು ಕ್ರಿಕೆಟಿಗರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಯಾಕಂದ್ರೆ ಮುಂದಿನ ಏಷ್ಯಾಕಪ್ ಟೂರ್ನಿಯಲ್ಲು ಆಡಬೇಕಾಗುತ್ತದೆ.
ಹೀಗಾಗಿ ಕೆ.ಎಲ್. ರಾಹುಲ್ ಅವರಿಗೆ ಮತ್ತೊಮ್ಮೆ ಟೀಮ್ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಸಿಗುವ ಸಾಧ್ಯತೆಗಳಿವೆ. ಈ ಹಿಂದೆ ಕೂಡ ಟೀಮ್ ಇಂಡಿಯಾವನ್ನು ಮುನ್ನೆಡೆಸಿರುವ ಕೆ.ಎಲ್. ರಾಹುಲ್ ಯಶ ಸಾಧಿಸಿರಲಿಲ್ಲ. ಆದ್ರೆ ಐಪಿಎಲ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮುನ್ನಡೆಸಿ ಯಶ ಸಾಧಿಸಿದ್ದರು.