Commonwealth Games ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಸ್ತ್ರಿ ಶಕ್ತಿ ಯಾರು ಗೊತ್ತಾ ?

1978ರ ಕಾಮನ್ ವೆಲ್ತ್ ಗೇಮ್ಸ್ ನ ಮಹಿಳಾ ಬ್ಯಾಡ್ಮಿಂಟನ್ ಟೂರ್ನಿಯ ಡಬಲ್ಸ್ ನಲ್ಲಿ ಭಾರತ ಮೊದಲ ಬಾರಿಗೆ ಪದಕವನ್ನು ಗೆದ್ದುಕೊಂಡಿತ್ತು.
ಭಾರತದ ಆಮಿ ಘಿಯಾ ಮತ್ತು ಕನ್ವಾಲ್ ಥಾಕರ್ ಸಿಂಗ್ ಅವರು ಪದಕ ಗೆಲ್ಲುತ್ತಾರೆ ಯಾರು ಕೂಡ ಊಹೆ ಮಾಡಿರಲಿಲ್ಲ. ಮೊದಲ ಸುತ್ತಿನಲ್ಲೇ ಸೋಲು ಅನುಭವಿಸುತ್ತಾರೆ ಅಂದುಕೊಂಡವರನ್ನು ಬೆರಗುಗೊಳಿಸಿದ್ದು ಆಮಿ ಘಿಯಾ ಮತ್ತು ಕನ್ವಲ್ ಥಾಕರ್ ಸಿಂಗ್. ಕೆನಡಾದ ಎಡ್ಮಂಟನ್ ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಆಮಿ ಘಿಯಾ ಮತ್ತು ಕನ್ವಲ್ ಥಾಕರ್ ಸಿಂಗ್ ಅವರು ಸೆಮಿ ಫೈನಲ್ ನಲ್ಲಿ ಸೋಲು ಅನುಭವಿಸಿದ್ರು. ಆದ್ರೆ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದ್ರು. ಅಲ್ಲದೆ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿ ಪದಕ ಗೆದ್ದ ಭಾರತ ಮಹಿಳಾ ಕ್ರೀಡಾಪಟುಗಳು ಎಂಬ ಹೆಸರು ಇತಿಹಾಸ ಪುಟದಲ್ಲಿ ಸೇರಿಕೊಂಡಿವೆ.

ಅಂದ ಹಾಗೇ ಆಮಿ ಘಿಯಾ ಮತ್ತು ಕನ್ವಲ್ ಥಾಕರ್ ಸಿಂಗ್ ಅವರಿಗೆ ಇದು ಮೊಟ್ಟ ಮೊದಲ ಅಂತಾರಾಷ್ಟ್ರೀಯ ಟೂರ್ನಿಯಾಗಿತ್ತು
ಅಷ್ಟೇ ಅಲ್ಲ, ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಮಹಿಳಾ ಆಟಗಾರ್ತಿರು ಎಂ¨ ಗೌರವಕ್ಕೂ ಪಾತ್ರರಾಗಿದ್ದರು. ಹಾಗೇ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿದ್ದ ಎರಡನೇ ಭಾgತÀ ಆಟಗಾರ್ತಿರು ಕೂಡ ಹೌದು. ಈ ಹಿಂದೆ ಅಂದ್ರೆ 1958ರಲ್ಲಿ ಸ್ಟೇಫಾನೇಯ್ ಡಿಸೋಜಾ ಮತ್ತು ಎಲಿಝಬೇತ್ ಡೆವನ್‍ಪಾರ್ಟ್ ಅವರು ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
1978ರ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಒಟ್ಟು 15 ಪದಕಗಳನ್ನು ಗೆದ್ದುಕೊಂಡಿತ್ತು. ಇದರಲ್ಲಿ ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಆರು ಕಂಚಿನ ಪದಕಗಳಿದ್ದವು.