Team India – ಜಸ್ಟೀಸ್ ಫಾರ್ ಸಂಜು ಸ್ಯಾಮ್ಸನ್..!
ಸಂಜು ಸ್ಯಾಮ್ಸನ್.. ನಮ್ಮ ಪಕ್ಕದ ಕೇರಳದ ಹುಡುಗ. ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ನಾಯಕ. ಅಷ್ಟೇ ಅಲ್ಲ, ಇದೀಗ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವ ರಾಹುಲ್ ದ್ರಾವಿಡ್ ಅವರ ನೆಚ್ಚಿನ ಶಿಷ್ಯ.
ಯಾವುದೇ ಗಾಡ್ ಫಾದರ್ ಗಳ ಸಹಾಯವಿಲ್ಲದೇ ಕ್ರಿಕೆಟ್ ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮೆನ್.
ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ್ರೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಈಗಾಗಲೇ ಒಂದೇ ಒಂದು ಏಕದಿನ ಪಂದ್ಯವನ್ನು ಆಡಿರುವ ಸಂಜು ಸ್ಯಾಮ್ಸನ್ 46 ರನ್ ಕೂಡ ದಾಖಲಿಸಿದ್ದಾರೆ. ಅದೇ ರೀತಿ 14 ಟಿ-20 ಪಂದ್ಯಗಳಲ್ಲಿ 251 ರನ್ ಗಳಿಸಿದ್ದಾರೆ. ಅದರಲ್ಲೂ ಐರ್ಲೆಂಡ್ ವಿರುದ್ಧ ಅಬ್ಬರದ 77 ರನ್ ಸಿಡಿಸಿ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹೀಗಾಗಿ ಸಂಜು ಸ್ಯಾಮ್ಸನ್ ಅವರು ಇಂಗ್ಲೆಂಡ್ ವಿರುದ್ದದ ಮೊದಲ ಟಿ-20 ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಆದ್ರೆ ಎರಡು ಮತ್ತು ಮೂರನೇ ಟಿ-20 ಪಂದ್ಯಗಳಿಗೆ ಆಯ್ಕೆ ಮಾಡಿಲ್ಲ.
ಇದೀಗ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿರುವುದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಟೀಕೆಗಳು ಕೇಳಿಬರುತ್ತಿವೆ. ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ದ ಕ್ರಿಕೆಟ್ ಅಭಿಮಾನಿಗಳು ನಾನಾ ರೀತಿಯ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಅಲ್ಲದೆ ಜಸ್ಟೀಸ್ ಫಾರ್ ಸಂಜು ಸ್ಯಾಮ್ಸನ್ ಎಂದು ಅಭಿಯಾನವನ್ನು ಶುರು ಮಾಡಿದ್ದಾರೆ.
ಸಂಜು ಸ್ಯಾಮ್ಸನ್ ಗೆ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಅನ್ಯಾಯ ಮಾಡುತ್ತಿದೆ. ಸಂಜು ಸ್ಯಾಮ್ಸನ್‍ನಂತಹ ಆಟಗಾರ ಪ್ರತಿಭೆ ಮತ್ತು ಸಾಮಥ್ರ್ಯಕ್ಕೆ ತಕ್ಕಂತೆ ಅವಕಾಶ ಸಿಗುತ್ತಿಲ್ಲ ಎಂದು ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. Team india – Justice for Sanju Samson’ trends as wicket-keeper batter
ಈ ನಡುವೆ, ಈ ಬಾರಿಯ ಐಪಿಎಲ್ ನಲ್ಲಿ ಸಂಜು ಸ್ಯಾಮ್ಸನ್ ಅವರು ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಫೈನಲ್ ನಲ್ಲಿ ಎಡವಿದ್ರೂ ಸಂಜು ಸ್ಯಾಮ್ಸನ್ ನಾಯಕನಾಗಿ ಯಶ ಸಾಧಿಸಿದ್ದಾರೆ.
ಒಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಲ್ಲಿ ದಕ್ಷಿಣ ಭಾರತದ ಕ್ರಿಕೆಟಿಗರನ್ನು ಕಡೆಗಣಿಸುತ್ತಿರುವುದು ಇದೇನೂ ಹೊಸತಲ್ಲ. ಬಹುಶಃ ಮಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ದಕ್ಷಿಣ ಭಾರತದ ಹೆಚ್ಚಿನ ಆಟಗಾರರಿಗೆ ಅವಕಾಶ ಸಿಗುತ್ತಿತ್ತು. ಆನಂತರ ಅದು ಕರ್ನಾಟಕವಾಗಿರಲಿ, ಕೇರಳವಾಗಿರಲಿ, ತಮಿಳುನಾಡು, ಆಂಧ್ರಪ್ರದೇಶವೇ ಆಗಿರಲಿ. ಪ್ರತಿಭಾವಂತ ಆಟಗಾರರಿಗೆ ಅವಕಾಶ ಸಿಕ್ಕಿದ್ದು ತೀರಾ ಕಡಿಮೆ.
ಒಟ್ಟಿನಲ್ಲಿ ಸಂಜು ಸ್ಯಾಮ್ಸನ್ ನತದೃಷ್ಟ ಕ್ರಿಕೆಟಿಗ. ಪ್ರತಿಭೆ ಮತ್ತು ಸಾಮಥ್ರ್ಯ ಇದ್ರೂ ಕೂಡ ಸೂಕ್ತ ರೀತಿಯಲ್ಲಿ ಅವಕಾಶ ಸಿಗದೇ ಇರೋದು ವಿಪರ್ಯಾಸವೇ ಸರಿ.