ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರು ಮಲೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್ ನಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಿಂಧು 21-13, 15-21, 13-21 ರಿಂದ ತೈ ಜು ಯಿಂಗ್ ವಿರುದ್ಧ 53 ನಿಮಿಷಗಳ ಹೋರಾಟದಲ್ಲಿ ಸೋಲು ಕಂಡರು.

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ, ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಸಾಧನೆ ಮಾಡಿರುವ ಸಿಂದು ಆರಂಭದಲ್ಲಿ ಭರ್ಜರಿ ಪ್ರದರ್ಶನ ನೀಡಿದರು. ಈ ಗೇಮ್ ನಲ್ಲಿ ಎದುರಾಳಿ ಆಟಗಾರ್ತಿ ಅಂಕ ಕಲಾ ಹಾಕುವಲ್ಲಿ ಹಿಂದೆ ಬಿದ್ದರು. ಪರಿಣಾಮ ಮೊದಲಾವಧಿಯಲ್ಲಿ ಮುನ್ನಡೆ ಸಾಧಿಸಿ ಗೇಮ್ ಗೆದ್ದರು.

ಎರಡನೇ ಗೇಮ್ ನಲ್ಲಿ ಸಿಂಧು ಅಂಕಗಳಿಕೆಯಲ್ಲಿ ಹಿನ್ನಡೆ ಅನುಭವಿಸಿದರು. ಪಂದ್ಯದ ಯಾವುದೇ ಸಮಯದಲ್ಲಿ ಸಿಂಧು ಎದುರಾಳಿಯ ಸವಾಲು ಮೆಟ್ಟಿ ನಿಲ್ಲಲಿಲ್ಲ. ಪರಿಣಾಮ ಎದುರಾಳಿ ಆಟಗಾರ್ತಿಯ ಕೈ ಮೇಲಾಯಿತು. ಮೂರನೇ ಹಾಗೂ ಕೊನೆಯ ಗೇಮ್ ನಲ್ಲಿ ಸಿಂಧು ಆರಂಭದಲ್ಲಿ ಪ್ರತಿರೋಧ ಒಡ್ಡಿದರು. ಆದರೆ, ತೈ ಜು ಯಿಂಗ್ ಸೊಗಸಾದ ಆಟ ಆಡಿ ಅಂಕಗಳನ್ನು ಕಲೆ ಹಾಕಿ ಗೇಮ್ ಗೆದ್ದ ಬೀಗಿದರು.