ಎಂ.ಎಸ್.ಧೋನಿಯ ನಂತರ ಟೀಮ್ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸಲು ವಿರಾಟ್ ಕೊಹ್ಲಿ ಸಿಕ್ಕಿದ್ದರು. ವಿರಾಟ್ ಕೊಹ್ಲಿಯ ಬಳಿಕ ರೋಹಿತ್ ಶರ್ಮಾ ಆ ಕೆಲಸ ನಿಭಾಯಿಸುತ್ತಿದ್ದಾರೆ. ಆದರೆ ರೋಹಿತ್ ಶರ್ಮಾ ಬಳಿಕ ಯಾರು ಅನ್ನುವ ಪ್ರಶ್ನೆಗೆ ಉತ್ತರ ಹಲವಾರು ಆಯ್ಕೆಗಳಿವೆ. ಟೀಮ್ ಇಂಡಿಯಾವನ್ನು ಮುನ್ನಡೆಸಬಲ್ಲ ಆಟಗಾರರ ದಂಡೇ ಇದೆ.
ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಟೀಮ್ ಇಂಡಿಯಾದ ಉಪ ನಾಯಕ. ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ರಾಹುಲ್ ರೋಹಿತ್ಗೆ ಡೆಪ್ಯುಟಿಯಾಗಿ ಕೆಲಸ ಮಾಡುತ್ತಾರೆ. ರಾಹುಲ್ ಕೂಡ ಟೀಮ್ ಇಂಡಿಯಾವನ್ನು ರೋಹಿತ್ ಅನುಪಸ್ಥಿತಿಯಲ್ಲಿ ಮುನ್ನಡೆಸಿದ್ದಾರೆ. ಆದರೆ ರಾಹುಲ್ ಕೂಡ ರೋಹಿತ್ ರಂತೆ ಪದೇ ಪದೇ ಗಾಯಗೊಳ್ಳುತ್ತಿರುವುದು ಒಂದೇ ಬಿಸಿಸಿಐಗೆ ಚಿಂತೆ.
ಜಸ್ಪ್ರಿತ್ ಬುಮ್ರಾ ಈಗ ಎಡ್ಜ್ಬಾಸ್ಟನ್ನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೆಸ್ಟ್ ತಂಡದ ಉಪನಾಯಕನಾಗಿರುವ ಜಸ್ಪ್ರಿತ್ ಮೊದಲ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ. ಹೀಗಾಗಿ ಬುಮ್ರಾ ಕೂಡ ಟೀಮ್ ಇಂಡಿಯಾದ ಕ್ಯಾಪ್ಟನ್ಸಿ ಗ್ಯಾಂಗ್ನಲ್ಲಿದ್ದಾರೆ.