ಕಳೆದ ಟಿ20 ವಿಶ್ವಕಪ್ನಲ್ಲಿ (T20 World Cup) ಟೀಮ್ ಇಂಡಿಯಾ (Team India) ಲೀಗ್ ಹಂತದಲ್ಲೇ ಮಕಾಡೆ ಮಲಗಿತ್ತು. ಆದರೆ ಈ ಬಾರಿ ತಪ್ಪು ತಿದ್ದಿಕೊಳ್ಳಬೇಕು ಅನ್ನುವ ಹಠಕ್ಕೆ ಬಿದ್ದಿದೆ. ಆಸ್ಟ್ರೇಲಿಯಾದಲ್ಲಿ (Australia) ಹೇಗಾದರೂ ಮಾಡಿಕಪ್ ಗೆಲ್ಲಬೇಕು ಅನ್ನುವ ಪ್ಲಾನ್ ಮಾಡಿದೆ. ತಂಡವನ್ನು ಅದಕ್ಕಾಗಿ ಸಜ್ಜುಗೊಳಿಸುತ್ತಿದೆ.
ಟಿ20 ಕ್ರಿಕೆಟ್ಗೆ ಬಿಸಿಸಿಐ (BCCI) ತನ್ನ ತಂಡವನ್ನುಈಗಾಗಲೇ ಆಯ್ಕೆ ಮಾಡಿಕೊಂಡಂತಿದೆ. ಯಾಕಂದರೆ ಹಲವು ಆಟಗಾರರನ್ನು ಪ್ರಯೋಗ ಮಾಡಿದೆ. ತನಗೆ ಬೇಕಾಗಿರುವ ಆಟಗಾರರ ಬ್ಲೂ ಪ್ರಿಂಟ್ (Blue Print) ಸಜ್ಜು ಮಾಡಿಕೊಂಡಿದೆ. ರಾಹುಲ್ ದ್ರಾವಿಡ್ (Rahul Dravid) ಮತ್ತು ರೋಹಿತ್ ಶರ್ಮಾ (Rohit Sharma) ಜೊತೆಯಾದಾಗ ಟೀಮ್ ಇಂಡಿಯಾದ ಮುಂದೆ 21 ಟಿ20 ಪಂದ್ಯಗಳಿದ್ದವು. ಆದರೆ ಈಗ ಉಳಿದಿರುವುದು ಕೇವಲ 5 ಮಾತ್ರ.
ವೆಸ್ಟ್ಇಂಡೀಸ್ ವಿರುದ್ಧದ 5 ಟಿ20 ಪಂದ್ಯಗಳು ಟೀಮ್ ಇಂಡಿಯಾದ ಪಾಲಿಗೆ ಸದ್ಯಕ್ಕೆ ಟಿ20 ವಿಶ್ವಕಪ್ಗೆ ಮುನ್ನ ಶೆಡ್ಯೂಲ್ ಆಗಿರುವ ಕಟ್ಟ ಕಡೆಯ ಪಂದ್ಯಗಳು. ಇಲ್ಲಿ ಯಶಸ್ಸು ಕಂಡರೆ ಆಲ್ಮೋಸ್ಟ್ ಆಸ್ಟ್ರೇಲಿಯಾಕ್ಕೆ ಆಟಗಾರರು ಟಿಕೆಟ್ ಬುಕ್ ಮಾಡಿಕೊಳ್ಳುವುದು ಖಚಿತ. ಯಾಕಂದರೆ ವೆಸ್ಟ್ಇಂಡೀಸ್ನಲ್ಲಿ (West Indies )5 ಪಂದ್ಯಗಳನ್ನು ಆಡಿದ ಬಳಿಕ ಟೀಮ್ ಇಂಡಿಯಾ ಟಿ20 ಆಡುವುದು ಆಸ್ಟ್ರೇಲಿಯಾದಲ್ಲೇ.

ಟೀಮ್ ಇಂಡಿಯಾ ಸದ್ಯ ಟಿ20 ವಿಶ್ವಕಪ್ನ ಫೆವರೀಟ್ ತಂಡಗಳ ಪಟ್ಟಿಯಲ್ಲಿದೆ. ಯಾಕಂದರೆ ಕಳೆದ ವಿಶ್ವಕಪ್ ಬಳಿಕ ಭಾರತ ನ್ಯೂಜಿಲೆಂಡ್, ವೆಸ್ಟ್ಇಂಡೀಸ್ (West Indies), ಶ್ರೀಲಂಕಾ (Srilanka) ವಿರುದ್ಧ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಇಂಗ್ಲೆಂಡ್ನಲ್ಲೂ ಟಿ20 ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ. ಭಾರತದಷ್ಟು ಪಂದ್ಯವನ್ನು ಬೇರೆ ಯಾವ ತಂಡವೂ ಗೆದ್ದಿಲ್ಲ.
ಟಿ20 ವಿಶ್ವಕಪ್ನಲ್ಲಿ ಭಾರತ ಸೂಪರ್ 12ಗೆ ನೇರ ಪ್ರವೇಶ ಪಡೆದುಕೊಂಡಿದೆ. ಈ ಬಾರಿಯೂ ಪಾಕಿಸ್ತಾನವೇ (Pakistan) ಮೊದಲ ಎದುರಾಳಿ. ಹೀಗಾಗಿ ಟೀಮ್ ಇಂಡಿಯಾ ದೊಡ್ಡ ತಯಾರಿಯನ್ನು ಮಾಡಿಕೊಂಡೇ ಕಣಕ್ಕಿಳಿಯಬೇಕಿದೆ. ಆಟಗಾರರಿಗೆ ಟೀಮ್ ಮ್ಯಾನೇಜ್ಮೆಂಟ್ ಏನು ಬೇಕು ಅನ್ನುವುದನ್ನು ತಿಳಿಸಿಕೊಟ್ಟಿದೆ. ಹೀಗಾಗಿ ಆಟ ಆಡುವುದು ಒಂದೆ ಬಾಕಿ ಇದೆ.