Singapore open: ಸೈನಾ, ಸಿಂಧು, ಪ್ರಣಯ್ ಕ್ವಾರ್ಟರ್‌ಗೆ
ಒಲಂಪಿಕ್ ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್, ಎರಡು ಬಾರಿ ಒಲಂಪಿಕ್ ಪದಕ ಪಡೆದ ಪಿ.ವಿ.ಸಿಂಧು ಹಾಗೂ ಉತ್ತಮ ಫಾರ್ಮ್ ನಲ್ಲಿರುವ ಎಚ್.ಎಸ್.ಪ್ರಣಯ್, ಇಲ್ಲಿ ನಡೆದಿರುವ ಸಿಂಗಾಪುರ್ ಓಪನ್ ಸೂಪರ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಹಂತ ಕಂಡಿದ್ದಾರೆ.
ಮಹಿಳಾ ವಿಭಾಗದ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೈನಾ ನೆಹ್ವಾಲ್ 21-19, 11-21, 21-17 ರಿಂದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಚೀನಾದ ಹಿ ಬಿಂಗ್ ಜಿಯಾವೋ ಅವರನ್ನು ಮೂರು ಸೆಟ್‌ಗಳ ಸೆಣಸಾಟದಲ್ಲಿ ಸೋಲಿಸಿ ಮುನ್ನಡೆದರು.

ಮೂರನೇ ಶ್ರೇಯಾಂಕದ ಪಿ.ವಿ.ಸಿಂಧು 19-21, 21-19, 21-18 ರಿಂದ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 59 ನೇ ಸ್ಥಾನದಲ್ಲಿರುವ ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ಅವರನ್ನು ಎರಡು ಗಂಟೆ ಆರು ನಿಮಿಷ ನಡೆದ ತೀವ್ರ ಪೈಪೋಟಿಯಲ್ಲಿ ಸದೆ ಬಡೆದರು.
ಮೊದಲ ಗೇಮ್‌ನಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆದು, ಪ್ರತಿ ಅಂಕಕ್ಕೂ ತೀವ್ರ ಪೈಪೋಟಿ ನಡೆಯಿತು. ಅಂತಿಮವಾಗಿ ಗೇಮ್‌ನ್ನು 21-19 ರಿಂದ ಸಿಂಧು ಗೆದ್ದರು. ಎರಡನೇ ಗೇಮ್‌ನಲ್ಲಿ ಕೂಡ ಸೆಣಸಾಟ ನಡೆಯಿತು. ಗೇಮ್ ಅನ್ನು 21-19 ರಿಂದ ಜಯಿಸಿದ ವಿಯೆಟ್ನಾಂನ ಥುಯ್ ಲಿನ್ ನ್ಗುಯೆನ್ ಜಯಿಸಿದರು.

ನಿರ್ಣಾಯಕ ಎನಿಸಿದ್ದ ಮೂರನೇ ಗೇಮ್‌ನಲ್ಲಿ ಉಭಯ ಆಟಗಾರ್ತಿಯರು ಸಮಬಲ ಪೈಪೋಟಿ ನೀಡಿದ್ದರಿಂದ ಗೇಮ್ ತೀವ್ರ ಕುತೂಹಲ ಕೆರಳಿಸಿತು. ಅಂತಿಮವಾಗಿ 21-18 ರಿಂದ ಜಯಿಸಿದ ಪಿ.ವಿ.ಸಿಂಧು ಕ್ವಾರ್ಟರ್ ಫೈನಲ್ ಹಂತ ತಲುಪಿದರು. ಎಂಟರ ಹಂತದ ಪಂದ್ಯದಲ್ಲಿ ಸಿಂಧು, ಚೀನಾದ ಹಾನ್ ಯುಯೆ ಅವರನ್ನು ಎದುರಿಸಲಿದ್ದಾರೆ.

ವಿಶ್ವ ರ‍್ಯಾಂಕಿಂಗ್‌ನಲ್ಲಿ 19 ನೇ ಸ್ಥಾನದಲ್ಲಿರುವ ಎಚ್.ಎಸ್.ಪ್ರಣಯ್ 14-21, 22-20, 21-18 ರಿಂದ ಎರಡನೇ ಸುತ್ತಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಚೈನೀಸ್ ತೈಪೆಯ ಚೌ ಟಿಯೆನ್ ಅವರನ್ನು ಸೋಲಿಸಿ ಎಂಟರ ಘಟ್ಟ ಕಂಡರು.
Singapore Open, Pv Sindhu, Saina Nehwal, Hs Prannoy