ಟೀಮ್ ಇಂಡಿಯಾಕ್ಕೆ ಈಗ ಮತ್ತೊಂದು ಮಾಡು ಇಲ್ಲವೆ ಮಡಿ ಪಂದ್ಯ. ರಾಜ್ಕೋಟ್ನಲ್ಲಿ ಗೆದ್ದರೆ ಭಾನುವಾರ ಸಿಲಿಕಾನ್ ಸಿಟಿಯಲ್ಲಿ ನಡೆಯುವ ಪಂದ್ಯ ಅಕ್ಷರಶಃ ಫೈನಲ್ ಮ್ಯಾಚ್. ಆದರೆ ರಾಜ್ಕೋಟ್ನಲ್ಲಿ ರಾಜನಾಗುವುದು ಅಷ್ಟು ಸುಲಭವಲ್ಲ. ಟೀಮ್ ಇಂಡಿಯಾದ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಗೆಲುವು ಕಷ್ಟ.
ಬ್ಯಾಟಿಂಗ್ನಲ್ಲಿ ಅಸ್ಥಿರತೆ:
ಟೀಮ್ ಇಂಡಿಯಾ ಬ್ಯಾಟಿಂಗ್ ದೊಡ್ಡ ಸಮಸ್ಯೆ ಆಗಿದೆ. ಓಪನರ್ಗಳಿಂದ ಉತ್ತಮ ಆರಂಭ ಬಂದರೆ ಮಿಡಲ್ ಆರ್ಡರ್ ಕೈ ಕೊಡುತ್ತದೆ. ಮಿಡಲ್ ಆರ್ಡರ್ ಉತ್ತಮ ಪ್ರದರ್ಶನ ನೀಡಿದರೆ ಟಾಪ್ ಆರ್ಡರ್ ಕ್ಲಿಕ್ ಅಗುವುದಿಲ್ಲ. ಹೀಗಾಗಿ ಸಂಘಟಿತವಾಗಿ ಬ್ಯಾಟಿಂಗ್ ಬಲ ಕ್ಲಿಕ್ ಆಗಬೇಕಿದೆ.
ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್ ಮತ್ತು ರಿಷಬ್ ಪಂತ್ ಬ್ಯಾಟ್ನಿಂದ ಸ್ಥಿರ ಆಟ ಬರಬೇಕಿದೆ. ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯಾ ಸ್ಥಿರ ಪ್ರದರ್ಶನ ನೀಡಿದ್ದಾರೆ. ದಿನೇಶ್ ಕಾರ್ತಿಕ್ ಬಲವೂ ಇದೆ. ಹೀಗಾಗಿ ಬ್ಯಾಟಿಂಗ್ ಮೇಲೆ ಒತ್ತಡವಂತೂ ಇದ್ದೇ ಇದೆ.
ಬೌಲಿಂಗ್ನಲ್ಲೂ ಇದೆ ವೀಕ್ನೆಸ್
ವಿಶಾಖಪಟ್ಟಣಂನಲ್ಲಿ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಬೌಲಿಂಗ್ನಿಂದ ಕಟ್ಟಿ ಹಾಕಿರಬಹುದು. ಹಾಗಂತ ಎಲ್ಲಾ ವೈಫಲ್ಯಗಳು ಮುಚ್ಚಿಹೋಗಿವೆ ಅಂದರೆ ತಪ್ಪು. ಯಾಕಂದರೆ ಭುವನೇಶ್ವರ್ ಜೊತೆ ಬೌಲಿಂಗ್ ಆರಂಭಿಸುವ ಮತ್ತೊಬ್ಬ ಬೌಲರ್ ಕಡೆಯಿಂದ ವಿಕೆಟ್ ಬಿದ್ದಿಲ್ಲ. ಸ್ಪಿನ್ ವಿಭಾಗದಲ್ಲಿ ಅಕ್ಸರ್ ಮತ್ತು ಚಹಲ್ ಕೊನೆಯ ಪಂದ್ಯ ಬಿಟ್ಟರೆ ದೆಹಲಿ ಮತ್ತು ಕಟಕ್ನಲ್ಲಿ ವೈಫಲ್ಯ ಕಂಡಿದ್ದರು. ಆರನೇ ಬೌಲರ್ ಆಗಿ ಹಾರ್ದಿಕ್ ಪರೀಕ್ಷೆ ಯಶಸ್ಸು ಕಂಡಿಲ್ಲ.
ವಿಶಾಖಪಟ್ಟಣಂನಲ್ಲಿ ಗೆದ್ದ ಮೇಲೆ ಟೀಮ್ ಇಂಡಿಯಾ ಫರ್ಫೆಕ್ಟ್ ಆಗಿದೆ ಎಂದು ಹೇಳಿದರು ಅದು ತಮಾಷೆ ಮಾತಾದೀತು. ಯಾಕಂದರೆ ದಕ್ಷಿಣ ಆಫ್ರಿಕಾ ಭಾರತ ತಂಡ ಬಿಟ್ಟುಕೊಡುವ ಸಣ್ಣ ವೀಕ್ನೆಸ್ ಮೇಲೆ ಸವಾರಿ ಮಾಡಲು ಕಾದು ಕುಳಿತಿದೆ.