ಟೀಮ್ ಇಂಡಿಯಾದ ಕ್ಯಾಪ್ಟನ್ ಆಗುವುದೇ ಅದೃಷ್ಟ. ಎಲ್ಲರಿಗೂ ಟೀಮ್ ಇಂಡಿಯಾದ ನಾಯಕತ್ವ ಸಿಗುವುದು ಕಷ್ಟವೇ. ಆದರೆ ಕಳೆದ ೮ ತಿಂಗಳಲ್ಲಿ ೮ ಆಟಗಾರರು ಟೀಮ್ ಇಂಡಿಯಾದ ನಾಯಕರಾಗಿದ್ದಾರೆ. ಇದು ವಿಶ್ವ ಕ್ರಿಕೆಟ್‌ನಲ್ಲೇ ಹೊಸತು.
ರೋಹಿತ್ ಶರ್ಮಾ ಟೀಮ್ ಇಂಡಿಯಾದ ಪರ್ಮನೆಂಟ್ ನಾಯಕ, ಆದರೆ ರೋಹಿತ್ ಇಲ್ಲದಿದ್ದಾಗ ಬೇರೆ ಆಟಗಾರರು ತಂಡವನ್ನು ಮುನ್ನಡೆಸಿದ್ದಾರೆ. ಐರ್ಲೆಂಡ್ ಮತ್ತು ಶ್ರೀಲಂಕಾ ಪ್ರವಾಸದ ವೇಳೆ ಹೊಸ ಆಟಗಾರರ ನಾಯಕತ್ವ ಟೆಸ್ಟ್ ಮಾಡಲು ವೇದಿಕೆ ಸಿಕ್ಕಂತಾಗಿದೆ
ವಿರಾಟ್ ಕೊಹ್ಲಿ- ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ
ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಆ ಬಳಿಕ ವಿರಾಟ್ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ನಿಯೋಜಿತ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆ ಎದುರಿಸಿದ್ದರು. ಹೀಗಾಗಿ ಕೆ.ಎಲ್. ರಾಹುಲ್ ತಂಡವನ್ನು ಮುನ್ನಡೆಸಿದರು.

ರೋಹಿತ್ ಶರ್ಮಾ ತವರಿನಲ್ಲಿ ಶ್ರೀಲಂಕಾ ವಿರುದ್ಧ ಹಾಗೂ ವೆಸ್ಟ್‌ಇಂಡೀಸ್ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯಲ್ಲಿ ಶರ್ಮಾ ಯಶಸ್ಸು ಕಂಡಿದ್ದರು.

ಶಿಖರ್ ಧವನ್ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಆಡುತ್ತಿದ್ದಾಗ ನಾಯಕನಾಗಿ ತಂಡವನ್ನು ಶ್ರೀಲಂಕಾದಲ್ಲಿ ಮುನ್ನಡೆಸಿದ್ದರು. ಈ ಸರಣಿ ವೇಳೆ ರವಿಶಾಸ್ತ್ರಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ಇಂಗ್ಲೆಂಡ್‌ನಲಿದ್ದರೆ, ರಾಹುಲ್ ದ್ರಾವಿಡ್ ಶಿಖರ್ ಧವನ್ ನೇತೃತ್ವದ ಟೀಮ್ ಇಂಡಿಯಾದ ಜೊತೆಹಗಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೆ ಬಿಸಿಸಿಐ ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ರಾಹುಲ್‌ಗೆ ನಾಯಕತ್ವ ನೀಡಿತ್ತು. ಆದರೆ ರಾಹುಲ್ ಗಾಯಗೊಂಡರು. ರಿಷಬ್ ಪಂತ್ ತಂಡವನ್ನು ಮುನ್ನಡೆಸಿದರು.

ಈಗ ಐರ್ಲೆಂಡ್ ವಿರುದ್ಧದ ಸರಣಿಗೆ ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದಾರೆ. ರೋಹಿತ್ ಸೇರಿದಂತೆ ಅನುಭವಿ ನಾಯಕರು ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡಲು ಸಜ್ಜಾಗಿರುವುದರಿಂದ ಹಾರ್ದಿಕ್‌ಗೆ ಈ ಭಾಗ್ಯ ಒಲಿದಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾ ಹೊಸ ಹೊಸ ನಾಯಕರನ್ನು ಕಾಣುತ್ತಿದೆ. ಆಟಗಾರರ ಸ್ಟ್ರೆಂಗ್ತ್ ಮಾತ್ರವಲ್ಲ, ನಾಯಕರ ಅಗ್ನಿಪರೀಕ್ಷೆಯೂ ನಡೆಯುತ್ತಿದೆ.