ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನುಎದುರಿಸಲು ಟೀಮ್ ಇಂಡಿಯಾ ಸಂಪೂರ್ಣವಾಗಿ ಸಜ್ಜಾಗಿತ್ತು. ಆದರೆ ಪಂದ್ಯಕ್ಕೂ ಮೊದಲೇ ಡಬಲ್ ಶಾಕ್ಗೆ ಒಳಗಾಗಿದೆ. ರೋಹಿತ್ ಅನುಪಸ್ಥಿತಿಯಲ್ಲಿ ನಾಯಕನಾಗಿದ್ದ ಕೆ.ಎಲ್. ರಾಹುಲ್ ಮತ್ತು ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಗಾಯದಿಂದ ಹೊರ ಬಿದ್ದಿದ್ದು ತಂಡಕ್ಕೆ ನಷ್ಟ. ಆದರೆ ಹೊಸ ನಾಯಕ ರಿಷಬ್ ಪಂತ್ಗೆ ತವರಿನಲ್ಲೇ ನಾಯಕತ್ವ ಸಿಕ್ಕಿದೆ. ಮೊದಲ ಪಂದ್ಯದಲ್ಲೇ ಗೆಲುವಿನ ಕನಸು ತಂಡಕ್ಕಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ದೆಹಲಿಯ ಫಿರೋಜ್ ಷಾ ಕೋಟ್ಲಾದಲ್ಲಿ ನಡೆಯಲಿದೆ. ರುತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶಾನ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ದೀಪಕ್ ಹೂಡ, ಶ್ರೇಯಸ್ ಅಯ್ಯರ್ ಮತ್ತು ನಾಯಕ ರಿಷಬ್ ಪಂತ್ ಟಾಪ್ ಆರ್ಡರ್ ಬಲ. ಹಾರ್ದಿಕ್ ಪಾಂಡ್ಯಾ, ಅಕ್ಸರ್ ಪಟೇಲ್ ಮತ್ತು ವೆಂಕಟೇಶ್ ಅಯ್ಯರ್ ಆಲ್ರೌಂಡರ್ ಕೋಟಾದಲ್ಲಿ ಆಡಲಿದ್ದಾರೆ. ಭುವಿ ಮತ್ತು ಉಮ್ರನ್ ಮಲಿಕ್ ವೇಗದ ಬೌಲಿಂಗ್ ಹೊಣೆ ಹೊತ್ರೆ, ಯಜುವೇಂದ್ರ ಚಹಲ್ ಸ್ಪೆಷಲಿಸ್ಟ್ ಸ್ಪಿನ್ನರ್.
ದಕ್ಷಿಣ ಆಫ್ರಿಕಾ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ. ಕ್ವಿಂಟಾನ್ ಡಿ ಕಾಕ್, ರಿಜಾ ಹೆಂಡ್ರಿಕ್ಸ್, ನಾಯಕ ತೆಂಬಾ ಬವುಮಾ ಮತ್ತು ಐಡೆನ್ ಮಾರ್ಕ್ ರಾಂ ಸ್ಥಾನ ಫಿಕ್ಸ್. ರಾಸಿ ವ್ಯಾಂಡರ್ ಡ್ಯುಸನ್ ಅವಾ ಟ್ರಿಸ್ಟನ್ ಸ್ಟಬ್ಸ್ ಪೈಕಿ ಒಬ್ಬರು ಆಟಕ್ಕಿಳಿಯಬಹುದು. ಡೇವಿಡ್ ಮಿಲ್ಲರ್ ಫಿನಿಷರ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡ್ವೈನ್ ಪ್ರಿಟೋರಿಯಸ್, ಕಗಿಸೋ ರಬಾಡಾ, ಆನ್ರಿಚ್ ನೋರ್ಟ್ಜೆ, ಲುಂಗಿ ಎನ್ಗಿಡಿ ವೇಗದ ಬೌಲಿಂಗ್ ಆಯ್ಕೆಗಳು. ತಬ್ರೈಸ್ ಶಂಸಿ ಏಕೈಕ ಸ್ಪಿನ್ನರ್.
ಡೆಲ್ಲಿ ಪಿಚ್ ನಿಧಾನಗತಿಯಿಂದ ಕೂಡಿರುವ ಸಾಧ್ಯತೆ ಇದೆ. ಹೀಗಾಗಿ ಸ್ಪಿನ್ನರ್ಗಳು ಟ್ರಂಪ್ ಕಾರ್ಡ್ ಆಗುವುದರಲ್ಲಿ ಸಂಶಯವಿಲ್ಲ.